Just In
Don't Miss!
- Sports
ಐಪಿಎಲ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್
- News
ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೋಗಿ ಪ್ರೇಮ್ ಹೆಸರಿನಲ್ಲಿ ಮಾಡಿದ್ರು ಗಿಮಿಕ್

ಕನ್ನಡ ಸಿನಿಮಾರಂಗದಲ್ಲಿ ಪ್ರಚಾರದ ವಿಚಾರ ಅಂದರೆ ಪ್ರತಿಯೊಬ್ಬರು ಜೋಗಿ ಪ್ರೇಮ್ ತರ ಚಿತ್ರವನ್ನ ಪ್ರಚಾರ ಮಾಡಬೇಕು. ಅನ್ನುವಷ್ಟರ ಮಟ್ಟಿಗೆ ತಮ್ಮ ಸಿನಿಮಾಗಳ ಪಬ್ಲಿಸಿಟಿ ಮಾಡುತ್ತಾರೆ. ಕೆಲವೊಮ್ಮೆ ಅವರ ಆಶ್ವಾಸನೆಗಳು ಸುಳ್ಳಾಗಿದ್ದರು ಇನ್ನು ಕೆಲವೊಮ್ಮೆ ಸತ್ಯವಾಗಿರುವುದು ಇದೆ.
ಸದಾ ಸಿನಿಮಾ ಪಬ್ಲಿಸಿಟಿಯಲ್ಲಿ ಮೊದಲಿರುತ್ತಿದ್ದ ಜೋಗಿ ಪ್ರೇಮ್ ಅವರ ಹೆಸರನ್ನ ಬಳಸಿಕೊಂಡು ಅವರಿಗೆ ಶಾಕ್ ನೀಡಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಗ್ರಾಫಿಕ್ಸ್ ಕೆಲಸ ಬಾಕಿ ಇರುವುದರಿಂದ ಚಿತ್ರತಂಡ ಟೀಸರ್ ಬಿಡುಗಡೆ ತಂಟೆಗೆ ಹೋಗಿಲ್ಲ. ಆದರೆ ಅದ್ಯಾರೋ ಗಾಂಧಿನಗರದ ಒಂದಿಷ್ಟು ಮಂದಿ ಮೋದಿಗಾಗಿ 'ದಿ ವಿಲನ್' ಟೀಂ ಕಾಯುತ್ತಿದೆ ಅಂತ ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ.
ಚಿತ್ರರಂಗದಲ್ಲಿ ಹದಿನೈದು ವರ್ಷ ಪೂರೈಸಿದ ಜೋಗಿ ಪ್ರೇಮ್
ನಿನ್ನೆ ಪೂರ್ತಿ ದಿ ವಿಲನ್ ಸಿನಿಮಾದ ಟೀಸರ್ ಬಿಡುಗಡೆಗೆ ಮೋದಿ ಬರುತ್ತಾರಂತೆ. ಟೀಸರ್ ಆಡಿಯೋ ಒಟ್ಟಿಗೆ ರಿಲೀಸ್ ಮಾಡುತ್ತಾರಂತೆ ಅನ್ನುವ ಸುದ್ದಿ ಜೋರಾಗಿ ಹರಡಿತ್ತು. ಕಿಚ್ಚ ಹಾಗೂ ಶಿವಣ್ಣನ ಅಭಿಮಾನಿಗಳು ಪ್ರೇಮ್ ಕರೆಸಿದರೂ ಆಶ್ಚರ್ಯ ಇಲ್ಲ ಅಂದರು. ಇನ್ನೂ ಕೆಲವರು ಮತ್ತೆ ಪ್ರೇಮ್ ಗಿಮಿಕ್ ಮಾಡ್ತಿದ್ದಾರೆ ಅಂತ ಮಾತನಾಡಿಕೊಂಡರು.
ಆದರೆ ಈ ಬಗ್ಗೆ ಪ್ರೇಮ್ ಅವರಿಗೆ ಕೇಳಿದರೆ ಇವೆಲ್ಲಾ ಶುದ್ದ ಸುಳ್ಳು. ನಾನು ಈ ಬಗ್ಗೆ ಎಲ್ಲಿಯೂ ಮಾತನಾಡಿಯೇ ಇಲ್ಲ. ಆಡಿಯೋ ಬಿಡುಗಡೆಗೆ ಚಿತ್ರರಂಗದ ದೊಡ್ಡ ವ್ಯಕ್ತಿ ಅವರನ್ನ ಕರೆಸಬೇಕು ಎನ್ನುವ ಪ್ಲಾನ್ ಇದೆ. ಆದರೆ ಮೋದಿ ಅವರನ್ನ ಕರೆಸುವ ಆಲೋಚನೆ ಇಲ್ಲ. ದೊಡ್ಡವರ ಹೆಸರನ್ನ ಬಳಸಿಕೊಂಡು ಹಿಂಗೆಲ್ಲಾ ಸುದ್ದಿ ಮಾಡಬಾರದು ಎಂದಿದ್ದಾರೆ.
ಒಟ್ಟಾರೆ ಪ್ರೇಕ್ಷಕರ ಮುಂದೆ ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್ ಮಾಡುತ್ತಿದ್ದ ಪ್ರೇಮ್ ಅವರ ಹೆಸರನ್ನ ಬಳಸಿಕೊಂಡು ಯಾರೋ ಅವರಿಗೆ ಶಾಕ್ ನೀಡಿರುವುದಂತು ನಿಜ.