For Quick Alerts
  ALLOW NOTIFICATIONS  
  For Daily Alerts

  ಪ್ರಿಯಾ ವಾರಿಯರ್ ಕುರಿತು ಜಗ್ಗೇಶ್ ಅಸಮಾಧಾನ: ವೇದಿಕೆಯಲ್ಲಿದ್ದ ಸಾಯಿ ಪ್ರಕಾಶ್ ಹೇಳಿದ್ದೇನು?

  |

  ನಟ ಜಗ್ಗೇಶ್ ಅವರು ನವತಾರೆ ಪ್ರಿಯಾ ವಾರಿಯರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೂಚಿಸಿದ ಅಸಮಾಧಾನದ ಬಗ್ಗೆ ಅದೇ ವೇದಿಕೆಯಲ್ಲಿದ್ದ ನಿರ್ದೇಶಕ ಸಾಯಿ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ. 'ಅಂಥದೊಂದು ಅಸಹನೀಯ ಪ್ರಸಂಗ ಅಲ್ಲಿ ಸೃಷ್ಟಿಯಾಗಿತ್ತೇ? ಎಂದು ನಿರ್ದೇಶಕ ಸಾಯಿಪ್ರಕಾಶ್ ಅವರಲ್ಲಿ ವಿಚಾರಿಸಿದ ಫಿಲ್ಮೀಬೀಟ್ ಗೆ ಅವರು ನೀಡಿದ ಉತ್ತರ ಹೀಗಿದೆ.

  ಕಣ್ ಸನ್ನೆ ಹುಡುಗಿಯ ವಿರುದ್ಧ ಕೆಂಡಕಾರಿದ ನವರಸನಾಯಕ ಜಗ್ಗೇಶ್

  "ಸಿನಿಮಾದ ಯುವ ಕಲಾವಿದರು ಎಂದರೆ ಯುವ ಪ್ರೇಕ್ಷಕರಿಗೆ ಆಕರ್ಷಣೆ ಸಹಜ. ಅದರಲ್ಲಿ ಕೂಡ ಪ್ರಿಯಾ ಪ್ರಕಾಶ್ ವಾರಿಯರ್ ವಿದ್ಯಾರ್ಥಿನಿಯ ಪಾತ್ರದಲ್ಲೇ ಗಮನ ಸೆಳೆದವರು. ಸಾಮಾಜಿಕ ಜಾಲತಾಣದಲ್ಲಿ ದಾಖಲೆಯ ಲೈಕ್ಸ್ ಪಡೆದವರು. ಹಾಗಾಗಿ ಅವರ ಅಭಿಮಾನಿಗಳು ಕೂಡ ವ್ಯಾಪಕವಾಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ಅಂಥ ಅಭಿಮಾನಿಗಳು ಆಕೆಗೆ ಭರ್ಜರಿ ಚಪ್ಪಾಳೆ, ಸಿಳ್ಳೆಗಳ ಸ್ವಾಗತ ಕೋರಿದರೆ ಅದನ್ನು ತಪ್ಪು ತಿಳಿಯಲು ಸಾಧ್ಯವಿಲ್ಲ ಎಂದಿದ್ದಾರೆ ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್.

   ನವರಸ ನಾಯಕನಿಗೆ ಅನಿಸಿದ್ದೇನು?

  ನವರಸ ನಾಯಕನಿಗೆ ಅನಿಸಿದ್ದೇನು?

  ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಒಕ್ಕಲಿಗ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇತರ ಗಣ್ಯರೊಂದಿಗೆ ಚಿತ್ರರಂಗದ ಜಗ್ಗೇಶ್, ಕೆ.ಮಂಜು, ಅವರ ಪುತ್ರ ಶ್ರೇಯಸ್ ಹಾಗೂ ಪ್ರಿಯಾ ವಾರಿಯರ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ಮಂಜು ನಿರ್ಮಾಣದ ಹೊಸ ಚಿತ್ರದಲ್ಲಿ ಪುತ್ರ ಶ್ರೇಯಸ್ ಗೆ ನಾಯಕಿಯಾಗಿ ಪ್ರಿಯಾ ವಾರಿಯರ್ ನಟಿಸುತ್ತಿದ್ದಾರೆ. ('ಒರು ಅಡಾರ್ ಲವ್') ಚಿತ್ರದ ಹಾಡಿನ ಮೂಲಕ ಜನಪ್ರಿಯಗೊಂಡ ಪ್ರಿಯಾ ವಾರಿಯರ್ ಅವರಿಗೆ ಅಪಾರ ಅಭಿಮಾನಿಗಳಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೇವಲ ಕಣ್ ಸನ್ನೆ ಮೂಲಕ ಫೇಮಸ್ ಆದ ನಟಿ ವೇದಿಕೆ ಮೇಲೆ ಕೂರಲು ಅರ್ಹಳಾ? ಎಂಬುವುದು ನಟ ಜಗ್ಗೇಶ್ ಅವರ ಪ್ರಶ್ನೆಯಾಗಿತ್ತು. ಈ ಅಸಮಾಧಾನವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಅವರು ಬರೆದ ವಾಕ್ಯಗಳು ಹೇಗಿತ್ತು ಎನ್ನುವುದನ್ನು ಇಲ್ಲಿ ನೀಡಿದ್ದೇವೆ.

