ನಿರ್ದೇಶಕ ಆರ್.ಚಂದ್ರು ಹೈದರಾಬಾದ್ ನಲ್ಲಿ ಬೀಡುಬಿಟ್ಟಿರೋದೇಕೆ.?
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಶನ್ ನ 'ಕಬ್ಜ' ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಗ್ರ್ಯಾಂಡ್ ಆಗಿ ನಡೆಯಿತು. ಮುಹೂರ್ತ ಸಮಾರಂಭ ಮುಗಿಯುತ್ತಿದ್ದಂತೆಯೇ, ನಿರ್ದೇಶಕ ಆರ್.ಚಂದ್ರು ಹೈದರಾಬಾದ್ ಗೆ ಹಾರಿದ್ದಾರೆ. ಸದ್ಯ ಹೈದರಾಬಾದ್ ನಲ್ಲೇ ಆರ್.ಚಂದ್ರು ಬೀಡುಬಿಟ್ಟಿದ್ದಾರೆ.
ಇದಕ್ಕೆ ಕಾರಣ ಏನಪ್ಪಾ ಅಂದ್ರೆ, 'ಕಬ್ಜ' ಚಿತ್ರಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಿರ್ದೇಶಕ ಆರ್.ಚಂದ್ರು ಅದ್ಧೂರಿ ಸೆಟ್ ರೆಡಿ ಮಾಡಿಸುತ್ತಿದ್ದಾರೆ. ಮುಂದಿನ ತಿಂಗಳು.. ಅಂದ್ರೆ ಡಿಸೆಂಬರ್ ನಿಂದ 'ಕಬ್ಜ' ಚಿತ್ರದ ಶೂಟಿಂಗ್ ಶುರು ಆಗಲಿದ್ದು, ಭೂಗತ ಲೋಕದ ಚಟುವಟಿಕೆಗಳು ನಡೆಯುವ ತಾಣದ ಸೆಟ್ ಗಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ತಯಾರಿ ನಡೆಯುತ್ತಿದೆ.
'ಕಬ್ಜ' ಚಿತ್ರಕ್ಕೆ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಆರ್.ಚಂದ್ರು ಹೊತ್ತಿದ್ದಾರೆ. ಹೀಗಾಗಿ, ಪ್ರತಿಯೊಂದನ್ನೂ ಪರ್ಫೆಕ್ಟ್ ಆಗಿ ಪ್ಲಾನ್ ಮಾಡಿಕೊಂಡಿದ್ದಾರೆ ಆರ್.ಚಂದ್ರು.

ತೆಲುಗು ಸಿನಿ ಅಂಗಳದಲ್ಲೂ ಉಪೇಂದ್ರಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇರೋದ್ರಿಂದ 'ಕಬ್ಜ' ಚಿತ್ರದ ತೆಲುಗು ವರ್ಷನ್ ನ ಮುಹೂರ್ತವನ್ನೂ ಭರ್ಜರಿಯಾಗಿ ಮಾಡಲು ಆರ್.ಚಂದ್ರು ಸಿದ್ಧವಾಗಿದ್ದಾರೆ.

ತೆಲುಗಿನಲ್ಲಿ 'ಕಬ್ಜ' ಮುಹೂರ್ತ ನೆರವೇರಿದ ನಂತರ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ 'ಕಬ್ಜ' ತೆರೆಗೆ ಬರಲಿದೆ. ಪ್ರಕಾಶ್ ರಾಜ್, ನಾನಾ ಪಾಟೇಕರ್, ಸೇರಿದಂತೆ ವಿವಿಧ ಭಾಷೆಯ ಏಳು ಖಳನಟರು 'ಕಬ್ಜ' ಚಿತ್ರದಲ್ಲಿ ಉಪೇಂದ್ರ ವಿರುದ್ಧ ತೊಡೆ ತಟ್ಟಲಿದ್ದಾರೆ. ಆದ್ರೆ ಇನ್ನೂ ಉಪೇಂದ್ರ ಜೊತೆ ಡ್ಯುಯೆಟ್ ಹಾಡುವ ನಾಯಕಿಯ ಆಯ್ಕೆ ನಡೆದಿಲ್ಲ.


Click it and Unblock the Notifications











