"ಲೈಟ್ ಕಂಬಕ್ಕಲ್ಲ, ಚಂದ್ರಲೋಕಕ್ಕೆ ಕಲ್ಲು ಹೊಡಿಬೇಕು" ಎಂದು 5 ಸಿನಿಮಾ ಘೋಷಿಸಿದ ಆರ್. ಚಂದ್ರು

ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಕಳೆಚ ವರ್ಷ ಭಾರೀ ಸದ್ದು ಮಾಡಿತ್ತು. ಸಾಕಷ್ಟು ಟೀಕೆಗಳಿಗೂ ಸಿನಿಮಾ ಗುರಿಯಾಗಿತ್ತು. ಟೀಕೆಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದೇ ನಿರ್ದೇಶಕ ಚಂದ್ರು 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಮ್ಮೆಲೆ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಟೈಟಲ್ ಸಮೇತ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ತಮ್ಮದೇ ಆರ್‌. ಸಿ ಸ್ಟುಡಿಯೋಸ್ ಪ್ರೊಡಕ್ಷನ್ ಸಂಸ್ಥೆ ಆರಂಭಿಸಿ 5 ಸಿನಿಮಾಗಳನ್ನು ಆರ್. ಚಂದ್ರು ಕೈಗೆತ್ತಿಕೊಂಡಿದ್ದಾರೆ. 'ಕಬ್ಜ' ಬಳಿಕ ನಾನು ಸುಮ್ಮನೆ ಇರಲಿಲ್ಲ. ಹೊಸ ಸಿನಿಮಾಗಳಿಗಾಗಿ ತಯಾರಿ ನಡೆಸುತ್ತಿದ್ದೆ. ಈಗ ಹೊಸ ತಂಡ ಸಿಕ್ಕಿದೆ. ಅದಕ್ಕೆ ಧೈರ್ಯವಾಗಿ 5 ಸಿನಿಮಾಗಳನ್ನು ಘೋಷಿಸಿದ್ದೇನೆ. ನಿಮ್ಮೆಲ್ಲರ ಬೆಂಬಲ ಇದ್ದರೆ 5 ಅಲ್ಲ 50 ಸಿನಿಮಾ ಮಾಡ್ತೀನಿ ಎಂದಿದ್ದಾರೆ.

Director R Chandru announced 5 films under his Production

ಆರ್‌. ಚಂದ್ರು ಕನಸಿನ ಆರ್‌. ಸಿ ಸ್ಟುಡಿಯೋಸ್ ಸಂಸ್ಥೆಗೆ ಸಿಎಂ ಸಿದ್ಧರಾಮಯ್ಯ ಶುಭಾರಂಭ ಮಾಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ನಿರ್ಮಾಪಕರಾದ ಆನಂದ್ ಪಂಡಿತ್, ಅಲಂಕಾರ್ ಪಾಂಡಿಯನ್, ಡಾರ್ಲಿಂಗ್ ಕೃಷ್ಣ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆರ್‌. ಸಿ ಸ್ಟುಡಿಯೋಸ್ ಜೊತೆ ಆರ್. ಚಂದ್ರು ಕನಸಿನ ಸಿನಿಮಾಗಳಿಗೆ ಆನಂದ್ ಪಂಡಿತ್, ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಲಿದ್ದಾರೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾಗಳು ನಿರ್ಮಾಣವಾಗಲಿದೆ.

5 ಸಿನಿಮಾಗಳನ್ನು ಆರ್‌. ಚಂದ್ರು ಜೊತೆಗೆ ಬೇರೆ ನಿರ್ದೇಶಕರು ಕಟ್ಟಿಕೊಡಲಿದ್ದಾರೆ. ಈಗಾಗಲೇ 'ಕಬ್ಜ' ಸೀಕ್ವೆಲ್ ಘೋಷಣೆ ಆಗಿದ್ದು ಆರ್‌. ಸಿ ಸ್ಟುಡಿಯೋಸ್ ಬ್ಯಾನರ್‌ನಲ್ಲೇ ಈ ಸಿನಿಮಾ ತೆರೆಗೆ ನಿರ್ಮಾಣವಾಗಲಿದೆ. ಸ್ವತಃ ಚಂದ್ರು ಈ ಆಕ್ಷನ್ ಕಟ್ ಹೇಳಲಿದ್ದಾರೆ. 'ಕಬ್ಜ'- 2 ಜೊತೆಗೆ 'ಶ್ರೀರಾಮ ಬಾಣ ಚರಿತ', 'ಫಾದರ್', 'DOG', 'POK' ಎನ್ನುವ ಇನ್ನು 4 ಸಿನಿಮಾಗಳ ಲಿಸ್ಟ್‌ನಲ್ಲಿವೆ.

