For Quick Alerts
  ALLOW NOTIFICATIONS  
  For Daily Alerts

  'MR' ಚಿತ್ರಕ್ಕೆ ಸಮಾಧಿ ಕಟ್ಬಿಟ್ರೂ: ಹೊಸ ಸಿನಿಮಾ ಅನೌನ್ಸ್ ಮಾಡಿದ ರವಿ ಶ್ರೀವತ್ಸ

  |

  ಡೆಡ್ಲಿ ನಿರ್ದೇಶಕ ಅಂತಾನೇ ಖ್ಯಾತಿ ಗಳಿಸಿರುವ ನಿರ್ದೇಶಕ ರವಿ ಶ್ರೀವತ್ಸವ ಈಗ ಮತ್ತೊಂದು ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ. ಈ ಮೊದಲು ಭೂಗತ ಲೋಕದ ಡಾನ್ ಮುತ್ತಪ್ಪ ರೈ ಜೀವನಚರಿತ್ರೆಯನ್ನು ತೆರೆಮೇಲೆ ತರಲು ರೆಡಿಯಾಗಿದ್ದರು. ಎಂ ಆರ್ ಎಂದು ಟೈಟಲ್ ಇಟ್ಟು ಸಿನಿಮಾ ಕೂಡ ಲಾಂಚ್ ಮಾಡಿದ್ದರು.

  ಆದರೆ ಸಿನಿಮಾ ಲಾಂಚ್ ಆದ ಪ್ರಾರಂಭದಲ್ಲೇ ನಿಂತು ಹೋಯ್ತು. ಎಂ ಆರ್ ಚಿತ್ರದಲ್ಲಿ ಯುವ ಪ್ರತಿಭೆ ದೀಕ್ಷಿತ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಮುತ್ತಪ್ಪ ರೈ ಜೀವನಾದಾರಿತ ಸಿನಿಮಾ ಮಾಡಬಾರದೆಂದು ಕೆಲವರು ತಕರಾರು ತೆಗೆದ ನಂತರ ನಿರ್ದೇಶಕ ರವಿ ಶ್ರೀವಾತ್ಸ ಅವರು ಎಂ ಆರ್ ಬದಲಿಗೆ ಡಿ ಆರ್ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾದರು. ಆದರೆ ಆ ಸಿನಿಮಾ ಕೂಡ ನಿಂತು ಹೋಯ್ತು.

  ಇದೀಗ ಅದೇ ಉತ್ಸಾಹ, ಹುರುಪು ಅದೇ ಹೀರೋ ಜೊತೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಆದೇ ಡೆಡ್ಲಿ-3. ರವಿ ಶ್ರೀವಾತ್ಸ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ ಡೆಡ್ಲಿ ಸೋಮ. ಇದೀಗ ಅದೇ ಹೆಸರಿನ ಟೈಟಲ್ ಇಟ್ಟುಕೊಂಡು ಹೊಸ ಕಥೆ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ.

  ಚಿತ್ರದ ನಾಯಕ ದೀಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಇಂದು D3 (ಡೆಡ್ಲಿ-3) ಚಿತ್ರ ಅನೌನ್ಸ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರವಿ ಶ್ರೀವಾತ್ಸ, 'ಎಲ್ಲರಿಗೂ ತಿಳಿದಿರುವ ಹಾಗೆ ಹೋದ ವರ್ಷ MR ಸಿನಿಮಾ ಶುರು ಮಾಡ್ಲಿಕ್ಕೆ ಅಂತ ಹೊರಟು ನಿಂತ್ವೀ, ಅದ್ಯಾವ ನಾಯಿ ಕಣ್ಣೋ ನರಿ ಕಣ್ಣೋ, ಆ ಸಿನಿಮಾ ಮುಹೂರ್ತ ಮಾಡಿಕೊಂಡ ತದನಂತರದ ದಿನಗಳಲ್ಲಿ ಪ್ರಾರಂಭ ಮಾಡೋ ಮುನ್ನವೇ ಆ ಸಿನಿಮಾಗೆ ಸಮಾಧಿ ಕಟ್ಬಿಟ್ರೂ. ಓಕೆ. MR ಹೋದ್ರೇನು DR ಮಾಡೋಣ ಅಂತ ಹೆಜ್ಜೆ ಎತ್ತಿ ಮುಂದಕ್ಕಿಟ್ಟು ಸಾಗಬೇಕು ಅಂದ್ಕೊಂಡ್ವೀ ಅಷ್ಟರಲ್ಲಿ, ಅದೇ ಕಥೇ ಇಟ್ಕೊಂಡು ಇನ್ನೊಂದು ಟೈಟಲ್ ಹಾಕಿ ಸಿನಿಮಾ ಮಾಡ್ತಾ ಇದ್ದಾನೆ, DR ಬೇರೇನೆ ಕಥೆ ಅಂತ ಬರದು ಕೊಟ್ಟು ಸಿನಿಮಾ ಮಾಡಿ ಅಂತ ಅಂದ್ರೂ'

  'ನನ್ನ ಕೈಲಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ಮಾಡೋ ಛಲ ಇದೆ, ಇಲ್ಲ ಸಲ್ಲದ ಗಲಾಟೆಗಳನ್ನ ಮಾಡಿಕೊಂಡಾದ್ರೂ ಸಿನಿಮಾ ಮಾಡೋ ಮನುಷ್ಯ ನಾನಲ್ಲಾ. DR ಕಥೆಗೆ ಅಲ್ಲೆ ಎಳ್ಳು ನೀರು ಬಿಟ್ವೀ. ಅನ್ಯಾಯ, ಸುನಾಮಿ, ಕರೋನಾ ಇನ್ನು ಅದೇನೇನು ಎದ್ರಾಗುತ್ತೋ ನೋಡೆೇ ಬಿಡೋಣಾ ಅಂತ ಈಗ ಇನ್ನೊಂದು ಹಜ್ಜೆ ಮುಂದಿಡ್ತಾ ಇದ್ದೀವೀ. I'm Using My LifeLine.. MR ಆಯ್ತು DR ಆಯ್ತು ನನ್ನ ಅನ್ನದ ಋಣ ಈಗ D3'

  Ambareesh ಗೆ 69ನೇ ಹುಟ್ಟುಹಬ್ಬ: ಅಂಬಿಯ ನೆನಪು ಹಂಚಿಕೊಂಡ ದಚ್ಚು,Kichcha | Filmibeat Kannada

  'ಕಳೆದ 16ವರ್ಷಗಳಿಂದ ನನ್ನ ಹೆಸರನ್ನ ನನ್ನ ಗೌರವವನ್ನ ಕಾಪಾಡಿಕೊಂಡು ಬಂದ ಡೆಡ್ಲಿ ಅನ್ನೋ ಆಯುಧವೇ ನನಗೆ ಬುನಾದಿಯಾಗಿ ನಿಂತಿದೆ, ಈ ದಿನ ಶ್ರೀರಕ್ಷೆಯಾಗಿ ಕಾಪಾಡ್ಲಿಕ್ಕೆ ಬಂದಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಆಶೀರ್ವಾದ ಸದಾ ನನ್ನ ಬೆಂಗಾವಲಾಗಿರಲಿ' ಎಂದು ಹೇಳಿದ್ದಾರೆ.

  English summary
  Director Ravi Shrivatsa Announces Deadly 3 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X