'ಇದನ್ನೆಲ್ಲ ನೋಡಿ ರಕ್ತ ಕುದಿಯುತ್ತಿದೆ' : 'ಗಂಡ ಹೆಂಡತಿ' ನಿರ್ದೇಶಕ ಬಿಚ್ಚಿಟ್ಟ ಕಹಿ ಸತ್ಯಗಳು!

Recommended Video

ಸಂಜನಾ ಗಲ್ರಾಣಿ ನಿರ್ದೇಶಕ ರವಿ ಶ್ರೀವತ್ಸ ಮೇಲೆ ಆರೋಪ ಹೊರಿಸಿದ ಹಿನ್ನೆಲೆ ಕಹಿ ಸತ್ಯಗಳು ಬಯಲು

ಸ್ಯಾಂಡಲ್ ವುಡ್ ನ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ಈಗ ಸಿಡಿದೆದ್ದಿದ್ದಾರೆ. ಅವರ ಕೋಪಕ್ಕೆ ಕಾರಣ ಆಗಿರುವುದು ನಟಿ ಸಂಜನಾ. 'ಹಾಟ್' ನಟಿ ಎಂದೇ ಜನಪ್ರಿಯರಾಗಿರುವ ಸಂಜನಾ ಈಗ ರವಿ ಶ್ರೀ ವತ್ಸ ಅವರ ರಕ್ತ ಕುದಿಯುವಂತೆ ಮಾಡಿದ್ದಾರೆ.

'ಗಂಡ ಹೆಂಡತಿ' ಸಿನಿಮಾದಲ್ಲಿ ವೇಳೆ ತಮಗೆ ಕೆಟ್ಟ ಅನುಭವ ಆಗಿದೆ ಎಂದು ಸಂಜನಾ ಮೀ ಟೂ ಅಭಿಯಾನಕ್ಕೆ ಸೇರಿಕೊಂಡಿದ್ದರು. ''ಈ ಸಿನಿಮಾ ಚಿತ್ರೀಕರಣದಲ್ಲಿ ತನಗೆ ಮುಂಚೆಯೇ ತಿಳಿಸದೆ ಅನೇಕ ಕಿಸ್ಸಿಂಗ್ ದೃಶ್ಯಗಳನ್ನು ತೆಗೆದಿದ್ದಾರೆ. ಚಿತ್ರದ ಅನೇಕ ದೃಶ್ಯಗಳಲ್ಲಿ ಅಶ್ಲೀಲವಾಗಿ ನನ್ನನ್ನು ತೋರಿಸಿದ್ದಾರೆ'' ಎಂದು ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮೇಲೆ ಸಂಜನಾ ಆರೋಪ ಮಾಡಿದ್ದರು.

ತಮ್ಮ ಮೇಲೆ ಬಂದಿರುವ ಈ ಆರೋಪವನ್ನು ರವಿ ಶ್ರೀವತ್ಸ ಗಂಭೀರವಾಗಿ ಪರಿಗಣಿಸಿದ್ದಾರೆ. 'ಮರ್ಡರ್' ಸಿನಿಮಾದ ರಿಮೇಕ್ ಎಂದು ಹೇಳಿಯೇ ಅವರನ್ನು ಸಿನಿಮಾಗೆ ಆಯ್ಕೆ ಮಾಡಿಕೊಂಡೆವು ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

ಈ ಬಗ್ಗೆ ನಿರ್ದೇಶಕರ ಸಂಘಕ್ಕೆ ದೂರು ನೀಡಿರುವ ಅವರು ಚಿತ್ರದ ವಿವಾದಕ್ಕೆ ಸಂಭಂದಿಸಿದ ಹಾಗೆ ಸತ್ಯ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

16 ವರ್ಷ ಹೇಗೆ ಆಯ್ತು?

16 ವರ್ಷ ಹೇಗೆ ಆಯ್ತು?

