ಬಾಲಿವುಡ್ ದಾದಾ ಮಿಥುನ್ ಚಕ್ರವರ್ತಿಗೆ ಧನ್ಯವಾದ ಹೇಳಿದ ನಿರ್ದೇಶಕ ಪ್ರೇಮ್
'ದಿ ವಿಲನ್' ಸಿನಿಮಾ ಸಖತ್ ವಿಶೇಷತೆಗಳನ್ನು ಹೊಂದಿದೆ. ಅದರಲ್ಲಿ ಒಂದು ನಟ ಮಿಥುನ್ ಚಕ್ರವರ್ತಿ. ಬಾಲಿವುಡ್ ದಾದಾ ಮಿಥುನ್ ಚಕ್ರವರ್ತಿ 'ದಿ ವಿಲನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.
ಸದ್ಯ 'ದಿ ವಿಲನ್' ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಅವರ ಭಾಗದ ಚಿತ್ರೀಕರಣ ಮುಗಿದಿದ್ದು, ಈ ಹಿನ್ನಲೆಯಲ್ಲಿ ನಿರ್ದೇಶಕ ಪ್ರೇಮ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮಿಥುನ್ ಚಕ್ರವರ್ತಿ ಅವರಿಗೆ ಚಿತ್ರದಲ್ಲಿ ನಟಿಸಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಅವರು ಒಂದು ಮುಖ್ಯ ಪಾತ್ರವನ್ನು ಮಾಡಿದ್ದು, ಅವರ ಪಾತ್ರದ ಬಗ್ಗೆ ನಿರ್ದೇಶಕ ಪ್ರೇಮ್ ಗುಟ್ಟು ಬಿಟ್ಟುಕೊಟ್ಟಿಲ್ಲ.

'ದಿ ವಿಲನ್' ಸಿನಿಮಾದ ಶೂಟಿಂಗ್ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಸುದೀಪ್ ಮತ್ತು ಆಮಿ ಜಾಕ್ಸನ್ ಅವರ ಭಾಗದ ಚಿತ್ರೀಕರಣವಾಗುತ್ತಿದೆ. ಅಂದಹಾಗೆ, ಇಂದು (ಸಪ್ಟೆಂಬರ್ 4) ರಂದು ಚಿಕ್ಕಮಂಗಳೂರಿನಲ್ಲಿ ಸಿನಿಮಾದ ಶೂಟಿಂಗ್ ಮುಂದುವರೆಯಲಿದೆ.


Click it and Unblock the Notifications











