For Quick Alerts
  ALLOW NOTIFICATIONS  
  For Daily Alerts

  ಇದೇ ತಿಂಗಳು ಪ್ರೇಮ್ ಹೊಸ ಸಿನಿಮಾ ಟೈಟಲ್ ಲಾಂಚ್

  |
  ಮಾರ್ಚ್ 31ಕ್ಕೆ ಜೋಗಿ ಪ್ರೇಮ್ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ | FILMIBEAT KANNADA

  'ದಿ ವಿಲನ್' ಸಿನಿಮಾದ ನಂತರ ಪ್ರೇಮ್ ತಮ್ಮ ನಿರ್ದೇಶನದ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಅನ್ನು ಇದೇ ತಿಂಗಳು ಅನೌನ್ಸ್ ಮಾಡಲಿದ್ದಾರೆ.

  ಪ್ರೇಮ್ ತಮ್ಮ ಹೊಸ ಸಿನಿಮಾದ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಆ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಇದೇ ತಿಂಗಳ 31 ರಂದು ಬಿಡುಗಡೆಯಾಗಲಿದೆ.

  ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ! ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ!

  ಮುಂದಿನ ಭಾನುವಾರ ಸಂಜೆ 7 ಗಂಟೆಗೆ ಟೈಟಲ್ ಹಾಗೂ ಫಸ್ಟ್ ಲುಕ್ ಹೊರ ಬರಲಿದೆ. ಅಂದಹಾಗೆ, ಈ ಸಿನಿಮಾದ ಮೂಲಕ ನಟಿ ರಕ್ಷಿತಾ ಸಹೋದರ ಅಭಿಷೇಕ್ ಲಾಂಚ್ ಆಗುತ್ತಿದ್ದಾರೆ. ಅವರ ಮೊದಲ ಸಿನಿಮಾವನ್ನು ಪ್ರೇಮ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

  ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಚಿತ್ರ ಲಾಂಚ್ ಆಗಲಿದೆ. ರಕ್ಷಿತಾ ಸಹೋದರ ಈ ಹಿಂದೆ 'ದಿ ವಿಲನ್' ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಪ್ರೇಮ್ ನಿರ್ದೇಶನದ ಕೆಲ ಚಿತ್ರಗಳಿಗೆ ಕೆಲಸ ಮಾಡಿದ್ದರು.

  ಈ ಸಿನಿಮಾಗೆ 'ಎಕ್ಸ್ ಕ್ಯೂಸ್ ಮಿ' ಎಂಬ ಹೆಸರು ಇಡಲಾಗಿದೆ ಎಂಬ ಸುದ್ದಿ ಇದೆ. ಆದರೆ, ಇದೆಲ್ಲ ಪ್ರಶ್ನೆಗೆ ಉತ್ತರ ಮಾರ್ಚ್ 31 ಕ್ಕೆ ಸಿಗಲಿದೆ.

  English summary
  Kannada director Prem's new movie title will be launch on march 31st. Rakshitha Prem brother Abishek will make his debut from this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X