1st ಡೇ 1st ಶೋ 'ಟಗರು' ನೋಡೊಕ್ಕೆ ಬರ್ತಾರೆ ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್!
'ಟಗರು' ಸಿನಿಮಾದ ಕ್ರೇಜ್ ಬಗ್ಗೆ ಹೆಚ್ಚು ಹೇಳುವುದೇ ಬೇಡ. ಒಂದು ಕಡೆ ಆ ಸಿನಿಮಾದ ರಿಲೀಸ್ ದಿನ ಹತ್ತಿರಕ್ಕೆ ಬರುತ್ತಿದೆ. ಇತ್ತ ಅದೇ ರೀತಿ ಅಭಿಮಾನಿಗಳ ಎದೆಬಡಿತ ಹೆಚ್ಚಾಗುತ್ತಿದೆ. ಆದರೆ ಈಗ ಈ ಟಗರಿನ ಪೋಗರು ನೋಡಲು ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್ ಕೂಡ ಬರಲಿದ್ದಾರೆ.
'ಟಗರು' ಸಿನಿಮಾ ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾ. ಇದೇ ಕಾರಣದಿಂದ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಹಾಡುಗಳು ಸಾಕಷ್ಟು ಸದ್ದು ಮಾಡಿದೆ. ಇವುಗಳ ಜೊತೆಗೆ ಈಗ ಕನ್ನಡದ 'ಟಗರು' ನೋಡುವುದಕ್ಕೆ ತೆಲುಗು ಚಿತ್ರರಂಗದ ದೊಡ್ಡ ನಿರ್ದೇಶಕ ಬರುತ್ತಿದ್ದಾರೆ. 'ಟಗರು' ಸಿನಿಮಾದ ಟ್ರೇಲರ್ ನೋಡಿ ಫಿದಾ ಆಗಿರುವ ಅವರು ಚಿತ್ರವನ್ನು ನೋಡುವ ಕಾತುರದಲ್ಲಿ ಇದ್ದಾರೆ. ಮುಂದೆ ಓದಿ...

ಪೂರಿ ಜಗನ್ನಾಥ್
ಟಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾವನ್ನು 1st ಡೇ 1st ಶೋ ಬೆಂಗಳೂರಿನಲ್ಲಿ ಅದು ಕೂಡ ಗಾಂಧಿನಗರದ ಮುಖ್ಯ ಚಿತ್ರಮಂದಿರದಲ್ಲಿ ನೋಡಲಿದ್ದಾರಂತೆ. ಈ ವಿಷಯವನ್ನು ಸ್ವತಃ 'ಟಗರು' ಚಿತ್ರದ ನಿರ್ಮಾಪಕ ಶ್ರೀಕಾಂತ್ ಹಂಚಿಕೊಂಡಿದ್ದಾರೆ.

ಟ್ರೇಲರ್ ನೋಡಿ ಫಿದಾ
'ಟಗರು' ಸಿನಿಮಾದ ಟ್ರೇಲರ್ ನೋಡಿರುವ ಪೂರಿ ಜಗನ್ನಾಥ್ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರಂತೆ. ಸಿನಿಮಾದ ಮ್ಯೂಸಿಕ್ ಮತ್ತು ಮೇಕಿಂಗ್ ವಿಶೇಷವಾಗಿ ಪೂರಿ ಜಗನ್ನಾಥ್ ಅವರ ಗಮನ ಸೆಳೆದಿದೆ. ಅದೇ ಕಾರಣಕ್ಕೆ ಚಿತ್ರವನ್ನು ನೋಡೊಕ್ಕೆ ಅವರು ಬೆಂಗಳೂರಿಗೆ ಬರುತ್ತಿದ್ದಾರೆ.

ಶಿವಣ್ಣ ಜೊತೆಗೆ ಸಿನಿಮಾ
ಪೂರಿ ಜಗನ್ನಾಥ್ ಈ ಹಿಂದೆ ಶಿವಣ್ಣನಿಗೆ 'ಯುವರಾಜ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಮೊದಲ ಸಿನಿಮಾ 'ಅಪ್ಪು' ಚಿತ್ರಕ್ಕೆ ಸಹ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದರು.

ಕನ್ನಡದ ಜೊತೆಗೆ ನಂಟು
ಪೂರಿ ಜಗನ್ನಾಥ್ ಕನ್ನಡ ಚಿತ್ರರಂಗದ ಜೊತೆಗೆ ನಂಟು ಹೊಂದಿರುವ ನಿರ್ದೇಶಕ. ಕಳೆದ ವರ್ಷ ನಟ ಇಶಾನ್ ಜೊತೆಗೆ ಪೂರಿ ಜಗನ್ನಾಥ್ 'ರೋಗ್' ಸಿನಿಮಾ ಮಾಡಿದ್ದರು. ಅದರ ಜೊತೆಗೆ ಈಗ 'ಮುಂಗಾರು ಮಳೆ 2' ಖ್ಯಾತಿಯ ನಟಿ ನೇಹ ಶೆಟ್ಟಿ ಅವರನ್ನು ಟಾಲಿವುಡ್ ನಲ್ಲಿ ಲಾಂಚ್ ಮಾಡುತ್ತಿದ್ದಾರೆ.

ಫೆಬ್ರವರಿಗೆ ಬರ್ತಿದೆ 'ಟಗರು'
'ಟಗರು' ಫೆಬ್ರವರಿಗೆ ಫಿಲ್ಡ್ ಗೆ ಇಳಿಯಲಿದೆ. ಮಾನ್ವಿತಾ ಹರೀಶ್ ಮತ್ತು ಭಾವನ ಚಿತ್ರದ ನಾಯಕಿಯರಾಗಿದ್ದಾರೆ. ಉಳಿದಂತೆ ವಸಿಷ್ಟ ಮತ್ತು ಧನಂಜಯ್ ಚಿತ್ರದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಸಿನಿಮಾದಲ್ಲಿದೆ.


Click it and Unblock the Notifications











