For Quick Alerts
  ALLOW NOTIFICATIONS  
  For Daily Alerts

  'ಕನಸುಗಾರ'ನ ಜನುಮದಿನಕ್ಕೆ ರಘುರಾಮ್ 'ಅಭಿಮಾನ'ದ ಉಡುಗೊರೆ

  |

  ಮೇ 30ಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬ. ರವಿಮಾಮನ ಅಭಿಮಾನಿಗಳಿಗೆ ಇದು ಬಹಳ ವಿಶೇಷದ ಬರ್ತಡೇ. ಏಕಂದ್ರೆ ಪುಟ್ನಂಜನಿಗೆ ಈ ವರ್ಷ 60ನೇ ಜನುಮದಿನ.

  ಕೊರೊನಾ ಬಿಕ್ಕಟ್ಟು ಇಲ್ಲವಾಗಿದ್ದರೆ ನೆಚ್ಚಿನ ಕಲಾವಿದನ 60ನೇ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡುವ ಸಾಧ್ಯತೆ ಇತ್ತು. ಆದ್ರೆ, ಪರಿಸ್ಥಿತಿ ಕೈ ಕೊಟ್ಟ ಕಾರಣ ದೂರದಿಂದಲೇ 'ಪ್ರೇಮಲೋಕ'ದ ಸರದಾರನಿಗೆ ಶುಭಕೋರಬೇಕಾಗಿದೆ.

  ಇದೀಗ, ನಿರ್ದೇಶಕ ರಘುರಾಮ್ ತಮ್ಮ ನೆಚ್ಚಿನ ಹೀರೋ 60ನೇ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಲು ವಿಶೇಷವಾದ ಟೀಸರ್‌ವೊಂದನ್ನು ತಯಾರು ಮಾಡಿದ್ದಾರೆ. ಮೇ 29ರ ಮಧ್ಯರಾತ್ರಿ ಈ ಟೀಸರ್ ರಿಲೀಸ್ ಮಾಡ್ತಿದ್ದು, ಕ್ರೇಜಿಸ್ಟಾರ್ ಹಾಗೂ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲಿದ್ದಾರೆ.

  ರವಿಚಂದ್ರನ್ ಅವರ ಬಹಳ ಅಪರೂಪದಲ್ಲಿ ಅಪರೂಪದ ಫೋಟೋಗಳನ್ನು ಒಂದು ನಿಮಿಷದ ಟೀಸರ್ ಮೂಲಕ ಜನರಿಗೆ ತೋರಿಸಲು ಸಜ್ಜಾಗಿದ್ದಾರೆ ರಘುರಾಮ್. ಇದರಲ್ಲಿ ಕ್ರೇಜಿಸ್ಟಾರ್‌ರ ಚಿಕ್ಕವಯಸ್ಸಿನ ಫೋಟೋ, ಪ್ರತಿ ವರ್ಷವೂ ರವಿ ಸರ್ ಹೇಗಿದ್ದರು ಎಂಬ ಫೋಟೋಗಳು ಸೇರಿದಂತೆ ಇಲ್ಲಿಯವರೆಗಿನ ಅಪರೂಪದ ಫೋಟೋಗಳು ಈ ಟೀಸರ್‌ನಲ್ಲಿ ನೋಡಬಹುದು ಎಂದು ರಘುರಾಮ್ ಫಿಲ್ಮಿಬೀಟ್‌ಗೆ ತಿಳಿಸಿದರು.

  ರವಿಚಂದ್ರನ್ ಅವರ ಖಾಸಗಿ ಜೀವನದ ಅಂದ್ರೆ ಸಿನಿಮಾ ಬಿಟ್ಟು ಕುಟುಂಬದ ಜೊತೆಗಿನ ಅಪರೂಪ ಫೋಟೋಗಳ ಸಂಗ್ರಹ ಇದಾಗಿರಲಿದೆ ಎಂದು ಕ್ರೇಜಿಸ್ಟಾರ್ ಅಪ್ಪಟ ಅಭಿಮಾನಿಯೂ ಆಗಿರುವ ರಘುರಾಮ್ ಮಾಹಿತಿ ನೀಡಿದರು.

  ಇನ್ನು ರವಿಚಂದ್ರನ್ ಬರ್ತಡೇ ವಿಶೇಷವಾಗಿ ಕನ್ನಡಿಗ ಚಿತ್ರತಂಡವೂ ಟೀಸರ್ ಬಿಡುಗಡೆ ಮಾಡಲಿದೆ. ಹೊಸ ಸಿನಿಮಾಗಳು ಪ್ರಕಟಣೆಯಾಗುವ ನಿರೀಕ್ಷೆ ಇದೆ.

  English summary
  Director Raghuram to release Ravichandran old photos collection teaser on crazy star birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X