ಪ್ರೇಮ್ ಅವರಿಗೇ ಟಾಂಗ್ ಕೊಟ್ಟ 'ಜೋಗಿ' ಯೋಗೇಶ
''ಬೆಂಗಳೂರ್ ಮೆಜೆಸ್ಟಿಕ್ ನಲ್ಲಿ ಅಣ್ಣಮ್ಮನ ದೇವಸ್ಥಾನದ ಹತ್ತಿರ ಬಂದು ಯೋಗೇಶ ಅಂತ ಹೇಳು ನನ್ನ ಹತ್ತಿರ ಕರೆದುಕೊಂಡು ಬರುತ್ತಾರೆ.'' ಹೌದು, ಈ ರೀತಿ 'ಜೋಗಿ' ಸಿನಿಮಾದಲ್ಲಿ ಹೇಳಿ 'ಕಬ್ಬಡಿ ಕಬ್ಬಡಿ ಕಾರ' ಡೈಲಾಗ್ ಮೂಲಕ ಫೇಮಸ್ ಆಗಿದ್ದ ರಘು ರಾಮ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
'ಜೋಗಿ' ಸಿನಿಮಾದ ಯೋಗೇಶ ಪಾತ್ರ ನಟ, ನಿರ್ದೇಶಕ ರಘು ರಾಮ್ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು. ಆದರೆ, ಈಗ ಅದೇ ಸಿನಿಮಾದ ನಿರ್ದೇಶಕ ಪ್ರೇಮ್ ಶೋ ಮ್ಯಾನ್ ಅಲ್ಲ ಎಂದು ರಘು ರಾಮ್ ಬರೆದುಕೊಂಡಿದ್ದಾರೆ.
'ದಿ ವಿಲನ್' ಸಿನಿಮಾ ಬಗ್ಗೆ ಮಾತನಾಡುತ್ತಾ ನಟಿ ರಕ್ಷಿತಾ 'ಪ್ರೇಮಲೋಕ' ಹಾಗೂ 'ಟಗರು' ಸಿನಿಮಾದ ಉದಾಹರಣೆ ನೀಡಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅದೇ ರೀತಿ ಈಗ ಅವರ ಮಾತಿಗೆ ನಿರ್ದೇಶಕ ರಘು ರಾಮ್ ಉತ್ತರ ನೀಡಿದ್ದಾರೆ. ಮುಂದೆ ಓದಿ..

'ಪ್ರೇಮಲೋಕ' ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು
''ರವಿ ಸರ್ ಬಗ್ಗೆ 'ಪ್ರೇಮಲೋಕ' ಚಿತ್ರದ ಬಗ್ಗೆ ಮಾತನಾಡುವುದಕ್ಕೂ ಮೊದಲಿಗೆ ಯೋಗ್ಯತೆ ಇರಬೇಕು. 'ಪ್ರೇಮಲೋಕ' ಸಿನಿಮಾ ನೂರಾರು ಇತಿಹಾಸವನ್ನು ರೂಪಿಸಿದ ಸಿನಿಮಾ.'' ಎಂದಿರುವ ಅವರು ಟ್ಟಿಟರ್ ಮೂಲಕ ನೇರವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ರಿಯಲ್ ಶೋ ಮ್ಯಾನ್ ನಮ್ಮ ರವಿ ಸರ್
ರವಿಚಂದ್ರನ್ ಅವರ ಪಕ್ಕಾ ಅಭಿಮಾನಿಯಾಗಿರುವ ರಘು ರಾಮ್ ''ನಮ್ಮ ಚಿತ್ರರಂಗದ ರಿಯಲ್ ಶೋ ಮ್ಯಾನ್ ನಮ್ಮ ರವಿ ಸರ್. ನಾಲ್ಕೈದು ಸಿನಿಮಾ ಮಾಡಿದವರೆಲ್ಲ ನಾನೇ ಶೋ ಮ್ಯಾನ್ ಅಂತ ಹಾಕಿಕೊಳ್ಳುತ್ತಾರೆ. ಆದರೆ, ಅದೇ ನಿಜವಾದ 'ಭ್ರಮೆ'' ಎಂದಿದ್ದಾರೆ.
ಮಾತನಾಡುವ ಮೊದಲು ಯೋಚಿಸಬೇಕು
''ಟಗರು' ಇಪ್ಪತ್ತೈದು ವಾರ ಓಡಿ ಹಲವಾರು ದಾಖಲೆಗಳನ್ನು ಸೃಷ್ಟಿ ಮಾಡಿದ ಸಿನಿಮಾ ಇಂತಹ ಸಿನಿಮಾಗಳ ಬಗ್ಗೆ ಮಾತನಾಡುವ ಮೊದಲು ಕೊಂಚ ಯೋಚಿಸಬೇಕು ಒಂದು ಚಿತ್ರಕ್ಕೆ ಕಥೆಯ ಜೊತೆಗೆ ಚಿತ್ರಕತೆ ಮತ್ತು ಸಂಗೀತ ಎಷ್ಟು ಮುಖ್ಯ ಎನ್ನುವುದನ್ನು ಸಾಬೀತು ಮಾಡಿದ ಚಿತ್ರಗಳು ಇವೆರಡು.'' - ರಘು ರಾಮ್, ನಿರ್ದೇಶಕ

ಎಲ್ಲರಿಗೂ ಗಾಡ್ ಫಾದರ್ ಇರುವುದಿಲ್ಲ
''ಚಿತ್ರರಂಗದಲ್ಲಿ ಎಲ್ಲರಿಗೂ ಗಾಡ್ ಫಾದರ್ ಇರುವುದಿಲ್ಲ. ನಿಜ ನಾವು ಮಾಡುವ ಕೆಲಸದಲ್ಲಿ ದೇವರನ್ನು ಶ್ರದ್ಧೆಯಿಂದ ತಂದೆಯನ್ನು ಕಂಡರೆ ಮೇಲಿರುವ ನಿಜವಾದ ಗಾಡ್ ಫಾದರ್ ಆಗಿ ಕಾಣುತ್ತಾನೆ'' - ರಘು ರಾಮ್, ನಿರ್ದೇಶಕ
ರಕ್ಷಿತಾ ಬರೆದ ಪತ್ರ ಅಲ್ಲ
ಪ್ರೇಮ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳು ಹೆಚ್ಚಾಗಿತ್ತು. ಈ ವೇಳೆ ಅಭಿಮಾನಿಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರೇಮ್ ಬಗ್ಗೆ ಪತ್ರ ಬರೆದುಕೊಂಡಿದ್ದರು. ಇದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತಾ ಹಾಕಿಕೊಂಡಿದ್ದು, ಇದು ಅವರೇ ಬರೆದ ಪತ್ರ ಎಂದು ಅನೇಕರು ತಪ್ಪು ತಿಳಿದುಕೊಂಡಿದ್ದರು. ಅಂದಹಾಗೆ, ಈ ಬಗ್ಗೆ ಈಗಾಗಲೇ ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











