ಸಂಜನಾಗೆ 'ಡೆಡ್ಲಿ' ತಿರುಗೇಟು ನೀಡಿದ 'ಗಂಡ ಹೆಂಡತಿ' ರವಿ ಶ್ರೀವತ್ಸ

ಸ್ಯಾಂಡಲ್ ವುಡ್ ನಲ್ಲಿ ಮೀಟೂ ಅಭಿಯಾನ ದಿನೇ ದಿನೇ ಜೋರಾಗ್ತಿದೆ. ಶ್ರುತಿ ಹರಿಹರನ್ ಗೂ ಮುಂಚೆ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ನಿರ್ದೇಶಕ ರವಿ ಶ್ರೀವತ್ಸ ಮೇಲೆ ಆರೋಪ ಮಾಡಿದ್ದರು.

'ಗಂಡ ಹೆಂಡತಿ' ಸಿನಿಮಾ ಮಾಡಬೇಕಾದರೇ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಬಲವಂತವಾಗಿ ಶೂಟಿಂಗ್ ಮಾಡಿಸಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಬಾಂಬ್ ಸಿಡಿಸಿದ್ದರು. ಇದು ಎಷ್ಟು ನಿಜ ಅಥವಾ ಎಷ್ಟು ಸುಳ್ಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿತ್ತೇ ಹೊರತು ನಿರ್ದೇಶಕ ಪ್ರತಿಕ್ರಿಯೆ ನೀಡಿರಲಿಲ್ಲ.

ಇದೀಗ, ಡೆಡ್ಲಿ ಡೈರೆಕ್ಟರ್ ರವಿಶ್ರೀವತ್ಸ ತಮ್ಮ ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಸಂಜನಾ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಶ್ರೀವತ್ಸ ಸದ್ಯದಲ್ಲೇ ಎಲ್ಲವನ್ನೂ ಬಿಚ್ಚಿಡ್ತೇನೆ ಎಂದು ಕುತೂಹಲ ಮೂಡಿಸಿದ್ದಾರೆ. ಶ್ರೀವತ್ಸ ಅವರು ಬರೆದುಕೊಂಡಿರುವ ಯಥಾವತ್ ಸಾಲುಗಳನ್ನ ಇಲ್ಲಿ ಪ್ರಕಟಿಸಲಾಗಿದೆ. ಮುಂದೆ ಓದಿ....

ಬಿಟ್ಟು ಬಿಡೋಣ ಅಂತಿದ್ದೆ

ಬಿಟ್ಟು ಬಿಡೋಣ ಅಂತಿದ್ದೆ

17ರ ಅಕ್ಟೋಬರ್ ಸಂಜೆ 7ರ ವೇಳೇಗೆ ಟಿವಿ ಮಾಧ್ಯಮದಲ್ಲಿರುವ ನನ್ನ ಸಂಬಂಧಿಯಿಂದ ನನಗೊಂದು call ಬರುತ್ತೇ.. "ಯಾರೋ ಒಬ್ಬ ನಟಿ ಈ ರೀತಿ ನಿಮ್ಮ ಮೇಲೆ ಆರೋಪ ಮಾಡಿದ್ದಾರೆ, ಅವರ ಆರೋಪಗಳಿಗೆ ನಿಮ್ಮ ಉತ್ತರ ಏನೂ?" ನಾನು ಆಶ್ಚರ್ಯಕರವಾಗಿ ಹನ್ನೆರಡು ವರುಷಗಳ ನಂತರ ಅದೂ ಈಗ ಈ ರೀತಿ ಹೇಳಿಕೇನಾ? ಇದೆಲ್ಲ ಅಸಹ್ಯ! ಹೋಗಲಿ ಬಿಟ್ಟು ಬಿಡೂ ಅಣ್ಣಯ್ಯ, ಆರೋಪ, ಆಪಾದನೆ, ನಿಂದನೆ ಇವುಗಳಿಗೆ ತಿರಸ್ಕಾರವೇ ಮದ್ದು ಎಂದು ಹೇಳುತ್ತಾ ಕರೆ ಕೊನೆಗಳಿಸಿದೆ.

ಮೌನ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಗುತ್ತಾ.?

ಮೌನ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಗುತ್ತಾ.?

