ಅಂಬರೀಶ್ ಎಷ್ಟೇ ಕೇಳಿದ್ರು ಈ ಕೆಲಸ ಮಾಡಲೇ ನಿರ್ದೇಶಕ ಪ್ರೇಮ್

ರೆಬೆಲ್ ಸ್ಟಾರ್ ಅಂಬರೀಶ್ ಅಂದ್ರೆ ಇಡೀ ಕನ್ನಡ ಇಂಡಸ್ಟ್ರಿಗೆ ಮಾತ್ರವಲ್ಲ ಭಾರತ ಚಿತ್ರರಂಗಕ್ಕೂ ಒಂದು ರೀತಿ ಸ್ನೇಹ, ಅಭಿಮಾನ, ಪ್ರೀತಿ ಇತ್ತು. ಇಂದು ಅಂಬಿ ದೈಹಿಕವಾಗಿ ಇಲ್ಲವಾದರೂ ಅವರ ಅಭಿಮಾನಿಗಳ ಮನದಲ್ಲಿ ಇಂದಿಗೂ ನೆನಪಾಗಿ ಉಳಿದುಕೊಂಡಿದ್ದಾರೆ.

ಅಂಬಿಯ ಅಭಿಮಾನಿ ಬಳಗದಲ್ಲಿ ನಿರ್ದೇಶಕ ಪ್ರೇಮ್ ಕೂಡ ಒಬ್ಬರು. ಪ್ರೇಮ್ ದಂಪತಿ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದ ರೆಬೆಲ್ ಸ್ಟಾರ್ ಗೆ ಒಂದು ಆಸೆ ಈಡೇರಲಿಲ್ಲವಂತೆ. ಈ ವಿಷ್ಯವನ್ನ ಖುದ್ದು ಪ್ರೇಮ್ ಹೇಳಿಕೊಂಡಿದ್ದಾರೆ.

ದುಬೈನಲ್ಲಿ ನಡೆದ 'ದಿ ವಿಲನ್' ಚಿತ್ರದ ಆಡಿಯೋ ರಿಲೀಸ್ ವೇಳೆ ಕೊನೆಯದಾಗಿ ಪ್ರೇಮ್ ಬಳಿ ಆ ವ್ಯಕ್ತಿಯನ್ನ ಭೇಟಿ ಮಾಡಿಸು ಎಂದು ಕೇಳಿದ್ದರಂತೆ. ಆದ್ರೆ, ಆ ವ್ಯಕ್ತಿಯನ್ನ ಭೇಟಿ ಮಾಡಿಸುವಲ್ಲಿ ಪ್ರೇಮ್ ವಿಫಲರಾದರಂತೆ. ಈಗಲೂ ಆ ನೋವು ಕಾಡುತ್ತಿದೆ ಎಂದು ಪ್ರೇಮ್ ತಿಳಿಸಿದ್ದಾರೆ. ಅಷ್ಟಕ್ಕೂ, ಅಂಬಿ ಭೇಟಿಯಾಗದೇ ಉಳಿದುಕೊಂಡ ಆ ವ್ಯಕ್ತಿ ಯಾರು?

