For Quick Alerts
  ALLOW NOTIFICATIONS  
  For Daily Alerts

  'ಮಂಕಿ ಸೀನ'ನಿಗೆ ಫಿದಾ ಆದ ರಾಮ್ ಗೋಪಾಲ್ ವರ್ಮಾ: ಧನಂಜಯ್ ಬಗ್ಗೆ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ನ ಡಾಲಿ ಧನಂಜಯ್ ಈಗ ಮಂಕಿ ಸೀನ ಆಗಿ ಅಬ್ಬರಿಸುತ್ತಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟರಾಕ್ಷಸ ಧನಂಜಯ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಟಗರು ಡಾಲಿ ನಂತರ ಧನಂಜಯ್ ಮತ್ತೊಮ್ಮೆ ರಾ ಲುಕ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

  ಸುಕ್ಕಾ ಸೂರಿ ಮತ್ತು ಧನಂಜಯ್ ಕಾಂಬಿನೇಷನ್ ಮತ್ತೊಮ್ಮೆ ಮೋಡಿ ಮಾಡಿದ್ದು, ಸೂರಿಯ ಸುಕ್ಕ ಪ್ಲೇವರ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷೆಯಲ್ಲೂ ಘಮ್ ಎನ್ನುತ್ತಿದೆ. ಭಯಾನಕ ಪಾಪ್ ಕಾರ್ನ್ ಮಂಕಿ ಟೈಗರ್ ಗೆ ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಫಿದಾ ಆಗಿದ್ದಾರೆ. ನಟಭಯಂಕರ ಧನಂಜಯ್ ಅಭಿನಯ ಮತ್ತು ಸಿನಿಮಾದ ಬಗ್ಗೆ ವರ್ಮಾ ಹೇಳಿದ್ದು ಹೀಗೆ...

  ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!

  ಪಾಪ್ ಕಾರ್ನ್ ತಿನ್ನುತ್ತ ಮಂಕಿಯಂತೆ ಹಾರುತ್ತಿದ್ದರು

  ಧನಂಜಯ್ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ವರ್ಮಾ "ಧನಂಜಯ್ ನಿಮಗೆ ಅಭಿನಂದನೆಗಳು. ನೀವು ಈ ಸೂಪರ್ ಯಶಸ್ವಿಗೆ ಅರ್ಹರು. ಸಿನಿಮಾದಲ್ಲಿ ನೀವು ಹುಲಿಯಂತೆ ಘರ್ಜಿಸುತ್ತಿರುವಾಗ ಪ್ರೇಕ್ಷಕರು ಪಾಪ್ ಕಾರ್ನ್ ತಿನ್ನುತ್ತ ಮತ್ತು ಸಖತ್ ಸಂಭ್ರಮದಲ್ಲಿ ಮಂಕಿಯಂತೆ ಹಾರುತ್ತಿದ್ದರು ಎಂದು ನಾನು ಕೇಳಿದೆ" ಎಂದು ಹೇಳಿದ್ದಾರೆ.

  ಧನಂಜಯ್ ಹೇಳಿದ್ದೇನು?

  ಧನಂಜಯ್ ಹೇಳಿದ್ದೇನು?

  ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿರುವ ಮಾತುಗಳನ್ನು ಕೇಳಿ ಧನಂಜಯ್ ಸಂತಸಪಟ್ಟಿದ್ದಾರೆ. ವರ್ಮಾ ಮಾತಿಗೆ ಪ್ರತಿಕ್ರಿಯೆ ನೀಡಿರುವ ಧನಂಜಯ್ ಧನ್ಯವಾದಗಳನ್ನು ತಿಳಿಸಿ ವರ್ಮಾಮೇಲಿನ ಅತಿಯಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'

  ವರ್ಮಾ ಜೊತೆ ಸಿನಿಮಾ ಮಾಡಿರುವ ಡಾಲಿ

  ವರ್ಮಾ ಜೊತೆ ಸಿನಿಮಾ ಮಾಡಿರುವ ಡಾಲಿ

  ಟಗರು ಚಿತ್ರದ ಡಾಲಿ ಪಾತ್ರ ನೋಡಿ ಮನಸೋತಿದ್ದ ರಾಮ್ ಗೋಪಾಲ್ ವರ್ಮಾ ಧನಂಜಯ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದರಂತೆ ಮರ್ಮಾ ನಿರ್ಮಾಣದಲ್ಲಿ ಧನಂಜಯ್ ಭೈರವ ಗೀತಾ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದರು. ಈ ಸಿನಿಮಾ ತೆಲುಗು ಮತ್ತು ಕನ್ನಡ ಎರಡೂ ಭಾಷೆಯಲ್ಲು ತೆರೆಗೆ ಬಂದಿತ್ತು.

  ಪಾಪ್ ಕಾರ್ನ್ ಮಂಕಿ ಟೈಗರ್

  ಪಾಪ್ ಕಾರ್ನ್ ಮಂಕಿ ಟೈಗರ್

  ಶಿವರಾತ್ರಿ ದಿನ ತೆರೆಗೆ ಬಂದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ಮೂರು ದಿನಗಳು ಕಳೆದಿವೆ. ಮೂರು ದಿನಗಳಲ್ಲಿ ಸುಮಾರು 7 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಸೂರಿ ಮತ್ತು ಧನಂಜಯ್ ಪಾಪ್ ಕಾರ್ನ್ ಮಂಕಿ ಟೈಗರ್ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ.

  English summary
  Director Ram Gopal Varma likes Dhananjay starrer Popcorn Monkey Tiger. This movie is directed by Soori.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X