For Quick Alerts
  ALLOW NOTIFICATIONS  
  For Daily Alerts

  ಹುಟ್ಟೂರಿನ ಜನರಿಗೆ ಚಂದ್ರು ನೆರವು: 'ಅನ್ನ ಅಮೃತ'ದೊಂದಿಗೆ ಕಿಚ್ಚ ಸಹಾಯ

  |

  ಕೊರೊನಾ ವೈರಸ್‌ ಸಮಸ್ಯೆಯಿಂದ ಕಷ್ಟಪಡುತ್ತಿರುವ ಜನರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಚಾರಿಟೆಬಲ್ ಸೊಸೈಟಿ ಸಹಾಯ ಮಾಡುತ್ತಿದೆ. 'ಕಿಚ್ಚನ ಕೈ ತುತ್ತು' ಎಂಬ ಹೆಸರಿನಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಿದರು. ಸಿನಿಮಾರಂಗದ ಹಿರಿಯ ಕಲಾವಿದರ ಬೆಂಬಲಕ್ಕೆ ನಿಂತರು.

  ಶಿಕ್ಷಕರ ಕಷ್ಟಕ್ಕೆ ಸ್ಪಂದಿಸಿ ಧನ ಸಹಾಯ ಮಾಡಿದರು. ಚಿತ್ರದುರ್ಗ ಕೋಟೆಯ ಗೈಡ್‌ಗಳಿಗೆ ನರವು ನೀಡಿದರು. ಹೀಗೆ ನಿರಂತರವಾಗಿ ನೊಂದವರ ಜೊತೆ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ನಿಂತಿದೆ. ಮತ್ತೊಂದೆಡೆ ನಿರ್ದೇಶಕ ಆರ್ ಚಂದ್ರು ಸಹ ತಮ್ಮದೇ ರೀತಿಯಲ್ಲಿ, ತಮ್ಮ ಕೈಲಾದ ಸಹಾಯವನ್ನು ಮಾಡುತ್ತಲೇ ಇದ್ದಾರೆ. ಉಪ್ಪಿ ಫೌಂಡೇಶನ್ ಜೊತೆ ಸಹಕರಿಸಿದರು. ಈಗ ಹುಟ್ಟೂರಿನ ಜನರ ಸಹಾಯ ಮಾಡುವುದರ ಮೂಲಕ ಜೊತೆಯಾಗಿದ್ದಾರೆ. ಮುಂದೆ ಓದಿ...

  ನಿರ್ದೇಶಕ ಆರ್.ಚಂದ್ರು ಮತ್ತು 'ಕಬ್ಜ' ಚಿತ್ರತಂಡದಿಂದ 1ಲಕ್ಷ ರೂ. ನೆರವುನಿರ್ದೇಶಕ ಆರ್.ಚಂದ್ರು ಮತ್ತು 'ಕಬ್ಜ' ಚಿತ್ರತಂಡದಿಂದ 1ಲಕ್ಷ ರೂ. ನೆರವು

  10 ಸಾವಿರ ದಿನಸಿ ಕಿಟ್ ವಿತರಣೆ

  10 ಸಾವಿರ ದಿನಸಿ ಕಿಟ್ ವಿತರಣೆ

  ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಕಡೆಯಿಂದ ಸುಮಾರು 10 ಸಾವಿರ ದಿನಸಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಈ ಕುರಿತು ಖುದ್ದು ಸ್ವತಃ ಮಾತನಾಡಿದ್ದು, ''ನೀವೆಲ್ಲರು ನಮ್ಮವರು, ನಿಮಗಾಗಿ ಈ ನಿಮ್ಮ ಪ್ರೀತಿಯ ಕಿಚ್ಚನ ಕೈ ತುತ್ತ 'ಅನ್ನ ಅಮೃತ'. ಪ್ರೀತಿಯಿಂದ 10000 ದಿನಸಿ ಕಿಟ್‌ಗಳನ್ನು ನನ್ನ ಮನೆಯ ಸದಸ್ಯರಾದ ನಿಮಗೆ ಪ್ರೀತಿಯಿಂದ ಕಳಿಸಿ ಕೊಟ್ಟಿದ್ದೇನೆ. ನಾನೆಂದು ಸದಾ ನಿಮ್ಮೊಂದಿಗೆ, ನಿಮ್ಮ ಪ್ರೀತಿಯ ಕಿಚ್ಚ ಸುದೀಪ'' ಎಂದು ತಿಳಿಸಿದ್ದಾರೆ.