ಆದರೆ ಅದರ ನಂತರ ನನ್ನ ಫೋನ್ ನಿರಂತರವಾಗಿ ಒಂದಲ್ಲ ಒಂದು ಕರೆ ಹೊತ್ತು ತರಲಿಕ್ಕೆ ಶುರುಮಾಡಿತು.. ಕರೆ ಮಾಡಿದ ಪ್ರತಿಯೊಬ್ಬ ಮಿತ್ರರೂ, "ನೀವು ಯಾಕೆ ಮಾತಾಡ್ತಿಲ್ಲಾ? ಯಾಕೆ ಸುಮ್ಮನೆ ಆರೋಪ ಹೊತ್ತು ಕೂರ್ತಾಇದ್ದೀರೀ?? ಸತ್ಯಾ ಅಸತ್ಯತೆಗಳೇನು" ಅಂತ ಕೇಳಿಕ್ಕೆ ಶುರುಮಾಡಿದರು. ಮೌನವಾಗೇ ಇದ್ದೇ ಆದರೇ..ನನ್ನ ಮೌನಕ್ಕೆ ತಪ್ಪಾದ ಅರ್ಥ ಹೊರಹೊಮ್ಮಲಿಕ್ಕೆ ಶುರುವಾಗಿತ್ತು.

ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ

ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ

"ಹೆಣ್ಣು ಮಗಳು" ಮಾತಿಗೆ ಮಾತು ಬೇಡಾ, ಅದೂ ನನ್ನ ಸಿನಿಮಾ ಕುಟುಂಬದ ಸಂಬಂಧಗಳನ್ನ ಹಾಳುಮಾಡುತ್ತೆ ಅಂತ ಸುಮ್ಮನಾಗಿದ್ದೆ..But it was an issue of my Credentials! Life!! Career!!! Above all the Film n Other Films which has given Name Fame Bread n Butter everything to me!!!!

ಮೌನವನ್ನ ಮುರಿಯದಿದ್ದಲ್ಲಿ ಸುಳ್ಳಿನ ಆರೋಪಗಳಿಗೆ ನಾನೆ ನೀರೆರೆದೂ ಆಕೆಯನ್ನ ಮತ್ತಷ್ಟು ಬೆಳೆಸಿದಂತಾಗುತ್ತದೆಂದೂ ಭಾವಿಸಿದೆ.

ಉದ್ದೇಶವೇನಿರಬಹುದು ಗೊತ್ತಿಲ್ಲ.?

ಉದ್ದೇಶವೇನಿರಬಹುದು ಗೊತ್ತಿಲ್ಲ.?

Well, ನನಗೆ ಜನುಮ ಕೊಟ್ಟವರು ಒಂದು ಹೆಣ್ಣು! ತಾಯಿ!! ನಾನು ಪ್ರತಿಯೊಬ್ಬ ಹೆಣ್ಣುಮಗಳನ್ನು ಗೌರವಿಸುತ್ತೇನೆ. ಅದು ಎಷ್ಟರಮಟ್ಟಿಗೆ ಸರೀ ಎಂಬುದೂ ನನ್ನೊಟ್ಟಿಗೆ ಇರುವವರಿಗೆ ಗೊತ್ತು, ಬಲ್ಲವರಿಗೆ ಗೊತ್ತು, ಇಲ್ಲಿರುವ ನನ್ನ ಅಕ್ಕ ತಂಗಿಯರಿಗೂ ಗೊತ್ತು. ನಟಿಯೆಂದು ಕರೆಸಿಕೊಳ್ಳುವ ಆ ಹೆಣ್ಣು ಮಗಳ ಮಾತಿನ ಹಿಂದಿರುವ ಉದ್ದೇಶಗಳೇನೂ ನನಗೆ ಗೊತ್ತಿಲ್ಲ..

ಎಲ್ಲವನ್ನ ಇಟ್ಕೊಂಡೂ ಬೊಂಬೆ ಆಡ್ಸೊನು

ಎಲ್ಲವನ್ನ ಇಟ್ಕೊಂಡೂ ಬೊಂಬೆ ಆಡ್ಸೊನು

ಸಾಕ್ಷಿ ಪುರಾವೆಗಳಿಲ್ಲದೇ ಏಕಾಏಕಿ ಮಾಧ್ಯಮದ ಮುಂದೇ ಅವರಿವರಲ್ಲಿ, ಈ ಫೇಸ್ ಬುಕ್, ಟ್ವಿಟರ್, ಇನ್ಸ್ತಗ್ರಮ್ ಅಲ್ಲಿ ಇಲ್ಲಿ ಮಾತಾಡುವುದು, ಪ್ರಚಾರಕ್ಕೆ ಸುಖಾಸುಮ್ಮನೆ ಕೂರುವುದು ಸರಿ ಅಲ್ಲಾ, ಕಾರಣ...ನಾನು ನಿರ್ದೇಶಕ ರವಿ ಶ್ರೀವತ್ಸ!! ಎಲ್ಲವನ್ನ ಇಟ್ಕೊಂಡೂ ಬೊಂಬೆ ಆಡ್ಸೊನು..

