twitter
    For Quick Alerts
    ALLOW NOTIFICATIONS  
    For Daily Alerts

    ಕುಂದಾಪುರದ ಹುಡುಗ 'ಡೈರೆಕ್ಟರ್ ರಿಷಬ್ ಶೆಟ್ಟಿ' ಆದ ಸಣ್ಣ ಕಥೆ!

    By Naveen
    |

    Recommended Video

    ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶಕನಾದ ಕಥೆ..! | Filmibeat Kannada

    'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ನೋಡಿದವರು ನಿರ್ದೇಶಕ ರಿಷಬ್ ಶೆಟ್ಟಿ ಶ್ರಮವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶಕರಾದ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಪ್ರಶಾಂತ್ ಶೆಟ್ಟಿಯಾಗಿದ್ದ ಇವರು ರಿಷಬ್ ಶೆಟ್ಟಿಯಾಗಿ ಸಿನಿಮಾಗಾಗಿ ಬದಲಾದರು. ಕಷ್ಟ ಪಟ್ಟು ಕೆಲಸ ಮಾಡಿ ಚಿತ್ರರಂಗದಲ್ಲಿ ಒಂದು ಮಟ್ಟಕ್ಕೆ ಬೆಳೆದರು.

    ಅಮಿತಾಭ್ - ಸುದೀಪ್ ಕಾಂಬಿನೇಶನ್ ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ!ಅಮಿತಾಭ್ - ಸುದೀಪ್ ಕಾಂಬಿನೇಶನ್ ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ!

    'ರಿಕ್ಕಿ' ಸಿನಿಮಾದ ಮೂಲಕ ಡೈರೆಕ್ಟರ್ ಆದ ರಿಷಬ್ ಬಳಿಕ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ದೊಡ್ಡ ಯಶಸ್ಸು ಗಳಿಸಿದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಸಾಲಿಗೆ ಸೇರಿದೆ. ಅಂದಹಾಗೆ, 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮೂಲಕ ಹ್ಯಾಟ್ರಿಕ್ ಬಾರಿಸಿರುವ ರಿಷಬ್ ನಿರ್ದೇಶಕರಾದ ಕಥೆಯನ್ನು ಇತ್ತೀಚಿಗಿನ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮುಂದಿದೆ ಓದಿ...

    ನಿರ್ದೇಶಕ ಆಗೋಣ ಅಂತ ಯೋಚನೆ ಬಂತು

    ನಿರ್ದೇಶಕ ಆಗೋಣ ಅಂತ ಯೋಚನೆ ಬಂತು

    ''ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನೋಡುವಾಗ ಅದರಲ್ಲಿ ಬರುವ ಹೆಸರುಗಳನ್ನು ಗಮನಿಸಿತಿದ್ವಿ. ಹೀರೋಗಳ ಹೆಸರು ಮೊದಲು ತೋರಿಸುತ್ತಿದ್ದರು ಆಗ ಹೀರೋ ಆಗೋಣ ಅಂತ ಅನಿಸುತ್ತಿತ್ತು. ನಿರ್ಮಾಪಕರ ಹೆಸರು ನೋಡಿ ನಿರ್ಮಾಣ ಮಾಡೋಣ ಅಂತ ಅನ್ಕೋತ್ತಿದೆ. ಎಲ್ಲರ ಹೆಸರಿನ ಕೊನೆಗೆ ನಿರ್ದೇಶಕರ ಹೆಸರು ಬರುತ್ತಿತ್ತು. ಆಗ ನಿರ್ದೇಶಕ ಎಲ್ಲರಿಗಿಂತ ದೊಡ್ಡವ. ನಾನು ನಿರ್ದೇಶಕ ಆಗೋಣ ಅಂತ ಯೋಚನೆ ಬಂತು. ಅದೆಲ್ಲ ಮಕ್ಕಳ ಆಟ.''

    Excitement ಮತ್ತು Expectation ನನಗೆ ಇಲ್ಲ

    Excitement ಮತ್ತು Expectation ನನಗೆ ಇಲ್ಲ

    Excitement ಮತ್ತು Expectation ಎರಡು ವಿಷಯಗಳನ್ನು ನಾನು ತುಂಬ ತಲೆಗೆ ಹಾಕಿಕೊಳ್ಳುವುದಕ್ಕೆ ಹೋಗಲ್ಲ. ಆ ಎರಡು ಅಂಶಗಳು ಕೆಲವು ಬಾರಿ ತುಂಬ ನೋವು ನೀಡುತ್ತದೆ. ನಾನು ಇಂಡಸ್ಟ್ರಿಗೆ ಬಂದಾಗ ಹತ್ತು ವರ್ಷಗಳ ಕಾಲ ನಿರುದ್ಯೋಗಿಯಾಗಿ ಇದ್ದೆ. ಈಗ ಮೂರು ವರ್ಷಗಳಿಂದ ಎಲ್ಲರಿಗೂ ನಾನು ಗೊತ್ತಾಗುತ್ತಿದ್ದೇನೆ ಅಷ್ಟೆ.''

