"ಸಿನ್ಮಾ ರಿಲೀಸ್ ಬಳಿಕ ಸ್ಕ್ರೀನ್‌ಪ್ಲೇ ಬರೆಯುವ ಕೆಲಸ ಆರಂಭವಾಗಿದೆ": ರಾಮ್‌ಗೋಪಾಲ್ ವರ್ಮಾ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಜನರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬಹುತೇಕರು ಈ ಬಗ್ಗೆ ಮೌನ ವಹಿಸಿದ್ದಾರೆ. ಇದೀಗ ಬಹುಭಾಷಾ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸರಣಿ ಟ್ವೀಟ್ ಮಾಡಿದ್ದಾರೆ.
ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿಯನ್ನು ದರ್ಶನ್ & ಗ್ಯಾಂಗ್ ಅಪಹರಿಸಿ ಶನಿವಾರ ಥಳಿಸಿತ್ತು. ಈ ವೇಳೆ ಆತನ ಪ್ರಾಣ ಹೋಗಿದೆ. ಬಳಿಕ ಶವವನ್ನು ಸುಮನಹಳ್ಳಿ ರಿಂಗ್‌ರೋಡ್ ಬಳಿ ಎಸೆಯಲಾಗಿತ್ತು. ಭಾನುವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 4 ಜನ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ವಿಚಾರಣೆ ವೇಳೆ ಶಾಕಿಂಗ್ ಸಂಗತಿಗಳು ಬಯಲಾಗಿತ್ತು. ನಟ ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದು ಥಳಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ವಿಚಾರಣೆ ನಡೆದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. 6 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸದ್ಯ ಆರೋಪಿಗಳೆಲ್ಲಾ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿರುವ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. "ಒಬ್ಬ ಫಿಲ್ಮ್ ಮೇಕರ್ ಸ್ಕ್ರೀನ್‌ಪ್ಲೇ ಪಕ್ಕಾ ಆದಮೇಲೆ ಚಿತ್ರೀಕರಣ ಆರಂಭಿಸಬೇಕು. ಆದರೆ ಚಿತ್ರೀಕರಣ ನಡೆಯುತ್ತಿರುವಾಗ ಮೇಕರ್ಸ್ ಬಹಳ ಸಲ ಬರೆಯುತ್ತಲೇ ಇದ್ದಾರೆ. ಆದರೆ ದರ್ಶನ್ ಅರೆಸ್ಟ್ ವಿಚಾರದಲ್ಲಿ ಸಿನಿಮಾ ಬಿಡುಗಡೆ ಬಳಿಕ ಸ್ಕ್ರೀನ್‌ಪ್ಲೇ ಬರೆಯುವ ಕೆಲಸ ಆರಂಭವಾಗಿದೆ"
"ಒಬ್ಬ ಸ್ಟಾರ್ ತನ್ನ ವೈಯಕ್ತಿಯ ಜೀವನದಲ್ಲಿ ತಲೆ ಹಾಕಿದ ಡೈ ಹಾರ್ಟ್ ಫ್ಯಾನ್ ಅನ್ನು ಕೊಲ್ಲಲು ಮತ್ತೊಬ್ಬ ಡೈ ಹಾರ್ಟ್ ಫ್ಯಾನ್ ಅನ್ನು ಬಳಸಿಕೊಂಡಿದ್ದು ಸ್ಟಾರ್ ಆರಾಧನೆ ಸಿಂಡ್ರೋಮ್ ವಿಚಿತ್ರಕ್ಕೆ ಸೂಕ್ತ ಉದಾಹರಣೆ. .ಅಭಿಮಾನಿಗಳು ತಮ್ಮ ತಾರೆಯರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂದು ಆದೇಶಿಸಲು ಬಯಸುವುದು ಅದೇ ಸಿಂಡ್ರೋಮ್‌ನ ಅನಿವಾರ್ಯ ಅಡ್ಡ ಪರಿಣಾಮವಾಗಿದೆ" ಎಂದು ಆರ್‌ಜಿವಿ ಬರೆದುಕೊಂಡಿದ್ದಾರೆ.
ಇನ್ನು ಆರ್‌ಜಿವಿ ಪೋಸ್ಟ್‌ಗೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ನೀವು ದರ್ಶನ್ ಕುರಿತು ಸಿನಿಮಾ ಮಾಡಿ. ಅದಕ್ಕೆ ನೀವೇ ಸೂಕ್ತ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ವರ್ಮಾ ಸಾಕಷ್ಟು ನೈಜಘಟನೆಗಳನ್ನು ತೆರೆಗೆ ತಂದಿದ್ದಾರೆ. ಹಾಗಾಗಿ ದರ್ಶನ್ ಬಗ್ಗೆ ಕೂಡ ಸಿನಿಮಾ ಮಾಡ್ತಾರಾ? ಎಂದು ಟಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ.


Click it and Unblock the Notifications