ಇದು ನಿಮ್ಮ ಭಿಕ್ಷೆ

ಇದು ನಿಮ್ಮ ಭಿಕ್ಷೆ

24 ವರುಷದ ನನ್ನ ವೃತ್ತಿ ಜೀವನಕ್ಕೆ ಈಗ ಮತ್ತೊಂದು ತಿರುವು ಸ್ನೇಹಿತರೇ, ಇಲ್ಲಿಯವರೆಗೆ ನನ್ನ ಜೊತೆಯಾಗಿದ್ದರೀ, ನಡೆಸ್ಕೊಂಡು ಕರ್ಕೊಂಡು ಬಂದ್ರೀ, ನನ್ನ ಹೆಸರಿಗೆ ಒಂದು ಸ್ಥಾನ ಮಾನ ಗೌರವ ಸಿಗುವ ಹಾಗೆ ಮಾಡಿದ್ರೀ....ಇದೆಲ್ಲ ನನ್ನ ತಂದೆ, ತಾಯಿ, ನನ್ನ ಯಜಮಾನ, ನನ್ನ ಗುರು ಹಿರಿಯರು, ಸ್ನೇಹಿತರು ಮತ್ತು ನೀವೆರಲ್ಲರು ಒಟ್ಟಾಗಿ ಒಂದುಗೂಡಿ ಕೊಟ್ಟಿರುವ ಭಿಕ್ಷೆ!!! ಸತ್ಯದ ಗೆಲುವಿಗಾಗೀ ಅಸತ್ಯಾನ ಬೆತ್ತಲೆ ಮಾಡಿ ನಿಲ್ಲಸಲೇಬೇಕು ಇದು ಜಗದ ನಿಯಮ! ಹಾಲುಣಿಸಿದ ತಾಯಿಯನ್ನು ಸಮಾಜದ ನಡು ಬೀದಿಯಲ್ಲಿ ಬೆತ್ತಲೆ ಮಾಡಿ ನಿಲ್ಲಸುವ ಮಗ ನಾನಲ್ಲ!!

ಗಂಡ ಹೆಂಡತಿ ಅನ್ನಕೊಟ್ಟ ಚಿತ್ರ

ಗಂಡ ಹೆಂಡತಿ ಅನ್ನಕೊಟ್ಟ ಚಿತ್ರ

ಇವತ್ತಿಗೂ, ಸಾಯುವ ಕೊನೆ ಘಳಿಗೆಯಲ್ಲಿ ಕೂಡ ನಾನು ಹೆಮ್ಮೆಯಿಂದ ಹೇಳುತ್ತೇನೆ "ಗಂಡ ಹೆಂಡತಿ" ಚಿತ್ರ ಅದು ನನಗೆ ಅನ್ನಕೊಟ್ಟ ತಾಯಿ!!! ನಿಮ್ಮೆಲ್ಲರ ಆಶೀರ್ವಾದ ಬೆಂಬಲಾನ ನಂಬಿ, ಬೊಂಬೆಯಾಟದ ಮೊದಲನೇ ಷೋ ಈಗ ಶುರು ಮಾಡ್ತಾ ಇದ್ದೇನೆ.. Deadly is Mr. Clean and Mr. Perfect ಅಂತ ಮತ್ತೆ ಪ್ರೂವ್ ಮಾಡಿ ತೋರುಸ್ತೀನಿ. ನೆನಪಿರಲೀ.... ನಾವು "ಕನ್ನಡಿಗರು" ಮೊದಲು ಬಿಟ್ಟು ಆಮೇಲೆ ಹೊಡಿತೀವಿ!!! ಧನ್ಯೋಸ್ಮಿ ಡೆಡ್ಲಿ

More from Filmibeat

English summary
Kannada Director ravi srivastava react on sanjana metoo alligation. sanjjanaa galrani is heroine of ganda hendathi movie, which was directed by ravi srivastava.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X