    ರಿಷಬ್ ಶೆಟ್ಟಿಯ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ' ಮೆಚ್ಚಿದ ಸುದೀಪ್ರಿಷಬ್ ಶೆಟ್ಟಿಯ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ' ಮೆಚ್ಚಿದ ಸುದೀಪ್

    ಹೀರೋ ಆಗಬೇಕು ಅಂತ ಬಂದಿದ್ದೆ

    ಹೀರೋ ಆಗಬೇಕು ಅಂತ ಬಂದಿದ್ದೆ

    ''ಇಂಡಸ್ಟ್ರಿಗೆ ನಾನು ಹೀರೋ ಆಗಬೇಕು ಅಂತ ಬಂದೆ. 2006-12 ರ ವರೆಗೆ ಆರು ಸಿನಿಮಾಗಳಿಗೆ ಹೀರೋ ಆಗಿ ಆಯ್ಕೆ ಆದೆ. ಆದರೆ, ಯಾವ ಸಿನಿಮಾವೂ ಶುರು ಆಗಲಿಲ್ಲ. ಹೀರೋ ಆಗಲಿಲ್ಲ ಅಂತ ವಿಲನ್ ಟ್ರೈ ಮಾಡಿದೆ. ಒಂದು ಸಿನಿಮಾಗಾಗಿ ಗಡ್ಡ ಕೂದಲು ಬಿಟ್ಟೆ. ಒಂದು ವರ್ಷ ಆ ಚಿತ್ರಕ್ಕಾಗಿ ಕಾದೆ. ಆ ಚಿತ್ರ ಕೂಡ ಕೈ ಕೊಡ್ತು. ಫೈನಲಿ ಆಕ್ಟರ್ ಆಗುವುದಕ್ಕೆ ಆಗಲ್ಲ ಅಂತ ಅಲ್ಲಿಗೆ ಬಿಟ್ಟೆ. ಪ್ರಾರಂಭದಲ್ಲಿ ಸ್ಕ್ರಿಪ್ಟ್ ವರ್ಕ್ ಗೊತ್ತಿತ್ತು. ಆಗಾಗಿ ಡೈರೆಕ್ಟರ್ ಆಗೋಣ ಅಂತ ಫಿಕ್ಸ್ ಆದೆ.

    ಕೆರಾಡಿ ಅಂತ ನಮ್ಮ ಊರು

    ಕೆರಾಡಿ ಅಂತ ನಮ್ಮ ಊರು

    ''ಕುಂದಾಪುರದಿಂದ ಮುಂದೆ ಕೆರಾಡಿ ಅಂತ ನಮ್ಮ ಊರು. ತುಂಬ ಸಣ್ಣ ಊರು. ನಮ್ಮ ಊರಿಗೆ ಹೋಗಲು ಬರಲು ಒಂದೇ ದಾರಿ ಇತ್ತು. ನನ್ನ ರಿಯಲ್ ಹೆಸರು ಪ್ರಶಾಂತ್ ಶೆಟ್ಟಿ. ಅಣ್ಣ ಪ್ರವೀಣ್ ಶೆಟ್ಟಿ, ಅಕ್ಕ ಪ್ರತಿಭಾ ಶೆಟ್ಟಿ. ನಾನು ಅಣ್ಣ ಚೆನ್ನಾಗಿ ಓದುತ್ತಿರಲಿಲ್ಲ. ಅಕ್ಕ ಒಳ್ಳೆಯ ವಿದ್ಯಾರ್ಥಿ ಆಗಿದ್ದಳು.''

    ರಾಜ್ಯ ಮಟ್ಟದಲ್ಲಿ ಗೋಲ್ಡ್ ಗೆದ್ದಿದ್ದೆ

    ರಾಜ್ಯ ಮಟ್ಟದಲ್ಲಿ ಗೋಲ್ಡ್ ಗೆದ್ದಿದ್ದೆ

    ''ಅಪ್ಪ ಓದಲು ಬೆಂಗಳೂರಿಗೆ ಕರೆದುಕೊಂಡು ಬಂದರು.‍ ನಾನು ತುಂಬ ದೈಹಿಕವಾಗಿ ತುಂಬ ವೀಕ್ ಇದ್ದೆ. ಸೋ, ಕುಸ್ತಿ ಕಲಿಯಲು ಶುರು ಮಾಡಿದೆ. ಬೆಂಗಳೂರಿಗೆ ಬಂದ ಮೇಲೆ ಕುಸ್ತಿ ಹಾಗೂ ಜೂಡೊವನ್ನು ಸೀರಿಯಸ್ ಆಗಿ ತೆಗೆದುಕೊಂಡೆ. ರಾಜ್ಯ ಮಟ್ಟದಲ್ಲಿ ಗೋಲ್ಡ್ ಗೆದ್ದಿದ್ದೆ. ಜೂಡೊ ನ್ಯಾಷಿನಲ್ ಹಂತಕ್ಕೆ ಹೋಗಿದ್ದೆ. ಆಗ ಪೋಲೀಸ್ ಆಗಬೇಕು ಎಂಬ ಆಸೆ ಹುಟ್ಟಿತು.''

    ಸಿನಿಮಾಗೆ ಬರಲು ದಾರಿ ಸಿಕ್ಕಿತು

    ಸಿನಿಮಾಗೆ ಬರಲು ದಾರಿ ಸಿಕ್ಕಿತು

    ''ಕುಂದಾಪುರದಲ್ಲಿ ಇದ್ದಾಗ ಯಕ್ಷಗಾನ ಮಾಡುತ್ತಿದೆ. ಜನರು ನನ್ನನ್ನು ಗುರುತಿಸಿದಾಗ ಖುಷಿ ಆಗುತ್ತಿತ್ತು. ಇವುಗಳ ನಡುವೆ ಬೆಂಗಳೂರಿನಲ್ಲಿ ರಂಗ ಸೌರಭ ಎಂಬ ನಾಟಕ ತಂಡಕ್ಕೆ ಸೇರಿಕೊಂಡೆ. ಪ್ರಮೋದ್ ಶೆಟ್ಟಿ ನಾನು ಎಲ್ಲ ಅಲ್ಲಿಯೇ ಇದ್ವಿ. ಹೀಗೆ ಇದು ಸಿನಿಮಾಗೆ ಬರಲು ದಾರಿ ಆಯ್ತು.''

    English summary
    Kannada director Rishab Shetty spoke about his childhood days.
    Friday, September 7, 2018, 12:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X