For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಿರ್ದೇಶಕ ಆರ್ ಚಂದ್ರು ಪಡೆದ ಮೊದಲ ಸಂಬಳ ಎಷ್ಟು?

  |

  2008ರಲ್ಲಿ 'ತಾಜ್‌ಮಹಲ್' ಎಂಬ ಸಿನಿಮಾ ಬರುತ್ತೆ. ಈ ಚಿತ್ರದ ಮೂಲಕ ಆರ್ ಚಂದ್ರು ನಿರ್ದೇಶಕರಾಗಿ ಇಂಡಸ್ಟ್ರಿ ಪ್ರವೇಶ ಮಾಡ್ತಾರೆ. ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಆರ್ ಚಂದ್ರು ಮೊದಲ ಹೆಜ್ಜೆಯಲ್ಲೆ ಸೆಂಚುರಿ ಬಾರಿಸ್ತಾರೆ. ಅಲ್ಲಿಂದ ಸ್ಟಾರ್‌ ನಟರ ಅಚ್ಚುಮೆಚ್ಚಿನ ನಿರ್ದೇಶಕ ಆಗ್ತಾರೆ.

  DIRECTORS DIARY | ಕೋಣನಕುಂಟೆ ರಮ್ಯಾ ಬಾರ್ ನಲ್ಲಿ ಡೈಲಿ ಮಲಗುತ್ತಿದ್ದೆ | R. Chandru | Filmibeat Kannada

  ಆದ್ರೆ, ಆರ್ ಚಂದ್ರು ನಿರ್ದೇಶಕನಾಗಿ ಕೆಲಸ ಮಾಡುವುದಕ್ಕೂ ಮುಂಚೆ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು. ಸುಮಾರು ಐದಾರು ವರ್ಷಗಳ ಕಾಲ ಸಹಾಯಕನಾಗಿ, ಸಹಾಯಕ ನಿರ್ದೇಶಕನಾಗಿ, ಬರಹಗಾರನಾಗಿ ಕಾರ್ಯನಿರ್ವಹಿಸಿದ್ದರು ಎನ್ನುವುದು ರೋಚಕ ಕಥೆ. ಈ ಹಂತದಲ್ಲಿ ಆರ್ ಚಂದ್ರ ಪಡೆದ ಮೊದಲ ಸಂಬಳ ಎಷ್ಟು ಗೊತ್ತಾ? ಮುಂದೆ ಓದಿ...

  ಎಸ್‌ ನಾರಾಯಣ್ ಬಳಿ ಕೆಲಸ

  ಎಸ್‌ ನಾರಾಯಣ್ ಬಳಿ ಕೆಲಸ

  ಚಿಕ್ಕಬಳ್ಳಾಪುರದ ಕೇಶಾವರದಿಂದ ಬೆಂಗಳೂರಿಗೆ ಬಂದ ಆರ್ ಚಂದ್ರು ಸ್ನೇಹಿತರ ಪರಿಚಯದೊಂದಿಗೆ ಎಸ್‌ ನಾರಾಯಣ್ ಅವರ ತಂಡದಲ್ಲಿ ಕೆಲಸಕ್ಕೆ ಸೇರುತ್ತಾರೆ. ಆರಂಭದಲ್ಲಿ ಬರಹಗಾರನಾಗಿ ಚಂದ್ರು ಕೆಲಸ ಪಡೆದುಕೊಳ್ಳುತ್ತಾರೆ. ಉಳಿಯಲು ಮನೆ ಸಹ ಇರುವುದಿಲ್ಲ. ಕೋಣನಕುಂಟೆ ಬಳಿಯಿರುವ ಸ್ನೇಹಿತನ ಜೊತೆ ರಮ್ಯಾ ಬಾರ್‌ನಲ್ಲಿ ಉಳಿದುಕೊಳ್ಳುವ ಆರ್ ಚಂದ್ರು ಅಲ್ಲಿಂದ ಪ್ರತಿದಿನ ಧಾರಾವಾಹಿ ಘಟಕಕ್ಕೆ ಹೋಗುತ್ತಿರುತ್ತಾರೆ.

  'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು

  ಆರ್ ಚಂದ್ರು ಪಡೆದ ಮೊದಲ ವೇತನ?

  ಆರ್ ಚಂದ್ರು ಪಡೆದ ಮೊದಲ ವೇತನ?

  ಆರ್ ಚಂದ್ರು ಇಂದು ನೂರು ಕೋಟಿ ಸಿನಿಮಾ ಮಾಡುತ್ತಿದ್ದಾರೆ. ಏಳು ಭಾಷೆಯಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಧಾರಾವಾಹಿಯಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರು ಮೊದಲ ವೇತನವಾಗಿ 2000 ರೂಪಾಯಿ ಪಡೆದಿದ್ದೆ ಎಂದು 'ಫಿಲ್ಮಿಬೀಟ್ ಡೈರೆಕ್ಟರ್ ಡೈರಿ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

  ಐದು ವರ್ಷದ ಅನುಭವ

  ಐದು ವರ್ಷದ ಅನುಭವ

  ಎಸ್‌ ನಾರಾಯಣ್ ಅವರ ತಂಡದಲ್ಲಿ ಸುಮಾರು ಐದು ವರ್ಷ ಆರ್ ಚಂದ್ರು ಕೆಲಸ ಮಾಡಿದ್ದಾರೆ. ಆರಂಭದಲ್ಲಿ 2000 ರೂಪಾಯಿ ಸಂಬಳ ಪಡೆದ ಚಂದ್ರು, ನಂತರ 2500, ಆಮೇಲೆ 3000 ತದನಂತರ 3500 ರೂಪಾಯಿವರೆಗೂ ವೇತನ ಪಡೆದಿದ್ದರು.

  ಆಗಲೇ ಹುಟ್ಟಿದ್ದು ಮೊದಲ ಕಥೆ

  ಆಗಲೇ ಹುಟ್ಟಿದ್ದು ಮೊದಲ ಕಥೆ

  ಅಷ್ಟೊತ್ತಿಗಾಗಲೇ ಚಂದ್ರು ಒಂದು ಕಥೆ ಮಾಡ್ಕೊಂಡು ನಿರ್ಮಾಪಕರನ್ನು ಹುಡುಕಲು ಆರಂಭಿಸಿದ್ದರು. ಚಂದ್ರು ಜೊತೆ ನಟ ಗಣೇಶ್ ಸಹ ಸಾಥ್ ನೀಡುತ್ತಿದ್ದರು. ಎಸ್ ನಾರಾಯಣ್ ಅವರು ಚಂದ್ರಚಕೋರಿ ಸಿನಿಮಾ ಮಾಡ್ತಿದ್ರು. ಈ ಸಮಯದಲ್ಲಿ 4500 ಸಂಬಳ ತಗೊಳ್ತಿದ್ರು. ಈ ಸಿನಿಮಾ ಚಿತ್ರೀಕರಣ ಆಗ್ತಿರುವ ಸಮಯದಲ್ಲಿ ಚಂದ್ರು ಧಾರಾವಾಹಿ ತಂಡವನ್ನು ಬಿಟ್ಟರು.

  English summary
  Kannada Film Director R Chandru shares his cinema journey and his first salary with Filmibeat kannada director dairy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X