Don't Miss!
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Sports
Ranji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳು
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮರೇಶ್ವರನ ಮಗ ಅರ್ಕೇಶ್ವರನ 'ಕಬ್ಜ' ಕಥೆ.. ಬ್ರಿಟೀಷರ ವಿರುದ್ಧ ತಂದೆ ಹೋರಾಟ: ಭೂಗತ ಲೋಕದಲ್ಲಿ ಮಗನ ಹಾರಾಟ!
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ 'ಕಬ್ಜ' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ. ಸದ್ಯ ಹಿಂದಿ ಟೀಸರ್ ಕೂಡ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಸಿನಿಮಾ ಕಥೆ ಏನು ಎನ್ನುವುದರ ಬಗ್ಗೆ ಚಿತ್ರತಂಡ ಸಣ್ಣ ಸುಳಿವು ಕೊಟ್ಟಿದೆ.
ಪ್ರತಿ ಫ್ರೇಮ್‌ನಲ್ಲೂ 'ಕಬ್ಜ' ಸೂಪರ್ ಹಿಟ್ 'KGF' ಸಿನಿಮಾವನ್ನು ನೆನಪಿಸುತ್ತಿದೆ. ಅದ್ಧೂರಿ ಮೇಕಿಂಗ್, ಹೈವೋಲ್ಟೇಜ್ ಆಕ್ಷನ್ ಚಿತ್ರದಲ್ಲಿರೋದು ಗೊತ್ತಾಗುತ್ತಿದೆ. ಬಹಳ ಅದ್ಧೂರಿಯಾಗಿ ಈ ಗ್ಯಾಂಗ್‌ಸ್ಟರ್ ಕಥೆಯನ್ನು ಆರ್. ಚಂದ್ರು ಹೇಳುವುದಕ್ಕೆ ಬರುತ್ತಿದ್ದಾರೆ. ಈಗಾಗಲೇ ಭರ್ಜರಿ ಮೊತ್ತಕ್ಕೆ ಚಿತ್ರದ ಹಿಂದಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲಾಗಿದೆ. ತಮಿಳುನಾಡು ರೈಟ್ಸ್ ಬಗ್ಗೆಯೂ ಚರ್ಚೆ ನಡೀತಿದೆ. ನಿರ್ದೇಶಕರು ಶೀಘ್ರದಲ್ಲೇ ಅದ್ಧೂರಿ ಈವೆಂಟ್ ಮಾಡಿ 'ಕಬ್ಜ' ರಿಲೀಸ್ ಡೇಟ್ ಘೋಷಿಸುವ ಲೆಕ್ಕಾಚಾರದಲ್ಲಿದ್ದಾರೆ.
ಕಿಚ್ಚ
ಸುದೀಪ್-ಉಪೇಂದ್ರ
ಕಾಂಬಿನೇಷನ್
ಸಿನಿಮಾ
'ಕಬ್ಜ'
ಮೇಲೆ
ಬಾಲಿವುಡ್
ಕಣ್ಣು!
ಆರ್. ಚಂದ್ರು ನಿರ್ದೇಶನದ ರೆಟ್ರೋ ಸ್ಟೈಲ್ ಗ್ಯಾಂಗ್‌ಸ್ಟರ್ ಸಿನಿಮಾ 'ಕಬ್ಜ'. ರಿಯಲ್ ಸ್ಟಾರ್ ಉಪೇಂದ್ರ ಜೋಡಿಯಾಗಿ ಶ್ರಿಯಾ ಶರಣ್ ಮಿಂಚಿದ್ದಾರೆ. ಕಿಚ್ಚ ಸುದೀಪ್ ಕೀ ರೋಲ್ ಒಂದನ್ನು ಪ್ಲೇ ಮಾಡಿದ್ದಾರೆ. ಸಿನಿಮಾ ಕಥೆ ಏನು? ಎನ್ನುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಇರಲಿಲ್ಲ. ಇದೇ ಮೊದಲ ಬಾರಿಗೆ ನಿರ್ದೇಶಕರು ಸಿನಿಮಾ ಕಥೆಯ ಹಿಂಟ್ ಬಿಟ್ಟುಕೊಟ್ಟಿದ್ದಾರೆ.