'ಫಾದರ್' ಎನ್ನುವ ಚಿತ್ರವನ್ನು ರಾಜಮೋಹನ್ ನಿರ್ದೇಶನ ಮಾಡುವುದು ಪಕ್ಕಾ ಆಗಿದೆ. 'POK' ಚಿತ್ರಕ್ಕೂ ಚಂದ್ರು ಆಕ್ಷನ್ ಕಟ್ ಹೇಳಿದ್ದಾರೆ. ಆದರೆ ಇನ್ನುಳಿದ 2 ಸಿನಿಮಾಗಳ ನಿರ್ದೇಶಕರು, ಕಲಾವಿದರು ಯಾರು ಎನ್ನುವುದು ಗೊತ್ತಾಗಿಲ್ಲ. 'KGF' ಸರಣಿ ಸಿನಿಮಾಗಳಿಂದ ಪ್ರೇರಣೆಗೊಂಡು ಆರ್‌. ಚಂದ್ರು 'ಕಬ್ಜ' ಸಿನಿಮಾ ಕಟ್ಟಿಕೊಟ್ಟಿದ್ದರು. ಸೆಟ್‌, ಮೇಕಿಂಗ್ ಸ್ಟೈಲ್, ಬಿಜಿಎಂ ಎಲ್ಲವೂ 'KGF' ಸಿನಿಮಾ ನೆನಪಿಸಿದ್ದು ಸುಳ್ಳಲ್ಲ. ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು.

Director R Chandru announced 5 films under his Production

ಆರ್‌. ಚಂದ್ರು ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ. ನಾವು ಲಾಭದಲ್ಲಿ ಇದ್ದೇವೆ ಎಂದರು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗ ಬಂದಿತ್ತು. ಆದರೆ ವಿತರಕರು ನಷ್ಟ ಅನುಭವಿಸಿದರು ಎನ್ನುವ ಮಾತುಗಳು ಕೇಳಿಬಂದಿತ್ತು. ಕೆಲವರು ಆರ್‌. ಚಂದ್ರು ಬರೀ ಬಿಲ್ಡಪ್ ಕೊಡ್ತಾರೆ ಅಷ್ಟೇ? ಸಿನಿಮಾದಲ್ಲಿ ಧಮ್ ಇರಲ್ಲ ಎಂದು ಕುಹಕವಾಡಿದ್ದರು.

ಇಷ್ಟುದಿನ ನಿರ್ದೇಶಕರಾಗಿದ್ದ ಆರ್‌. ಚಂದ್ರು ಇದೀಗ ಅಧಿಕೃತವಾಗಿ ನಿರ್ಮಾಪಕರಾಗಿದ್ದಾರೆ. ಆನಂದ್ ಪಂಡಿತ್ ಹಾಗೂ ಅಲಂಕಾರ್ ಪಾಂಡಿಯನ್ ಜೊತೆ ಸೇರಿ 5 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಒಂದು ಸಿನಿಮಾ ಮಾಡುವುದೇ ಕಷ್ಟ ಎನ್ನುವ ಸಮಯದಲ್ಲಿ 5 ಸಿನಿಮಾಗಳನ್ನು ಘೋಷಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಸಿನಿಮಾಗಳ ಮುಹೂರ್ತ, ರಿಲೀಸ್ ಯಾವಾಗ? ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

More from Filmibeat

English summary
5 pan india films launched under R Chandru's R C studios;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X