ಅಮಿತಾಭ್ - ಸುದೀಪ್ ಕಾಂಬಿನೇಶನ್ ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ!
Recommended Video

ನಿರ್ದೇಶಕರ ರಿಷಬ್ ಶೆಟ್ಟಿ ಅವರ ಲಕ್ 'ಕಿರಿಕ್ ಪಾರ್ಟಿ' ನಂತರ ಬದಲಾಗಿದೆ. ಈ ಸಿನಿಮಾ ಅವರಿಗೆ ಹೊಸ ಹೊಸ ಸಾಹಸವನ್ನು ಮಾಡಲು ಶಕ್ತಿ ತುಂಬಿದೆ. ಸದ್ಯ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಚಿತ್ರದ ತಯಾರಿಯಲ್ಲಿ ಇರುವ ಅವರು ಆ ಬಳಿಕ ಬಾಲಿವುಡ್ ಸಿನಿಮಾ ಮಾಡಲಿದ್ದಾರೆ.
ಅಚ್ಚರಿ ಅಂದರೆ, ರಿಷಬ್ ಶೆಟ್ಟಿ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿರುವುದು ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ. ಹೌದು, ಈಗಾಗಲೇ ರಿಷಬ್ ಕಥೆ ಅಮಿತಾಭ್ ಅವರಿಗೆ ಇಷ್ಟ ಆಗಿದೆಯಂತೆ. ಮತ್ತೊಂದು ವಿಶೇಷ ಅಂದರೆ, ನಟ ಸುದೀಪ್ ಕೂಡ ಈ ಸಿನಿಮಾದಲ್ಲಿ ಇರ್ತಾರೆ.
ಅಂದಹಾಗೆ, ಈಗಾಗಲೇ ರಿಷಬ್ ಶೆಟ್ಟಿ ಅವರ ಹಿಂದಿ ಸಿನಿಮಾದ ಸುದ್ದಿ ಹರಿದಾಡಿದ್ದು, ಇದರ ಬಗ್ಗೆ ಈಗ ಅವರೇ ಮಾತನಾಡಿದ್ದಾರೆ. ನಿನ್ನೆ 'ಕಥೆಯೊಂದು ಶುರುವಾಗಿದೆ' ಸಿನಿಮಾದ ಸೆಲಿಬ್ರೆಟಿ ಶೋಗೆ ಆಗಮಿಸಿದ್ದ ಅವರು ತಮ್ಮ ಬಾಲಿವುಡ್ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಮುಂದೆ ಓದಿ...

ಬಚ್ಚನ್ ಅವರಿಗೆ ಕಥೆ ಇಷ್ಟ ಆಗಿರುವುದು ನಿಜ
''ನನ್ನ ಹಿಂದಿ ಚಿತ್ರದ ಬಗ್ಗೆ ಮಾತನಾಡುವುದು ತುಂಬ ಅರ್ಲಿ ಅನಿಸುತ್ತಿದೆ. ಚಿತ್ರದ ಕಥೆ ಅಮಿತಾಭ್ ಬಚ್ಚನ್ ಅವರಿಗೆ ಇಷ್ಟ ಆಗಿರುವುದು ನಿಜ. ಆದರೆ, ಸುದೀಪ್ ಸರ್ ಅವರಿಗೆ ಇನ್ನು ಕಥೆ ಹೇಳಿಲ್ಲ. ಒಂದು ಒಳ್ಳೆಯ ಸ್ಕ್ರಿಪ್ಟ್ ಇದೆ ಅಂತ ಅಷ್ಟೇ ಸುದೀಪ್ ಸರ್ ಗೆ ಹೇಳಿದ್ದೇನೆ. ಆ ಸಿನಿಮಾ ಶುರು ಮಾಡುವುದೆ ಮುಂದಿನ ವರ್ಷ.'' - ರಿಷಬ್ ಶೆಟ್ಟಿ, ನಿರ್ದೇಶಕ

ಆ ಕಥೆಗೆ ಅವರಿಬ್ಬರು ಸೂಟ್ ಆಗುತ್ತಾರೆ
''ಅದೇ ನನ್ನ ಮುಂದಿನ ಸಿನಿಮಾ ಆದರು ಆಗಬಹುದು. ಸದ್ಯ ಅದರ ಮೇಲೆ ವರ್ಕ್ ಮಾಡುತ್ತಿದ್ದೇನೆ. ಕಥೆ ಓಕೆ ಆಗಿರುವುದು ಸತ್ಯ. ನಾನಿನ್ನು ಸುದೀಪ್ ಸರ್ ಅವರಿಗೆ ಕಥೆ ನರೇಟ್ ಮಾಡಬೇಕು. ಅವರಿಗೆ ಇಷ್ಟ ಆಗಿ ಒಪ್ಪಿಕೊಳ್ಳಬೇಕು. ನನಗೆ ಆ ಕಥೆಗೆ ಅವರಿಬ್ಬರು ಸೂಟ್ ಆಗುತ್ತಾರೆ ಅಂತ ಅನಿಸಿದೆ. ಇಬ್ಬರು ಒಪ್ಪಿದರೆ ಸಿನಿಮಾ ಗ್ಯಾರೆಂಟಿ.'' - ರಿಷಬ್ ಶೆಟ್ಟಿ, ನಿರ್ದೇಶಕ

