'ಪೈಲ್ವಾನ್' ಟೀಸರ್ ನೋಡಿ 'ವಿಲನ್' ಪ್ರೇಮ್ಸ್ ಏನಂದ್ರು?

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಕುಸ್ತಿ ಟೀಸರ್ ಬಿಡುಗಡೆಯಾಗಿದೆ. ಪೈಲ್ವಾನ್ ಟೀಸರ್ ನೋಡಿದ ಅಭಿಮಾನಿಗಳು ಪೈಲ್ವಾನ್ ಹಬ್ಬ ಮಾಡ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸ್ಯಾಂಡಲ್ ವುಡ್ ತಾರೆಯರು ಕೂಡ ಪೈಲ್ವಾನ್ ನೋಡಿ ಖುಷಿಪಟ್ಟಿದ್ದಾರೆ.

ವಿಶೇಷ ಅಂದ್ರೆ ಬಾಲಿವುಡ್ 'ಸುಲ್ತಾನ್' ಸಲ್ಮಾನ್ ಖಾನ್ ಕೂಡ ಸುದೀಪ್ ಪೈಲ್ವಾನ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ, ಕನ್ನಡದ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ಸ್, ಪೈಲ್ವಾನ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

'ಆಲ್ ದಿ ಬೆಸ್ಟ್ ಪೈಲ್ವಾನ್ ತಂಡಕ್ಕೆ, ನನ್ನ ಡಾರ್ಲಿಂಗ್ ಸುದೀಪ್ ಸೂಪರ್ ಆಗಿ ಕಾಣ್ತಿದ್ದಾರೆ'' ಎಂದು ಪ್ರೇಮ್ ಹೇಳಿದ್ದಾರೆ.

Director prem tweets on Pailwan movie teaser

'ಪೈಲ್ವಾನ್' ಚಿತ್ರಕ್ಕೂ ಮುಂಚೆ ಜೋಗಿ ಪ್ರೇಮ್ 'ದಿ ವಿಲನ್' ಎಂಬ ಸಿನಿಮಾ ಮಾಡಿದ್ದರು. ಸುದೀಪ್ ಮತ್ತು ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಬಾಕ್ಸ್ ಅಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡಿದ್ದ ವಿಲನ್ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು.

ಸದ್ಯ, 'ಗಾಂಧಿಗಿರಿ' ಸಿನಿಮಾದಲ್ಲಿ ನಟಿಸುತ್ತಿರುವ ಪ್ರೇಮ್, ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಈ ಬಗ್ಗೆ ಪ್ರಕಟ ಮಾಡ್ತೀನಿ ಅಂತ ಹೇಳಿದ್ದರು. ಬಟ್, ಕೊನೆ ಕ್ಷಣದಲ್ಲಿ ಘೋಷಣೆ ಮಾಡಿಲ್ಲ.

More from Filmibeat

English summary
Kannada director prem tweets about 'Pailwan' movie teaser. The movie is directed by krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X