twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನಲ್ಲಿ ಕಾರು-ಬಸ್ಸು ಬಿಟ್ಟು ಸೈಕಲ್‌ನಲ್ಲಿ ಓಡಾಡಿದ್ರೆ ಒಳ್ಳೆಯದು- ಪ್ರೇಮ್

    |

    ಬೆಂಗಳೂರಿನಲ್ಲಿ ಕಾರು, ಬಸ್ಸು ಬಿಟ್ಟು ಸೈಕಲ್‌ನಲ್ಲಿ ಓಡಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು, ಏಕಂದ್ರೆ ವಾಯುಮಾಲಿನ್ಯನೂ ನಿಯಂತ್ರಣಕ್ಕೆ ಬರುತ್ತೆ ಎಂದು ಕನ್ನಡ ಸಿನಿ ನಿರ್ದೇಶಕ ಹಾಗೂ ನಟ ಪ್ರೇಮ್ ಹೇಳಿದ್ದಾರೆ.

    ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆಯಿಂದ 'ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ನವೆಂಬರ್ 2020' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಪ್ರೇಮ್ ವಾಯುಮಾಲಿನ್ಯ ನಿಯಂತ್ರಿಸಲು ಸ್ವತಃ ಸಾರ್ವಜನಿಕರೇ ತಿಳಿದುಕೊಳ್ಳಬೇಕು ಎಂದಿದ್ದಾರೆ.

    ಓ ಓ ಓ ಪ್ರೇಮ ಕಾಶ್ಮೀರ...ಎನ್ನುತ್ತಿದ್ದಾರೆ ನಿರ್ದೇಶಕ ಪ್ರೇಮ್ಓ ಓ ಓ ಪ್ರೇಮ ಕಾಶ್ಮೀರ...ಎನ್ನುತ್ತಿದ್ದಾರೆ ನಿರ್ದೇಶಕ ಪ್ರೇಮ್

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾಲ್ನಡಿಗೆ ಜಾಥಾದಲ್ಲಿ 'ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ'ಗೆ ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಚಾಲನೆ ನೀಡಿದರು.

     Director Prem said that use bicycle to control air pollution

    ಬಳಿಕ ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್ ''ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಬಿಬಿಎಂಪಿ ಇಲಾಖೆ ಹಾಗು ಆಯುಕ್ತರು ಈ ಬಗ್ಗೆ ಗಮನ ನೀಡಬೇಕು'' ಎಂದು ಮನವಿ ಮಾಡಿಕೊಂಡರು.

    ಈ ವಿಡಿಯೋ ತುಣುಕನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರೇಮ್ ''"ನಾವ್ ಪರಿಸರನ ಉಳುಸುದ್ರೆ ಪರಿಸರ ನಮ್ಮನ್ನ ಉಳ್ಸುತ್ತೇ" ಗಿಡಗಳನ್ನ ಬೆಳೆಸಿ, ಪ್ರಕೃತಿ ಉಳಿಸಿ, ವಾಯು ಮಾಲಿನ್ಯವನ್ನ ತಡೆಗಟ್ಟಿ'' ಎಂದು ಕೇಳಿಕೊಂಡಿದ್ದಾರೆ.

    Recommended Video

    ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada

    ಸದ್ಯ, 'ಏಕ್ ಲವ್ ಯಾ' ಸಿನಿಮಾ ಮಾಡುತ್ತಿರುವ ಪ್ರೇಮ್ ರಾಜಸ್ಥಾನ, ಜಮ್ಮು ಕಾಶ್ಮೀರ, ಶ್ರೀನಗರ ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದಾರೆ. ಅದಕ್ಕಾಗಿ ಲೋಕೇಶನ್ ಸಹ ನೋಡಿಕೊಂಡು ಬಂದಿದ್ದಾರೆ.

    English summary
    Kannada Film Director Prem said that use bicycle to control air pollution in bengaluru city.
    Wednesday, November 18, 2020, 14:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X