  ನನ್ನ ಪದಬಳಕೆ ಅರ್ಥವಾಗದೆ ಅಸೂಯೆ ಎಂದು ಭಾವಿಸಿದರೆ ದೌರ್ಭಾಗ್ಯ: ಜಗ್ಗೇಶ್

  ಜಗ್ಗೇಶ್ ಟ್ವೀಟ್ ನಲ್ಲಿ ಏನಿತ್ತು?

  ಜಗ್ಗೇಶ್ ಟ್ವೀಟ್ ನಲ್ಲಿ ಏನಿತ್ತು?

  "ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕ ವಿಸ್ಮಿತನಾದೆ. ರಾಜ್ಯ ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲ! ಬರಹಗಾರ್ತಿಯಲ್ಲ.!ಸ್ವತಂತ್ರ ಹೋರಾಟಗಾರ್ತಿಯಂತೂ ಅಲ್ಲವೇ ಅಲ್ಲ! ಹೋಗಲಿ ನೂರು ಸಿನಿಮಾ ನಟಿಯೂ ಅಲ್ಲ! ಸಾಹಿತಿ ಅಲ್ಲ.!ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲ. ಆಧುನಿಕ ಮದರ್ ತೆರೆಸಾ ಅಲ್ಲ! ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲ! ಕಾದಂಬರಿ ಬರೆದ ತ್ರಿವೇಣಿ ಅಲ್ಲ!ಜಾನ್ಸಿ ಅಲ್ಲ!ಅಬ್ಬಕ್ಕನಲ್ಲ!ಕಿತ್ತೂರು ಚನ್ನಮ್ಮನಲ್ಲ! ಮತ್ತೆ ಯಾರು ಅಂಥ ಯೋಚಿಸಿದರೆ ಬೇರ್ಯಾರು ಅಲ್ಲ! ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವೀಡಿಯೋ ಮಾಡಿ ಜಗ ಮೆಚ್ಚಿದ ಸಾಮಾನ್ಯ ಹೆಣ್ಣು ಮಗು! ಆಕೆ ಹೆಸರು ವಾರಿಯರ್ ಕೇರಳದ ಮಗು! ಕರೆದು ತಂದದ್ದು ಕನ್ನಡ ನಿರ್ಮಾಪಕ ಸ್ನೇಹಿತ ಮಂಜು." ಎಂದು ಜಗ್ಗೇಶ್ ಬರೆದುಕೊಂಡಿದ್ದರು.

   ಮನಸೆಳೆವ ತಾರೆಯರತ್ತ ಜೈಕಾರ ಸಹಜ!

  ಮನಸೆಳೆವ ತಾರೆಯರತ್ತ ಜೈಕಾರ ಸಹಜ!