  ಹುಟ್ಟೂರಿನ ಜನರಿಗೆ ಚಂದ್ರು ಸಹಾಯ

  ಹುಟ್ಟೂರಿನ ಜನರಿಗೆ ಚಂದ್ರು ಸಹಾಯ

  ಕೋವಿಡ್ ಕಾರಣದಿಂದ ಹಳ್ಳಿ ಜನರು ಸಂಕಷ್ಟದಲ್ಲಿದ್ದಾರೆ. ಇದನ್ನು ಗಮನಿಸಿದ ನಿರ್ದೇಶಕ ಆರ್ ಚಂದ್ರು, ತಮ್ಮ ಸ್ವಗ್ರಾಮದ ಸಾವಿರ ಕುಟುಂಬಗಳಿಗೆ ತಲಾ 25 ಕೆಜಿ ಅಕ್ಕಿ ವಿತರಿಸಿದ್ದಾರೆ. ಆರ್ ಚಂದ್ರು ಮೂಲತಃ ಚಿಕ್ಕಬಳ್ಳಾಪುರದ ಕೇಶಾವರ ಗ್ರಾಮದವರು. ಹುಟ್ಟೂರಿನ ಗ್ರಾಮಸ್ಥರಿಗೆ ಚಂದ್ರು ಸಹಾಯ ಮಾಡುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

  ಉಪ್ಪಿ ಫೌಂಡೇಶನ್‌ಗೆ ದೇಣಿಗೆ

  ಉಪ್ಪಿ ಫೌಂಡೇಶನ್‌ಗೆ ದೇಣಿಗೆ

  ಉಪೇಂದ್ರ ತಮ್ಮ ಫೌಂಡೇಶನ್ ಮೂಲಕ ಚಿತ್ರರಂಗ ಹಾಗು ಜನಸಾಮಾನ್ಯರಿಗೆ ಸಹಾಯ ಮಾಡಿದರು. ಈ ವೇಳೆ ನಿರ್ದೇಶಕ ಆರ್ ಚಂದ್ರು, ಕಬ್ಜ ಚಿತ್ರತಂಡದ ಪರವಾಗಿ 1 ಲಕ್ಷ ಸಾವಿರ ರೂಪಾಯಿ ದೇಣಿಗೆ ನೀಡಿದ್ದರು. ಇದರ ಜೊತೆಗೆ ಖುದ್ದು ಚಂದ್ರು ಅವರೇ ಹಲವು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ.

  Prashanth Neel, Yash ಈ ರೀತಿ ಮಾಡ್ತಾರೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ | Filmibeat Kannada
  ಹರ್ಷಿಕಾ-ಭುವನ್-ಚೇತನ್

  ಹರ್ಷಿಕಾ-ಭುವನ್-ಚೇತನ್

  ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಹಾಗೂ ಆ ದಿನಗಳು ಖ್ಯಾತಿಯ ಚೇತನ್ ತಮ್ಮ ಫೌಂಡೇಶನ್ ಕಡೆಯಿಂದ ವೈಯಕ್ತಿಕವಾಗಿ ಸಹಾಯ ಮಾಡುತ್ತಿದ್ದಾರೆ. ಹರ್ಷಿಕಾ-ಭುವನ್ ಜೋಡಿಯಾಗಿ ಬೆಂಗಳೂರು, ಕೊಡಗು, ಮೈಸೂರು ಸುತ್ತಮುತ್ತ ನೆರವು ನೀಡಿದ್ದಾರೆ. ಚೇತನ್ ಅಹಿಂಸಾ ನಗರದ ಹೊರಗೆ ಗುಡ್ಡಗಾಡು ಪ್ರದೇಶದಲ್ಲಿ, ಸ್ಲಂ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

  English summary
  Sandalwood director R Chandru distributes food kits to 1000 families of his home town and kiccha sudeep distributes 10000 food kits to his fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X