Puneeth Rajkumar: ಅಪ್ಪುಗಾಗಿ 'ನಗು ನಗುತಾ ನೀ', 'ಪವರಿಸಂ' ಗೀತ ನಮನ!
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಇದೇ ಮಾರ್ಚ್ 17ಕ್ಕೆ ಇದೆ. ಹಾಗಾಗಿ ಅಭಿಮಾನಿಗಳು ಮತ್ತು ಅವರ ಆಪ್ತರು ಅಪ್ಪು ಅವರ ನೆನಪನ್ನು ಜೀವಂತವಾಗಿ ಇರಿಸಲು ಅದ್ಧೂರಿ ಸಂಭ್ರಮಾಚಾರಣೆಗೆ ಮುಂದಾಗಿದ್ದಾರೆ. ಅಪ್ಪು ಹುಟ್ಟುಹಬ್ಬ ಇದೆ ಎನ್ನುವುದು ಒಂದು ಕಡೆ ಆದರೆ, ಮತ್ತೊಂದು ಕಡೆ 'ಜೇಮ್ಸ್' ಸಿನಿಮಾ ರಿಲೀಸ್ ಆಗುತ್ತಿದೆ.
Recommended Video

ಇದರ ಜೊತೆಗೆ ಮತ್ತಷ್ಟು ವಿಶೇಷತೆಗಳು ಇವೆ. ಅಭಿಮಾನಿಗಳು ಅಪ್ಪುಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರುಗಳೇ ಹಾಡುಗಳನ್ನು ಬರೆದು ರಿಲೀಸ್ ಮಾಡುತ್ತಿದ್ದಾರೆ. ಜೊತೆಗೆ ಕನ್ನಡದ ಹೆಸರಾಂತ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಮತ್ತು ಪವನ್ ಒಡೆಯರ್ ಇಬ್ಬರೂ ಕೂಡ ಪುನೀತ್ ರಾಜ್‌ಕುಮಾರ್‌ಗೆ ವಿಷೇಶವಾದ ಹಾಡು ಬರೆದಿದ್ದಾರೆ. ಈ ಇಬ್ಬರು ನಿರ್ದೇಶಕರು ಕೂಡ ಪುನೀತ್ ರಾಜ್‌ಕುಮಾರ್‌ಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್‌ಗಾಗಿ ಸಂತೋಷ್ ಆನಂದ್‌ರಾಮ್ ಕೂಡ ವಿಶೇಷವಾದ ಹಾಡನ್ನು ಮಾಡಿದ್ದಾರೆ. ಈ ಹಾಡನ್ನು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಬೆಳಿಗ್ಗೆ 11.30ಕ್ಕೆ ರಿಲೀಸ್ ಮಾಡಲಾಗುತ್ತದೆ. ಈ ವಿಚಾರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ನಗು ನಗುತಾ ನೀನು" ಎನ್ನುವ ಸಾಲಿನೊಂದಿಗೆ ಹಾಡು ಶುರುವಾತ್ತದೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಸಂತೋಷ್ "ನನ್ನ ಧ್ರುವತಾರೆಗೆ ನನ್ನ ಹಾಗೂ ನಮ್ಮ ತಂಡದ ನುಡಿನಮನ. ಅಣ್ಣ ನೀವು ಕೊಟ್ಟ ಪ್ರೀತಿಗೆ, ನಿಮ್ಮನ್ನು ಪ್ರೀತಿಸುವ ಹೃದಯಗಳಿಗೆ ಅರ್ಪಣೆ" ಎಂದು ಬರೆದುಕೊಂಡಿದ್ದಾರೆ.

ಈಗ ಇಬ್ಬರೂ ಅಪ್ಪುಗೆ ವಿಶೇಷವಾದ ಹಾಡು ಬರೆದಿದ್ದಾರೆ. ಈಗಾಗಲೇ ಪವನ್ ಅವರು ಬರೆದಿರುವ ಹಾಡು ರಿಲೀಸ್ ಆಗಿದೆ. ಈ ಹಾಡನ್ನು 'ಪವರಿಸಂ' ಎನ್ನುವ ಹೆಸರಿನಲ್ಲಿ ರಿಲೀಸ್ ಮಾಡಲಾಗಿದೆ. ನಟ ಸಾರ್ವಭೌಮ ಚಿತ್ರದ ಡ್ಯಾನ್ಸ್ ವಿತ್ ಅಪ್ಪು ಹಾಡನ್ನು ಬಳಸಿಕೊಂಡು ಹೊಸದಾಗಿ ಸಾಹಿತ್ಯ ಮಾಡಿ ಹಾಡು ಮಾಡಲಾಗಿದೆ. ಈ ಹಾಡಿನ ವಿಶೇಷತೆ ಎಂದರೆ ಪುನೀತ್ ರಾಜ್‌ಕುಮಾರ್ ಅವರು ಅಭಿನಯದ ಅಷ್ಟು ಸಿನಿಮಾಗಳ ಹೆಸರುಗಳನ್ನು ಸೇರಿಸಿ ಸಾಹಿತ್ಯ ಬರೆಯಲಾಗಿದೆ.
ಅಪ್ಪು, ಅಭಿ, ಆಕಾಶ್ ಸಿನಿಮಾಗಳಿಂದ ಹಿಡಿದು ಅವರು ಬಾಲನಟನಾಗಿ ಅಭಿನಯಿಸಿದ ಚಿತ್ರಗಳ ಹೆಸರುಗಳು ಸೇರಿಕೊಂಡಿವೆ. ಈಗಾಗಲೇ ಹಾಡು ಯುಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಡ್ಯಾನ್ಸ್ ವಿಡಿಯೋಗಳನ್ನು ಜೋಡಿಸಲಾಗಿದೆ. ಅಪ್ಪು ಬಗ್ಗೆ ಬರೆದಿರುವ ಸಾಲುಗಳು ಅವರ ಡ್ಯಾನ್ಸ್‌ಗೆ ತಕ್ಕಂತೆ ಇವೆ.
ಒಟ್ಟಾರೆ ಅಪ್ಪು ಇಲ್ಲ ಎನ್ನುವ ಕಹಿ ನೆನಪಿಗಿಂತ, ಅವರು ನಮ್ಮ ಮಧ್ಯದಲ್ಲೇ ಇದ್ದಾರೆ ಎಂದು ಅವರ ನೆನಪುಗಳನ್ನು ಜೀವಂತವಾಗಿ ಉಳಿಸಿಕೊಂಡು ಹೋಗಲು ಎಲ್ಲರೂ ಪ್ರಯತ್ನ ಪಡುತ್ತಿದ್ದಾರೆ.


Click it and Unblock the Notifications