''ಸಿನಿಮಾ ಮಾಡುವಾಗ ನನಗೆ 16 ವರ್ಷ ಆಗಿತ್ತು ಎಂದು ಸಂಜನಾ ಹೇಳಿದ್ದಾರೆ. ಅವರ ತಂಗಿ ನಿಕ್ಕಿ ಗರ್ಲಾನಿ 1989 ರಲ್ಲಿ ಹುಟ್ಟಿದ್ದಾರೆ. 2006ರಲ್ಲಿ 'ಗಂಡ ಹೆಂಡತಿ' ಸಿನಿಮಾ ಮುಹೂರ್ತ ಮಾಡಿದಾಗ ಅವರ ತಂಗಿಗೇ 17 ವರ್ಷ 2 ತಿಂಗಳಾಗಿದೆ. ಸೋ, ಇವರಿಗೆ ಹೇಗೆ 16 ವರ್ಷ ಹೇಗೆ ಆಯ್ತು?'' - ರವಿ ಶ್ರೀವತ್ಸ, ನಿರ್ದೇಶಕ

ಇದು ಅವರ 5ನೇ ಸಿನಿಮಾ

ಇದು ಅವರ 5ನೇ ಸಿನಿಮಾ

''ಕಣ್ಣು ಮುಚ್ಚಿಕೊಂಡು ಆಕೆ ಪಾತ್ರಕ್ಕೆ ಸೂಟ್ ಆಗುತ್ತಾಳೆ ಎಂದು ಆಯ್ಕೆ ಮಾಡಿಕೊಂಡೆವು. ಇದು ಅವರ ಮೊದಲ ಸಿನಿಮಾ ಆಗಿರಲಿಲ್ಲ. ಈ ಹಿಂದೆ ನಾಲ್ಕು ಸಿನಿಮಾ ಮಾಡಿದ್ದರು. ತಮಿಳಿನಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದರು. ಹೀಗಿರುವಾಗ, ನನ್ನ ಸಿನಿಮಾ ಮಾಡುವ ಸಮಯದಲ್ಲಿ ಚಿತ್ರರಂಗದ ಬಗ್ಗೆ ನಿಮಗೆ ತಿಳಿದಿರಲಿಲ್ಲವೇ.'' ರವಿ ಶ್ರೀವತ್ಸ, ನಿರ್ದೇಶಕ

ನಿಮ್ಮ ತಂದೆ ಎಲ್ಲಿ ಹೋಗಿದ್ದರು?

ನಿಮ್ಮ ತಂದೆ ಎಲ್ಲಿ ಹೋಗಿದ್ದರು?

''ಆ ಸಿನಿಮಾ ನೋಡಿ ನನ್ನ ತಂದೆ ತಲೆ ತಗ್ಗಿಸಿಕೊಂಡು ಬಂದರು ಎಂದು ಸಂಜನಾ ಹೇಳಿದರೆ. ಆದರೆ, ಆ ಸಿನಿಮಾ ಶುರುವಾದಾಗ ನಾನು ನಿಮ್ಮ ತಂದೆ ಎಲ್ಲಿ ಎಂದು ಕೇಳಿದರೆ, ಏನು ಹೇಳಲಿಲ್ಲ. ಮುಹೂರ್ತಕ್ಕೆ, ಶೂಟಿಂಗ್ ಗೆ, ಬ್ಯಾಂಕಾಕ್ ಗೆ, ಆಡಿಯೋ ರಿಲೀಸ್ ಗೆ, ಫಸ್ಟ್ ಕಾಪಿಗೆ ಹೀಗೆ ಯಾವ ಹಂತದಲ್ಲಿಯೂ ಅವರ ಜೊತೆಗೆ ತಂದೆ ಇರಲಿಲ್ಲ. ಆದರೆ, ರಿಲೀಸ್ ದಿನ ಮಾತ್ರ ತಂದೆ ಇದ್ದರು.'' - ರವಿ ಶ್ರೀವತ್ಸ, ನಿರ್ದೇಶಕ

'ಮರ್ಡರ್' ಸಿನಿಮಾದ ರಿಮೇಕ್ ಅಂತ ತಿಳಿದಿರಲಿಲ್ಲವೆ?

'ಮರ್ಡರ್' ಸಿನಿಮಾದ ರಿಮೇಕ್ ಅಂತ ತಿಳಿದಿರಲಿಲ್ಲವೆ?

