ಕೆಟ್ಟ ಕನಸು ಬೇಗ ಮುಗಿದು ಬಿಡಲಿ: ನಿರ್ದೇಶಕ ಸಿಂಪಲ್ ಸುನಿ
ಕರುನಾಡ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ಮಣ್ಣಾಗಿ ಹೋಗಿದ್ದಾರೆ. ಅವರ ನೆನಪುಗಳು ಮಾತ್ರ ಎಂದೆಂದಿಗೂ ಎಲ್ಲರ ಮನಸ್ಸಲ್ಲಿ ಹಚ್ಚಹಸಿರು. ಹಲವರು ಅಪ್ಪು ಮತ್ತೇ ಹುಟ್ಟಿ ಬನ್ನಿ. ಈ ಸಾವಿನ ಸುದ್ದಿ ಸುಳ್ಳಾಗಿ ಹೋಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಪ್ಪು ಅಂತ್ಯ ಸಂಸ್ಕಾರ ಮುಗಿದ ಮೇಲು. ಇದು ಕೆಟ್ಟ ಕನಸು ಬೇಗ ಮುಗಿದು ಬಿಡಲಿ ಎನ್ನುತ್ತಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.
ಎಲ್ಲರ ಹಾಗೆ ನಿರ್ದೇಶಕ ಸಿಂಪಲ್ ಸುನಿ ಕೂಡ ಅಪ್ಪು ಜೊತೆಗೆ ನಂಟು ಹೊಂದಿದವರು. ಹಾಗಾಗಿ ಅವರಿಗೂ ಈ ಸಾವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲಾ ಮುಗಿದ ಬಳಿಕವು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. "ಜಾಕಿ ಚಿತ್ರದಲ್ಲಿ ಗೋರಿಯಿಂದ ಎದ್ದು ಬಂದದನ್ನು ತೋರಿಸಿದ್ದೀರಾ.. ಈ ಕೆಟ್ಟ ಕನಸು ಮುಗಿಯುತ್ತಲೇ ಇಲ್ಲ ಎನಿಸುತ್ತಿದೆ". ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಂದರೆ ನೀವು ಮತ್ತೇ ಎದ್ದು ಬನ್ನಿ ಇದು ಕೆಟ್ಟ ಕನಸು ಎಂದು ಮರೆತು ಬಿಡುತ್ತೇವೆ ಎನ್ನುವ ಪ್ರಾರ್ಥನೆಯನ್ನು ಸುನಿ ಅಪ್ಪುಗೆ ಸಲ್ಲಿಸಿದ್ದಾರೆ.
ನಿಮ್ಮ ಆದರ್ಶ ದಾರಿ ದೀಪ: ಸಂತೋಷ್ ಆನಂದ್ ರಾಮ್
ಇನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಪುನೀತ್ ರಾಜ್‌ಕುಮಾರ್‌ಗೆ ಅತಿ ಹತ್ತಿರ ಆಗಿದ್ದ ನಿರ್ದೇಶಕ. ರಾಜಕುಮಾರ ಸಿನಿಮಾ ಮಾಡಿ ಅಪ್ಪು ಅವರನ್ನು ಬೇರೆ ರೀತಿಯಲ್ಲೇ ತೋರಿಸಿದ್ದರು. ರಾಜಕುಮಾರ ಪ್ರತಿ ಮನೆ, ಮನಕ್ಕೂ ತಲುಪಿತ್ತು. ನಂತರ ಅಪ್ಪು ಅಭಿನಯದ ಕೊನೆದಾಗಿ ರಿಲೀಸ್ ಆದ ಯುವರತ್ನ ಚಿತ್ರ ಕೂಡ ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಇದು ಕೊನೆಯದಾಗಿ ಚಿತ್ರಮಂದಿರದಲ್ಲಿ ರಿಲೀಸ್ ಆದ ಪುನೀತ್ ರಾಜ್‌ಕುಮಾರ್ ಸಿನಿಮಾ. ಪುನೀತ್ ರಾಜ್‌ಕುಮಾರ್ ಜೊತೆಯಲ್ಲಿ ಅಪ್ಪು ಪಯಣ ಇನ್ನಷ್ಟು ಮುಂದುವರೆಯ ಬೇಕಿತ್ತು. ಇಬ್ಬರೂ ಮುಂದಿನ ವರ್ಷ ಮತ್ತೊಂದು ಸಿನಿಮಾದ ಮೂಲಕ ಜೊತೆಯಾಗೋ ಯೋಚನೆಯಲ್ಲಿ ಇದ್ದರು. ಆದರೆ ಅಷ್ಟರಲ್ಲಿ ಅಪ್ಪು ಇಲ್ಲವಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ಅಪ್ಪು ಅವರ ಬಗ್ಗೆ ಸಂತೋಷ್ ಆನಂದ್ ರಾಮ್ ಬರೆದುಕೊಂಡಿದ್ದಾರೆ. " ನಾನು ಯಾವತ್ತೂ ನೀವಿಲ್ಲ ಅಂತ ಅಂದುಕೊಳ್ಳುವುದೇ ಇಲ್ಲ... ನಾನು ಮಾಡೋ ಕೆಲಸದಲ್ಲಿ.. ನಿಮ್ಮನ್ನ ಪ್ರೀತ್ಸೋ ಜನಗಳಲ್ಲಿ.. ನಿಮ್ಮ ಅಭಿಮಾನಿಗಳಲ್ಲಿ.. ನಿಮ್ಮನ್ನು ನೋಡುತ್ತಾ ಇರುತ್ತೀನಿ.. ನೀವು ನನ್ನ ಜೊತೇನೆ ಇದೀರ, ಇರ್ತೀರ ನಾನು ಇರೋವರೆಗೂ.. ಅಣ್ಣ ಹೋಗಿ ಬನ್ನಿ". ಎಂದು ಸಂತೋಷ್ ಆನಂದ್ ರಾಮ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಪ್ಪು ಒಳ್ಳೆತನ ಅಜರಾಮರ: ನಿರ್ದೇಶಕ ಪವನ್ ಒಡೆಯರ್
ನಿರ್ದೇಶಕ ಪವನ್ ಒಡೆಯರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಎರಡು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ರಣವಿಕ್ರಮ ಮತ್ತು ನಟಸಾರ್ವಭೌಮ ಚಿತ್ರಗಳಿಗೆ ಪಬನ್ ಒಡೆಯನ್ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಅವರಿಗೂ ಅಪ್ಪು ಜೊತೆಗೆ ನಿಕಟ ಬಾಂಧವ್ಯ ಬೆಳೆದಿತ್ತು. ಪವನ್ ಕೂಡ ಪುನೀತ್ ಅವರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅಪ್ಪು ಸರ್ ನಿಮ್ಮ ನೆನಪುಗಳು ಶಾಸ್ವತ.. ನಿಮ್ಮ ಮಗುವಿನ ಮನಸ್ಸು ಅಮರ.. ನಿಮ್ಮ ಒಳ್ಳೆತನ ಅಜರಾಮರ.
ಸಿನಿಮಾದ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಅಪ್ಪು ಜೊತೆಗೆ ಅವಿನಾಭಾವ ಸಂಬಂಧ ಹೊಂದಿದವರು. ಅದರಲ್ಲೂ ಸಾಕಷ್ಟು ನಿರ್ದೇಶಕರಿದ್ದಾರೆ. ಅಪ್ಪು ಸಿನಿಮಾ ಅಂದರೆ ನಿರ್ದೇಶಕನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ನಿರ್ದೇಶನದ ಯೋಜನೆಯನ್ನು ತೆರೆಮೇಲೆ ತರು ಕಷ್ಟ ಪಡುತತ್ತಿದ್ದರು. ತಾನು ದೊಡ್ಡ ಸ್ಟಾರ್ ಎಂಧು ಯಾವತ್ತು ನಿರ್ದೇಶಕನ ಮಾತನ್ನು ತಳ್ಳಿ ಹಾಕಿದಿಲ್ಲ. ಹಾಗಾಗಿಯೇ ಅಪ್ಪು ಅಂದ್ರೆ ಅಷ್ಟು ಪ್ರೀತಿ.


Click it and Unblock the Notifications











