'ಯಾರೇ ಬರಲಿ ಯಾರೇ ಇರಲಿ ನಿಮ್ಮ ರೇಂಜ್‌ಗೆ ಯಾರ್ ಇಲ್ಲ'

ಕನ್ನಡದ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್ ವುಡ್ ಸ್ಟಾರ್‌ಗಳಿಗೆ ಮ್ಯೂಸಿಕ್ ಮೂಲಕ ಗೆಲುವು ತಂದುಕೊಟ್ಟಿರುವ ದಿಗ್ಗಜ ಸಂಗೀತ ಮಾಂತ್ರಿಕ ಜನುಮದಿನಕ್ಕೆ ಹಲವರು ಶುಭಾಶಯ ಕೋರಿದ್ದಾರೆ.

ಮಾಸ್ ಹಾಡುಗಳಿಗೆ ಬಾಸ್ ಇದ್ದಂತೆ ಹರಿಕೃಷ್ಣ. ಬಹುಶಃ ಕನ್ನಡದಲ್ಲಿ ಟಪ್ಪಾಂಗುಚ್ಚಿ ಹಾಗೂ ಮಾಸ್‌ ಹಾಡುಗಳ ಟ್ರೆಂಡ್ ಬದಲಿಸಿದ್ದ ಸಂಗೀತ ನಿರ್ದೇಶಕ ಅಂತಾನೇ ಹೇಳಬಹುದು. ಎಷ್ಟೇ ಜನರ ಸಂಗೀತ ನಿರ್ದೇಶಕರು ಬಂದರೂ ಹರಿಕೃಷ್ಣ ಟ್ರೆಂಡ್ ಮಾತ್ರ ಹಾಗೆ ಇರುತ್ತೆ ಎಂದು ಇಂಡಸ್ಟ್ರಿಯಲ್ಲಿ ಅನೇಕರು ಹೇಳುತ್ತಾರೆ.

ಹರಿಕೃಷ್ಣ ಬರ್ತಡೇ ನಿರ್ದೇಶಕ ರಘುರಾಮ್ ಟ್ವಿಟ್ಟರ್‌ ಮೂಲಕ ಶುಭಕೋರಿದ್ದಾರೆ. ''ಯಾರೇ ಬರಲಿ ಯಾರೇ ಇರಲಿ ನಿಮ್ಮ ರೇಂಜ್‌ಗೆ ಯಾರ್ ಇಲ್ಲ, ಗೆಲುವೇ ಬರಲಿ ಸೋಲೇ ಇರಲಿ ಆ ಸ್ಮೈಲ್‌ಲ್ಲಿ ಚೇಂಜ್‌ ಇಲ್ಲ'' ಎಂದು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Director Raghuram Wishes V Harikrishna on his Birthday

''ಹರಿಯ ನಾದಗಳನ್ನ, ಕೃಷ್ಣನನ ವೇದಗಳನ್ನ, ತನ್ನ ಸಂಗೀತದಲ್ಲಿ ಬೆರೆಸಿ ಅವರ ಅಭಿಮಾನಿಗಳಿಗೆ ಸಂಗೀತಾಮೃತವನ್ನು ಬಡಿಸುತ್ತಿರುವ, ವಿ.ಹರಿಕೃಷ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ನಿರ್ದೇಶಕ ರಘುರಾಮ್ ಶುಭಕೋರಿದ್ದಾರೆ.

ಹರಿಕೃಷ್ಣ ಜನುಮದಿನಕ್ಕೆ ಡಿ ಬಾಸ್ ಸಹ ವಿಶ್ ಮಾಡಿದ್ದಾರೆ. ''ತನ್ನ ವೈವಿಧ್ಯಮಯ ಟ್ಯೂನುಗಳಿಂದ ಸಿನಿರಸಿಕರ ಮನಗೆದ್ದಿರುವ ಮ್ಯೂಸಿಕ್ ಮಾಂತ್ರಿಕ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಇನ್ನು ಹೆಚ್ಚು ಕಲಾಸೇವೆ ಹರಿಯಿಂದಾಗಲಿ ಎಂದು ಆಶಿಸುತ್ತೇನೆ'' ಎಂದು ದರ್ಶನ್ ವಿಶ್ ಮಾಡಿದ್ದಾರೆ.

More from Filmibeat

English summary
Kannada Director Raghuram Wishes Music director V Harikrishna on his Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X