ರಚಿತಾ-ರಾಣಾ ಕಿಸ್ ಬಗ್ಗೆ ಪ್ರೇಮ್ ಕೊಟ್ಟ ಸ್ಪಷ್ಟನೆ ಏನು?

Recommended Video

ನಾನು ಎಷ್ಟು ಖರ್ಚು ಮಾಡಿದ್ರು ನನ್ನ ಹೆಂಡತಿ ಏನೂ ಕೇಳಲ್ಲ |Prem | Rakshita | RachitaRam | Raanna | Ek Love Ya

ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಗಳು ಸಾಮಾನ್ಯ. ಕಥೆಯಲ್ಲಿ ಬೇಕು ಎನಿಸಿದರೆ ಕಿಸ್ ಮಾಡುವುದು ಅವಶ್ಯಕ ಎಂದು ನಟ-ನಟಿಯರು ಹೇಳಿರುವುದನ್ನು ಕಂಡಿದ್ದೇವೆ. ನಿರ್ದೇಶಕರು ಅದೇ ಮಾತು ಹೇಳಿರುವುದು ಕಾಣಬಹುದು.

ಆದರೆ, ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಟೀಸರ್ ನಲ್ಲಿ ರಚಿತಾ ರಾಮ್ ಮತ್ತು ರಾಣಾ ನಡುವೆ ಲಿಪ್ ಕಿಸ್ ದೃಶ್ಯ ಇದೆ. ನಿರ್ದಿಷ್ಟವಾಗಿ ಈ ದೃಶ್ಯ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಈ ಕಿಸ್ ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಲು ಕಾರಣ ರಚಿತಾ ರಾಮ್. ಈ ಹಿಂದೆ ರಚ್ಚು ಅಭಿನಯಿಸಿದ್ದ ಚಿತ್ರದಲ್ಲಿ ಆದ ಕೆಲವು ಬೆಳವಣಿಗೆಗಳು ಈ ಕಿಸ್ ಬಗ್ಗೆ ಇಷ್ಟೊಂದು ಸುದ್ದಿಯಾಗುವಂತೆ ಮಾಡಿದೆ. ಅಷ್ಟಕ್ಕೂ, ಈ ಕಿಸ್ಸಿಂಗ್ ದೃಶ್ಯದ ಬಗ್ಗೆ ಪ್ರೇಮ್ ಏನು ಹೇಳಿದ್ರು? ರಚಿತಾ ರಾಮ್ ಕಿಸ್ ಹಿಂದಿನ ಕಾರಣವೇನು? ಮುಂದೆ ಓದಿ...

ಐ ಲವ್ ಯೂ ಸಿನಿಮಾ ವೇಳೆ ರಚ್ಚು ಬೇಸರ!

ಐ ಲವ್ ಯೂ ಸಿನಿಮಾ ವೇಳೆ ರಚ್ಚು ಬೇಸರ!

ರಚಿತಾ ರಾಮ್ ಅಂದ್ರೆ ಕ್ಲಾಸ್ ಹುಡುಗಿ. ಸಂಪ್ರದಾಯಸ್ಥ ಲುಕ್, ಗ್ಲಾಮರ್, ಸೀರೆಯ ಲುಕ್ ಹೀಗೊಂದು ಕಲ್ಪನೆ. ಆದರೆ, ಐ ಲವ್ ಯೂ ಸಿನಿಮಾದ ಹಾಡೊಂದರಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದರು. ಇದು ಸಹಜವಾಗಿ ರಚಿತಾ ರಾಮ್ ಅಭಿಮಾನಿಗಳಿಗೆ ಬೇಸರ ತಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ರಚ್ಚು ಕುರಿತು ಟೀಕಿಸಿದರು. ಬಳಿಕ, ಇಂತಹ ಬೋಲ್ಡ್ ಪಾತ್ರ ಮತ್ತೆ ಮಾಡಲ್ಲ ಎಂದು ರಚಿತಾ ಕಣ್ಣೀರು ಹಾಕಿದ್ದನ್ನು ನೆನಪು ಹಾಕಬಹುದು.

ಲಿಪ್ ಕಿಸ್ ಮಾಡಿದ್ದು ಯಾಕೆ?

ಲಿಪ್ ಕಿಸ್ ಮಾಡಿದ್ದು ಯಾಕೆ?