ಅಮರೇಶ್ವರನ ಮಗ ಅರ್ಕೇಶ್ವರನ ಕಥೆ
ಹಿಂದಿ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಆರ್. ಚಂದ್ರು ಚಿತ್ರದ ಕಥೆ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದಾರೆ. 'ಕಬ್ಜ' ಸಿನಿಮಾ ಕಥೆ 1947ರಿಂದ ಆರಂಭವಾಗುತ್ತದೆ. ತಂದೆ ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರ ಬ್ರಿಟೀಷರಿಂದ ಅಸುನೀಗುತ್ತಾನೆ. ಮುಂದೆ ಆತನ ಮಗ ಅರ್ಕೇಶ್ವರ ಭೂಗತಲೋಕದ ರಾಜನಾಗುವ ಕಥೆಯನ್ನು ಆರ್. ಚಂದ್ರು ಹೇಳಲು ಬರ್ತಿದ್ದಾರೆ. 1960ರಿಂದ 1984ರ ನಡುವಿನ ಅವಧಿಯಲ್ಲಿ ಡಾನ್ ಆಗಿ ಅರ್ಕೇಶ್ವರನ ಆರ್ಭಟ ಹೇಗಿರುತ್ತೆ ಎನ್ನುವುದನ್ನು ಕಟ್ಟಿಕೊಡಲಾಗುತ್ತಿದೆ.
ಉಪ್ಪಿಗೂ
'ಕಾಂತಾರ'ದಂತಹ
ಸಿನಿಮಾ
ಮಾಡೋ
ಆಸೆ:
ಶೀಘ್ರದಲ್ಲೇ
ರಿಷಬ್
ಜೊತೆ
ಚರ್ಚೆ!

ಭಾರೀ ಮೊತ್ತಕ್ಕೆ ಹಿಂದಿ ರೈಟ್ಸ್ ಸೇಲ್
ಹಿಂದಿ ಬೆಲ್ಟ್‌ನಲ್ಲಿ ಇತ್ತೀಚೆಗೆ ಕನ್ನಡ ಸಿನಿಮಾಗಳು ಜೋರಾಗಿ ಸದ್ದು ಮಾಡ್ತಿವೆ. 'KGF' ಸರಣಿ ಹಾಗೂ 'ಕಾಂತಾರ' ನಂತರ 'ಕಬ್ಜ' ವಿಶ್ವದಾದ್ಯಂತ ಸದ್ದು ಮಾಡುವ ಸುಳಿವು ಸಿಗ್ತಿದೆ. ಆನಂದ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಭಾರೀ ಮೊತ್ತಕ್ಕೆ ಹಿಂದಿ ರೈಟ್ಸ್ ಖರೀದಿಸಿದ್ದು ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಬಾಲಿವುಡ್‌ನಲ್ಲೂ 'ಕಬ್ಜ' ಕಾರುಬಾರು ನಡೆಯುವ ಸಾಧ್ಯತೆಯಿದೆ.

ಬಹುನಿರೀಕ್ಷಿತ ಸಿನಿಮಾ 'ಕಬ್ಜ'
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ 'ಕಬ್ಜ' ಸಿನಿಮಾ ತೆರೆಗೆ ಬರಬೇಕಿತ್ತು. ಕರೋನ ಹಾವಳಿಯಿಂದ ಸಿನಿಮಾ ರಿಲೀಸ್ ತಡವಾಗಿತ್ತು. ಮುಂದಿನ ವರ್ಷ ಸಿನಿಮಾ ತೆರೆಗಪ್ಪಳಿಸಲಿದೆ ಎಂದು ನಿರ್ದೇಶಕ ಆರ್,ಚಂದ್ರು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಕೋಟ ಶ್ರೀನಿವಾಸ್ ರಾವ್, ಸಮುದ್ರ ಖನಿ, ಡ್ಯಾನಿಶ್ ಅಖ್ತರ್, ಮನೋಜ್ ಬಾಜ್‌ಪೇ, ನವಾಬ್ ಶಾ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ.

2 ಭಾಗಗಳಾಗಿ 'ಕಬ್ಜ' ಸಿನಿಮಾ ತೆರೆಗೆ
ಮೊದಲಿಗೆ 'ಕಬ್ಜ' ಸಿನಿಮಾ ಒಂದೇ ಭಾಗದಲ್ಲಿ ತೆರೆಗೆ ಬರುತ್ತೆ ಎನ್ನಲಾಗಿತ್ತು. ಲಾಕ್‌ಡೌನ್ ಸಮಯಲ್ಲಿ ಕಥೆಯನ್ನು ಮತ್ತಷ್ಟು ವಿಸ್ತರಿಸಿ ಕಥೇ ಸಿದ್ಧಪಡಿಸಲಾಗಿದೆ. ಮುಕುಂದ ಮುರಾರಿ ನಂತರ ಸುದೀಪ್ ಹಾಗೂ ಉಪೇಂದ್ರ ಒಟ್ಟಿಗೆ ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್ ಸ್ಪೆಷಲ್ ರೋಲ್‌ನಲ್ಲಿ ಬಣ್ಣ ಹಚ್ಚಿದ್ದು, ಚಿತ್ರದಲ್ಲಿ ಅವರಿಗೆ ಸಿಕ್ಕಾಪಟ್ಟೆ ಇಂಪಾರ್ಟೆನ್ಸ್ ಇದೆ.