ಇನ್ನೂ ಸಿನಿಮಾ ಕೆಲಸಗಳು ತುಂಬ ಇವೆ
''ಆ ಸಿನಿಮಾ ಹಿಂದಿ ಭಾಷೆಯಲ್ಲಿ ಮಾತ್ರ ಮಾಡುತ್ತೇವಾ.. ಅಧವಾ ಹಿಂದಿ ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ಮಾಡುತ್ತೇವಾ.. ಎಂಬುದು ಇನ್ನು ನಿರ್ಧಾರ ಆಗಿಲ್ಲ. ಕೆಲವು ಕಡೆ ಈ ಸಿನಿಮಾದ ಎಲ್ಲ ತಯಾರಿಗಳು ಆಗಿದೆ ಎಲ್ಲ ರೆಡಿ ಇದೆ ಅಂತ ನ್ಯೂಸ್ ಬಂದಿದೆ. ಆದರೆ, ಹಾಗೇನೂ ಇಲ್ಲ. ಒಂದು ಸಣ್ಣ ಥಾಟ್ ಬಂದಿದೆ. ಕಥೆ ಓಕೆ ಆಗಿದೆ ಅಷ್ಟೆ. ಸಿನಿಮಾದ ಅಧಿಕೃತವಾಗಿ ಅನೌನ್ಸ್ ಆಗಿಲ್ಲ. ಇನ್ನೂ ಸಿನಿಮಾ ಕೆಲಸಗಳು ತುಂಬ ಇವೆ.'' - ರಿಷಬ್ ಶೆಟ್ಟಿ, ನಿರ್ದೇಶಕ

ನಿರ್ಮಾಪಕ ರಾಜೇಶ್ ಭಟ್ ಅವರಿಂದ ಬಂದ ಅವಕಾಶ
''ಇದು ನಾನು ಮೊದಲು ಬರೆದ ಕಥೆ. ಒಮ್ಮೆ ನಿರ್ಮಾಪಕ ರಾಜೇಶ್ ಭಟ್ ಅವರಿಗೆ ಸುಮ್ಮನೆ ಕಥೆ ಬಗ್ಗೆ ಹೇಳಿದ್ದೆ. ಅವರು ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯಿಜಾನ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರೇ ಬಚ್ಚನ್ ಅವರಿಗೆ ಕಥೆ ಹೇಳುವ ಅವಕಾಶ ನೀಡಿದರು. ಅಮಿತಾಭ್ ಅವರ ಮುಂದೆ ಕೂತು ಕಥೆ ಹೇಳುವುದು ನಿಜಕ್ಕೂ ದೊಡ್ಡ ಅನುಭವ. ತುಂಬ ಖುಷಿ ಆಗುತ್ತಿದೆ.'' - ರಿಷಬ್ ಶೆಟ್ಟಿ, ನಿರ್ದೇಶಕ

ಮತ್ತೆ ಒಂದಾದ ಅಮಿತಾಭ್ - ಸುದೀಪ್
ಈಗಾಗಲೇ ಅಮಿತಾಭ್ ಅವರ ಜೊತೆಗೆ ಸುದೀಪ್ ತೆರೆ ಹಂಚಿಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮ ಅವರ 'ರಣ್' ಚಿತ್ರದಲ್ಲಿ ಅಮಿತಾಭ್ ಹಾಗೂ ಸುದೀಪ್ ಇಬ್ಬರು ನಟಿಸಿದ್ದರು. ಜೊತೆಗೆ ಇತ್ತೀಚಿಗಷ್ಟೆ ತೆಲುಗಿನ 'ಸೈರಾ' ಚಿತ್ರದಲ್ಲಿಯೂ ಈ ಇಬ್ಬರು ಕಲಾವಿದರು ನಟಿಸುತ್ತಿದ್ದಾರೆ. ಆ ಚಿತ್ರದ ನಂತರ ಮತ್ತೆ ಈಗ ರಿಷಬ್ ಶೆಟ್ಟಿ ಈ ಜೋಡಿಯನ್ನು ಒಂದು ಮಾಡುತ್ತಿದ್ದಾರೆ. ಈ ಹಿಂದೆ ಐದು ಹಿಂದಿ ಚಿತ್ರಗಳನ್ನು ಸುದೀಪ್ ಮಾಡಿದ್ದಾರೆ.


Click it and Unblock the Notifications