  ಆದರೆ ಇದೀಗ ಜಗ್ಗೇಶ್ ಹೇಳುವಂಥ ನೂರು ಚಿತ್ರಗಳನ್ನು ನಿರ್ದೇಶಿಸಿರುವ ಸಾಯಿ ಪ್ರಕಾಶ್ ಅವರು ನೀಡಿರುವ ಪ್ರತಿಕ್ರಿಯೆ ಅದು ಎಷ್ಟೊಂದು ಸಾಮಾನ್ಯ ಘಟನೆ ಎನ್ನುವುದನ್ನು ಸಾಬೀತು ಪಡಿಸುವಂತಿದೆ! ಹಾಗೆ ನಿಜವಾಗಿ ನೋಡಿದರೆ ಸಿನಿಮಾಗಳ ವಿಚಾರಕ್ಕೆ ಬಂದರೆ ಅಲ್ಲಿ ಕ್ಯಾಪ್ಟನ್ ಆಫ್ ದಿ ಶಿಪ್ ಎನಿಸಿಕೊಳ್ಳುವುದೇ ನಿರ್ದೇಶಕರು. ಆದರೆ ಪ್ರೇಕ್ಷಕರ ಅಭಿಮಾನದ ಚಪ್ಪಾಳೆ ಯಾವಾಗಲೂ ಮೀಸಲಾಗುವುದು ಪರದೆಯ ಮೇಲಿನ ತಾರೆಗಳಿಗೆ. ಇದನ್ನು ಅರ್ಥ ಮಾಡಿಕೊಳ್ಳದೆ ಜಗ್ಗೇಶ್ ಇಷ್ಟು ಕಾಲ ಚಿತ್ರೋದ್ಯಮದಲ್ಲಿದ್ದಾರ ಎನ್ನುವುದು ಅಚ್ಚರಿ ಮೂಡಿಸುವಂತಿದೆ. ಮಾತ್ರವಲ್ಲ ತಾವು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಣ ಜನರ ಅಭಿಮಾನಕ್ಕಿಂತಲು ತಮಗೆ ಬಾಲಗಂಗಾಧರ ಸ್ವಾಮಿಗಳ ಮೇಲಿರುವ ಅಭಿಮಾನ ಎಂದು ಹೇಳಿದ್ದಾರೆ ಸಾಯಿ ಪ್ರಕಾಶ್. ಹಾಗಾಗಿ ವೇದಿಕೆಯಲ್ಲಿ ಮಾತ್ರವಲ್ಲ ಅಂದು ಬೆಳಗಿನಿಂದ ಸಂಜೆ ತನಕ ಅಲ್ಲೇ ಭಾಗಿಯಾಗಿದ್ದೆ ಎಂದು ಸಾಯಿ ಪ್ರಕಾಶ್ ತಿಳಿಸಿದ್ದಾರೆ.

  ಅಸೂಯೆ ಪಡಬಾರದು, ಎಲ್ಲರನ್ನು ಬೆಳೆಸಬೇಕು: ಜಗ್ಗೇಶ್ ಟ್ವೀಟ್ ಬಗ್ಗೆ ಕೆ ಮಂಜು ಪ್ರತಿಕ್ರಿಯೆ

   ಪ್ರಿಯಾ ವಾರಿಯರ್ ಕೆ. ಮಂಜು ಚಿತ್ರದಲ್ಲಿ ನಾಯಕಿ

  ಪ್ರಿಯಾ ವಾರಿಯರ್ ಕೆ. ಮಂಜು ಚಿತ್ರದಲ್ಲಿ ನಾಯಕಿ

  ಇನ್ನು ಅತಿಥಿಗಳನ್ನು ಕರೆಯುವ ವಿಚಾರ. ದೊಡ್ಡ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳುವಾಗ ಯಾರೊಂದಿಗೆ ಕುಳಿತುಕೊಳ್ಳಬೇಕು ಎಂದು ನಿರ್ಧರಿಸುವುದು ಅತಿಥಿಗಳಾಗಿ ಬರುವವರಿಗೆ ಮೀಸಲಾಗಿರುವಂಥ ವಿಷಯ. ಯಾಕೆಂದರೆ ಪ್ರಸ್ತುತ ದಿನಗಳಲ್ಲಿ ತಮ್ಮ ಜತೆಗೆ ಯಾರೆಲ್ಲ ಅತಿಥಿಗಳಾಗಿರುತ್ತಾರೆ ಎನ್ನುವ ಮಾಹಿತಿ ಮೊದಲೇ ತಿಳಿದಿರುತ್ತದೆ. ಒಂದು ವೇಳೆ ಅದರಲ್ಲಿ ಏನೇ ಬದಲಾವಣೆ ಇದ್ದರೂ ಅತಿಥಿ ಎನ್ನುವ ಸ್ಥಾನಕ್ಕೆ ಯೋಗ್ಯವಲ್ಲದ ಯಾರೂ ವೇದಿಕೆ ಏರಲು ಸಾಧ್ಯವಿಲ್ಲವಲ್ಲ? ನಿರ್ಮಾಪಕ ಮಂಜು ಅವರು ಕೂಡ ತಮ್ಮ ಸಿನಿಮಾದ ನಾಯಕ ನಾಯಕಿಯರೊಂದಿಗೆ ಹೇಗೆ ಕಾರ್ಯಕ್ರಮಕ್ಕೆ ಬಂದಿದ್ದರೋ, ಅಷ್ಟೇ ಸಹಜವಾಗಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ಸತ್ಯ.

  English summary
  Priya Prakash Varrier is famous Actress from Malayalm Film Industry. She is famous for her winking song Song. And this is Famous director Sai Prakash's reaction about Jaggesh's negative statement

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more