'ಐ ಲವ್ ಯೂ' ಸಿನಿಮಾದ ವೇಳೆ ಅಷ್ಟೆಲ್ಲಾ ಟೀಕೆಗೆ ಗುರಿಯಾಗಿದ್ದ ರಚ್ಚು, ಮುಂದಿನ ದಿನದಲ್ಲಿ ತುಂಬಾ ಬೋಲ್ಡ್ ಪಾತ್ರ ಮಾಡಲ್ಲ ಅಂದಿದ್ದರು. ಆದರೆ, ಹೊಸ ಹೀರೋ ಜೊತೆ ಲಿಪ್ ಕಿಸ್ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ. ಟೀಸರ್ ಗಮನಿಸಿದರೆ, ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ಸ್ವಲ್ಪ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಟೀಸರ್ ನಲ್ಲು ಲಿಪ್ ಕಿಸ್ ಹೆಚ್ಚು ಫೋಕಸ್ ಆಗಿರುವುದು ರಚ್ಚು ಬಗ್ಗೆ ಮಾತನಾಡುವಂತಾಗಿದೆ.

ಪ್ರೇಮ್ ಏನಂದ್ರು?

ಪ್ರೇಮ್ ಏನಂದ್ರು?

ಚಿತ್ರಗಳಲ್ಲಿ ಕಿಸ್ಸಿಂಗ್ ದೃಶ್ಯಗಳ ಅವಶ್ಯಕತೆ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಪ್ರೇಮ್ ''ನಮ್ಮ ಭಾರತೀಯ ಅಥವಾ ಸೌತ್ ಇಂಡಿಯಾ ಚಿತ್ರಗಳಲ್ಲಿ ಸಂದರ್ಭಕ್ಕೆ ಬೇಕು ಎನಿಸಿದಾಗ ಕಿಸ್ ದೃಶ್ಯ ಮಾಡುವುದರಲ್ಲಿ ತಪ್ಪಿಲ್ಲ, ಆದರೆ ಸುಮ್ ಸುಮ್ಮನೆ ಎಲ್ಲದಕ್ಕೂ ಕಿಸ್ ಮಾಡಿಸುವುದು ತಪ್ಪು'' ಎಂದು ಪ್ರೇಮ್ ಹೇಳಿದ್ದಾರೆ. ಈ ಮೂಲಕ ಏಕ್ ಲವ್ ಯಾ ಚಿತ್ರದಲ್ಲಿರುವ ಈ ಕಿಸ್ ಕೂಡ ಅವಶ್ಯಕವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಪಾತ್ರ ಒಪ್ಪಲು ಕಾರಣ ಬಿಚ್ಚಿಟ್ಟ ರಚ್ಚು

ಈ ಪಾತ್ರ ಒಪ್ಪಲು ಕಾರಣ ಬಿಚ್ಚಿಟ್ಟ ರಚ್ಚು

''ನಿರ್ದೇಶಕ ಪ್ರೇಮ್ ಜೊತೆಗೆ ಒಂದು ಸಿನಿಮಾದಲ್ಲಿಯಾದರೂ, ಕೆಲಸ ಮಾಡಬೇಕು ಆಸೆ ಇತ್ತು. ಪ್ರೇಮ್ ನಟಿಯರಿಗೆ ಕೊಡುವ ಪ್ರಾಮುಖ್ಯತೆ ತುಂಬ ಇಷ್ಟ. ಜೀವನದಲ್ಲಿ ಯಾರೇ ಆಗಲಿ ಒಂದೇ ಸಲ ಎಡವುತ್ತಾರೆ. ನಾನು ಸಿನಿಮಾದಲ್ಲಿ ಒಂದು ಕಂಟೆಂಟ್ ಇರುವ ಕಾರಣಕ್ಕೆ ಈ ಪಾತ್ರ ಒಪ್ಪಿಕೊಂಡೆ. ಇಂತಹ ಪಾತ್ರ ಮಾಡಬೇಡಿ ಅಂತ ಅಭಿಮಾನಿಗಳು ಪ್ರೀತಿಯಿಂದ ಹೇಳುತ್ತಾರೆ. ಆದರೆ, ಸಿನಿಮಾ ನೋಡಿ, ಆ ನಂತರ ಹೇಳಿ. ಅಭಿಮಾನಿಗಳು ಇಲ್ಲದೆ ರಚಿತಾ ಸೊನ್ನೆ' ಎಂದು ರಚಿತಾ ಹೇಳಿದ್ದಾರೆ.

More from Filmibeat

English summary
Kannada actress Rachita ram and Rana starrer EK LOVE YA movie teaser sounding for kissing scene. now, director prem has clarified about kiss scene.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X