ಪ್ರೇಮ್ ತಾಯಿ ಭೇಟಿ ಮಾಡ್ಬೇಕಿತ್ತು

ಪ್ರೇಮ್ ತಾಯಿ ಭೇಟಿ ಮಾಡ್ಬೇಕಿತ್ತು

ನಿರ್ದೇಶಕ ಪ್ರೇಮ್ ಸಿಕ್ಕಾಗೆಲ್ಲಾ ''ನಿಮ್ಮ ಮನೆಗೆ ಯಾವಾಗ ಕರ್ಕೊಂಡು ಹೋಗ್ತೀಯೋ, ನಿಮ್ಮ ಅಮ್ಮನ ಯಾವಾಗ ಭೇಟಿ ಮಾಡಿಸ್ತೀಯಾ ಎಂದು ಕೇಳುತ್ತಿದ್ದರಂತೆ. ಆದ್ರೆ, ಮನೆಯಲ್ಲಿ ಲಿಫ್ಟ್ ಇಲ್ಲದ ಕಾರಣ ಅಂಬರೀಶ್ ಅವರು ನಡೆಯಲು ಕಷ್ಟವಾಗುತ್ತೆ ಎಂಬ ಕಾರಣಕ್ಕೆ ಕರೆದುಕೊಂಡು ಹೋಗ್ತೀನಿ ಅಂತ ಹೇಳ್ತಾ ಇದ್ರಂತೆ ಪ್ರೇಮ್.

ಲಿಫ್ಟ್ ಹಾಕಿದ ಮೇಲೆ ಕರೆದೆ

ಲಿಫ್ಟ್ ಹಾಕಿದ ಮೇಲೆ ಕರೆದೆ

ಆಮೇಲೆ ಮನೆಗೆ ಲಿಫ್ಟ್ ಹಾಕಿದೆ. ಅಂಬರೀಶ್ ಅವರ ಬಳಿ ಹೇಳಿದೆ, ಅಣ್ಣಾ ಈಗ ಲಿಫ್ಟ್ ಹಾಕಿದ್ದೀನಿ, ಬೆಸ್ ಮೆಂಟ್ ನಿಂದ ಯಾವ ಫ್ಲೋರ್ ಗೆ ಬೇಕಾದರೂ ಲಿಫ್ಟ್ ನಲ್ಲಿ ಹೋಗಬಹುದು. ಈಗ ಬನ್ನಿ ಎಂದು ಆಹ್ವಾನಿಸಿದ್ದೆ. ಹೋಗೋಣ ಅಂತ ಹೇಳಿದ್ದರು. ಆದ್ರೆ, ಕೊನೆಗೂ ಆಗಲಿಲ್ಲ.

ಈಗಲೂ ತಾಯಿ ಬೈಯ್ತಾರೆ

ಈಗಲೂ ತಾಯಿ ಬೈಯ್ತಾರೆ

ಕೊನೆಗೂ ಅಂಬರೀಶ್ ಅವರನ್ನ ಮನೆಗೆ ಕರೆದುಕೊಂಡು ಹೋಗುವ ಯೋಗ್ಯತೆ ನನಗಿರಲಿಲ್ಲ ಅನ್ಸುತ್ತೆ. ಈಗಲು ತಾಯಿ ನನ್ನನ್ನು ಬೈಯ್ತಾರೆ. ನೀನು ಅವರನ್ನ ಕರೆದುಕೊಂಡು ಬರಬೇಕಿತ್ತು. ಆದ್ರೆ, ಅದೇನ್ ದುರಾದೃಷ್ಟನೋ ಗೊತ್ತಿಲ್ಲ. ಆಗ್ಲಿಲ್ಲ ಎಂದು ಪ್ರೇಮ್ ಬೇಸರ ಮಾಡಿಕೊಂಡಿದ್ದಾರೆ.

ಅಂಬಿಯನ್ನ ನೆನೆದ ಪ್ರೇಮ್

ಅಂಬಿಯನ್ನ ನೆನೆದ ಪ್ರೇಮ್

ಈ ವಾರ ಜೀ ಕನ್ನಡದಲ್ಲಿ ದಿ ವಿಲನ್ ಸಿನಿಮಾ ಟೆಲಿಕಾಸ್ಟ್ ಮಾಡ್ತಿದ್ದಾರೆ. ಈ ವೇಳೆ ವಿಡಿಯೋ ಬೈಟ್ ನಲ್ಲಿ ಮಾತನಾಡುವಾಗ ಪ್ರೇಮ್ ಈ ವಿಷ್ಯವನ್ನ ಹಂಚಿಕೊಂಡು ಭಾವುಜರಾದರು.

More from Filmibeat

English summary
Kannada Director prem has revealed one of the unknown fact of ambarish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X