''ಚಿತ್ರದಲ್ಲಿ ಒಂದು ಕಿಸ್ ಇದೆ ಅಂತ ಮಾತ್ರ ಹೇಳಿದ್ದರು ಎಂದು ಆಕೆ ಆರೋಪ ಮಾಡಿದ್ದಾರೆ. ಇದು 'ಮರ್ಡರ್' ಸಿನಿಮಾ ರಿಮೇಕ್ ಅಂತ ತಿಳಿದಿರಲಿಲ್ಲವೆ. ಇದು ಬರೀ ಚುಂಬನದ ಸಿನಿಮಾ ಆಗಿರಲಿಲ್ಲ. ಕಿಸ್ಸಿಂಗ್ ದೃಶ್ಯದ ಬಗ್ಗೆ ಆ ವೇಳೆ ಪತ್ರಿಕೆಗಳಲ್ಲಿ ಮಾತನಾಡುವಾಗ ಮೊದಲು ನರ್ವಾಸ್ ಆಗಿತ್ತು, ನಂತರ ಸುಲಭವಾಗಿ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ.'' - ರವಿ ಶ್ರೀವತ್ಸ, ನಿರ್ದೇಶಕ

ನನಗೆ ಸೆಕ್ಸ್ ಸಿನಿಮಾ ಮಾಡುವ ಅಗತ್ಯವಿಲ್ಲ

ನನಗೆ ಸೆಕ್ಸ್ ಸಿನಿಮಾ ಮಾಡುವ ಅಗತ್ಯವಿಲ್ಲ

''ಗಂಡ ಹೆಂಡತಿಯ ನಡುವಿನ ಬಾಂಧವ್ಯವನ್ನು ಹೇಳಬೇಕಿತ್ತು. ಸೆಕ್ಸ್ ಸಿನಿಮಾ ಮಾಡುವ ಅಗತ್ಯ ರವಿ ಶ್ರೀವತ್ಸಗೆ ಇರಲಿಲ್ಲ. ಕ್ಯಾಮರಾ ಅಲ್ಲಿ ಇಲ್ಲಿ ಇಟ್ಟರು ಎಂದು ಹೇಳುತ್ತಾರೆ. ನೀವು ಒಮ್ಮೆ 'ಮರ್ಡರ್' ಸಿನಿಮಾ ನೋಡಿ ಅವರು ಎಲ್ಲಿ ಕ್ಯಾಮರಾ ಇಟ್ಟಿದ್ದಾರೆ ಅಂತ ತಿಳಿಯುತ್ತದೆ.'' - ರವಿ ಶ್ರೀವತ್ಸ, ನಿರ್ದೇಶಕ

ಇತ್ತೀಚಿನ ಅವರ 'ರಾಜಸಿಂಹ' ಹಾಡು ನೋಡಿ

ಇತ್ತೀಚಿನ ಅವರ 'ರಾಜಸಿಂಹ' ಹಾಡು ನೋಡಿ

''ಇತ್ತೀಚಿಗೆ ಅವರು ನಟಿಸಿರುವ 'ರಾಜಸಿಂಹ' ಚಿತ್ರದಲ್ಲಿ ಯಾವ ರೀತಿಯ ದೃಶ್ಯಗಳಿವೆ ಅಂತ ಹಾಡುಗಳನ್ನು ನೋಡಿ. ನನ್ನ ಸಿನಿಮಾ ಮಾಡಿದಾಗ 16 ವರ್ಷ ಅಂತ ಹೇಳುತ್ತಾರಲ್ಲ, ಈ ಸಿನಿಮಾ ಮಾಡಿದಾಗ 15 ವರ್ಷ ಆಗಿತ್ತೆ?.'' - ರವಿ ಶ್ರೀವತ್ಸ, ನಿರ್ದೇಶಕ

ರಾತ್ರಿ ಪೂರ ಶಾಪಿಂಗ್ ಮಾಡುತ್ತಿದ್ದರು

ರಾತ್ರಿ ಪೂರ ಶಾಪಿಂಗ್ ಮಾಡುತ್ತಿದ್ದರು

''ಬ್ಯಾಂಕಾಕ್ ಗೆ ಹೋಗಿದ್ದಾಗ ರಾತ್ರಿ ಪೂರ ಶಾಪಿಂಗ್ ಮಾಡುತ್ತಿದ್ದರು. ಬೆಳಗ್ಗೆ ಶೂಟಿಂಗ್ ಮಾಡುವಾಗ ಕಣ್ಣು ಪೂರ ಕೆಂಪಾಗಿ ಇರುತ್ತಿತ್ತು. ಆ ರೀತಿ ಇರುವಾಗ ಹೇಗೆ ಶೂಟಿಂಗ್ ಮಾಡಲು ಸಾಧ್ಯ. ಈ ರೀತಿ ಮಾಡಿದಾಗ ನಿರ್ದೇಶಕ ಬೈಯುವುದು ತಪ್ಪೇ. ಆಗ ಬ್ಯಾಂಕಾಕ್ ಗೆ ಒಂದು ಟಿಕೆಟ್ ಗೆ 40 ಸಾವಿರ ಇತ್ತು. ಆದರೂ, ಕೂಡ ಅವರ ತಾಯಿಯನ್ನು ಕರೆದು ಕೊಂಡುಹೋದೆವು..'' - ರವಿ ಶ್ರೀವತ್ಸ, ನಿರ್ದೇಶಕ

