Exclusive: 'ಕಬ್ಜ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್? ಕೊನೆಗೂ ಮೌನ ಮುರಿದ ನಿರ್ದೇಶಕ ಆರ್‌. ಚಂದ್ರು

ಬಹುನಿರೀಕ್ಷಿತ 'ಕಬ್ಜ' ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿದ್ದು ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಸಿನಿರಸಿಕರು ಕಾಯ್ತಿದ್ದಾರೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದೆ. ಇದೆಲ್ಲದರ ನಡುವೆ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ.

'ಕಬ್ಜ' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸ್ದಾರೆ. ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಆಗಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನುವುದನ್ನು ಚಿತ್ರತಂಡ ಇತ್ತೀಚೆಗೆ ರಿವೀಲ್ ಮಾಡಿತ್ತು. ಆದರೆ ಟ್ರೈಲರ್‌ನಲ್ಲಿ ಶಿವಣ್ಣನನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು. ಅದೇ ರೀತಿ ಈ ಹಿಂದೆ ಅಪ್ಪು ಕೂಡ 'ಕಬ್ಜ' ಸಿನಿಮಾ ಸೆಟ್‌ಗೆ ಹೋಗಿ ಬಂದಿದ್ದರು. ಅದನ್ನು ನೋಡಿ ಚಿತ್ರದಲ್ಲಿ ಪುನೀತ್ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ.

Director R Chandru Clarification On Puneeth Rajkumars cameo in Kabzaa movie

ಆರಂಭದಲ್ಲಿ ಶಿವಣ್ಣ 'ಕಬ್ಜ' ಚಿತ್ರದಲ್ಲಿ ನಟಿಸಿಲ್ಲ ಎಂದೇ ಚಿತ್ರತಂಡ ಹೇಳಿತ್ತು. ಆದರೆ ಟ್ರೈಲರ್ ರಿಲೀಸ್‌ಗೂ ಮುನ್ನ ಚಿತ್ರದಲ್ಲಿ ಸೆಂಚುರಿ ಸ್ಟಾರ್ ನಟಿಸಿರುವ ಬಗ್ಗೆ ಪೋಸ್ಟರ್ ಸಮೇತ ಅನೌನ್ಸ್ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ 'ಕಬ್ಜ' ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾಗಿ ಅಪ್ಪು ಕೂಡ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಚಿತ್ರದ ಟ್ರೈಲರ್‌ನಲ್ಲಿರೋ ಒಂದು ಫ್ರೇಮ್‌ ಕಟ್ ಮಾಡಿ ಅದರಲ್ಲಿ ಮುಖ ಮುಚ್ಚಿಕೊಂಡು ಗನ್ ಹಿಡಿದಿರೋದು ಅಪ್ಪು ಎಂದು ಕೆಲವರು ಹೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ಸಖತ್ ವೈರಲ್ ಆಗಿದೆ. ನಿಜಕ್ಕೂ ಪುನೀತ್ ರಾಜ್‌ಕುಮಾರ್ 'ಕಬ್ಜ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರೆ ಅದು ಬಿಗ್‌ ಸರ್‌ಪ್ರೈಸ್‌ ಗ್ಯಾರೆಂಟಿ. 'ಜೇಮ್ಸ್' ಹೀರೊ ಆಗಿ ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾ. 'ಲಕ್ಕಿಮ್ಯಾನ್' ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಇನ್ನು 'ಗಂಧದಗುಡಿ' ಡಾಕ್ಯೂ ಸಿನಿಮಾದಲ್ಲೂ ಮಿಂಚಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಅಷ್ಟರಲ್ಲೇ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಪುನೀತ್ ರಾಜ್‌ಕುಮಾರ್‌ ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರ ಬಂದಿಲ್ಲ.

Director R Chandru Clarification On Puneeth Rajkumars cameo in Kabzaa movie

ಇನ್ನು 'ಕಬ್ಜ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿರೋದು ನಿಜವೇ? ವೈರಲ್ ಫೋಟೊದಲ್ಲಿ ಇರೋದು ಅಪ್ಪುನಾ? ಎನ್ನುವ ಪ್ರಶ್ನೆಯನ್ನು ಫಿಲ್ಮಿಬೀಟ್ ನಿರ್ದೇಶಕ ಆರ್‌. ಚಂದ್ರು ಮುಂದಿಟ್ಟಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌. ಚಂದ್ರು ಇಲ್ಲ ಎಂದು ಹೇಳಿದ್ದಾರೆ. ಅಪ್ಪು 'ಕಬ್ಜ' ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ನಲ್ಲಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ 'ಕಬ್ಜ' ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಬಹುಕೋಟಿ ವೆಚ್ಚದಲ್ಲಿ 'ಕಬ್ಜ' ಚಿತ್ರವನ್ನು ಆರ್‌. ಚಂದ್ರು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರ್ತಿದೆ. ವಿಶ್ವದಾದ್ಯಂತ 3000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಕಬ್ಜ' ಖದರ್ ಶುರುವಾಗಲಿದೆ. ಚಿತ್ರದಲ್ಲಿ ಬಹುಭಾಷಾ ನಟಿ ಶ್ರಿಯಾ ಶರಣ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಸುನಿಲ್ ಪುರಾಣಿಕ್, ಕೋಟ ಶ್ರೀನಿವಾಸ್ ರಾವ್, ನಬಾವ್ ಶಾ, ಪೋಸಾನಿ ಕೃಷ್ಣಮುರಳಿ, ಮುರಳಿ ಶರ್ಮಾ, ಕಬೀರ್ ದುಹಾನ್ ಸಿಂಗ್ ಚಿತ್ರದ ತಾರಾಗಣದಲ್ಲಿ ಇದ್ದಾರೆ. ರಿಲೀಸ್‌ಗೂ ಮೊದ್ಲೆ ಸಿನಿಮಾ ಕೋಟಿ ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್‌ ಮಾಡಿದೆ.

More from Filmibeat

English summary
Director R Chandru Clarification On Puneeth Rajkumar's cameo in Kabzaa movie. Upendra and Kichcha Sudeepa Starrer Kabzaa To Hit Screens On Puneeth Rajkumar's Birthday. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X