ನನ್ನ ಮಗಳಿದ್ದ ಹಾಗೆ ಎಂದು ಹೇಳಿದೆ

ನನ್ನ ಮಗಳಿದ್ದ ಹಾಗೆ ಎಂದು ಹೇಳಿದೆ

''ಬ್ಯಾಂಕಾಕ್ ನಿಂದ ಅವರ ತಾಯಿ ಊಟ ತಿಂಡಿ ವಿಷಯದಲ್ಲಿ ಕಿರಿಕ್ ಮಾಡಿಕೊಂಡು ವಾಪಸ್ ಹೋದರು. ನಾನು ಆಗ 'ನಿಮ್ಮ ಮಗಳನ್ನು ನನ್ನ ಮಗಳಂತೆ ನೋಡಿಕೊಂಡಿಕೊಳ್ಳುತ್ತೇನೆ' ಎಂದು ಹೇಳಿ ಕಳುಹಿಸಿದೆ. ಇಡೀ ತಂಡ ಯಾರೂ ಕೂಡ ಅವರ ಜೊತೆಗೆ ಕೆಟ್ಟದಾಗಿ ನೆಡೆದುಕೊಂಡಿಲ್ಲ. - ರವಿ ಶ್ರೀವತ್ಸ, ನಿರ್ದೇಶಕ

ರಕ್ತ ಕುದಿಯುತ್ತಿದೆ

ರಕ್ತ ಕುದಿಯುತ್ತಿದೆ

''ಇದನೆಲ್ಲ ನೋಡಿ ರಕ್ತ ಕುದಿಯುತ್ತಿದೆ. 'ಗಂಡ ಹೆಂಡತಿ' ನನಗೆ ಅನ್ನ ಕೊಟ್ಟ ಸಿನಿಮಾ. ಹಾಲು ಕುಡಿಸಿದ ತಾಯಿಯನ್ನು ಮರೆಯುವುದಕ್ಕೆ ಆಗುತ್ತದೆಯೇ. ಇವತ್ತು ಕನ್ನಡ ನಿರ್ದೇಶಕನ ಮಾನ ತೆಗೆದ ಈಕೆ ನಾಳೆ ತಮಿಳು, ತೆಲುಗು, ಮಲೆಯಾಳಂ ನಿರ್ದೇಶಕನಿಗೂ ಇದೇ ಸ್ಥಿತಿಗೆ ತರುತ್ತಾಳೆ.'' - ರವಿ ಶ್ರೀವತ್ಸ, ನಿರ್ದೇಶಕ

ನಾನು ಗೆದ್ದೆ ಗೆಲ್ಲುತ್ತೇನೆ

ನಾನು ಗೆದ್ದೆ ಗೆಲ್ಲುತ್ತೇನೆ

''ನನ್ನ ಮನಸ್ಸಿಗೆ ತುಂಬ ನೋವಾಗಿದೆ. ನಾನು ಯಾವ ಹಂತಕ್ಕೆ ಹೋದರೂ ಗೆದ್ದೆ ಗೆಲ್ಲುತ್ತೇನೆ. ಸಂಜನಾ ಅವರೇ ನೀನು ಮಾಡಿದ್ದು ಮಹಾ ಅಪರಾದ. ಇಷ್ಟು ವರ್ಷ ಸುಮ್ಮನೆ ಇದ್ದೂ ಈಗ ಮೀ ಟೂ ಬಂದಾಗ ನನಗೆ ಯಾಕಮ್ಮ ಮೀಟುತಿದ್ದೀಯಾ.'' - ರವಿ ಶ್ರೀವತ್ಸ, ನಿರ್ದೇಶಕ

More from Filmibeat

English summary
Kannada Director ravi srivastava react on sanjana metoo alligation. sanjjanaa galrani is heroine of ganda hendathi movie, which was directed by ravi srivastava.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X