»   » ಸಂತೋಷ್ ಆನಂದ್ ರಾಮ್ ಮನೆಗೆ ಬಂತು ಹೊಸ ಕಾರ್

ಸಂತೋಷ್ ಆನಂದ್ ರಾಮ್ ಮನೆಗೆ ಬಂತು ಹೊಸ ಕಾರ್

Posted By:
Subscribe to Filmibeat Kannada

ಎರಡು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ಈಗ ಮೂರನೇ ಚಿತ್ರದ ತಯಾರಿಯಲ್ಲಿದ್ದಾರೆ.

ಹೀಗೆ, ಹ್ಯಾಟ್ರಿಕ್ ಸಿನಿಮಾದ ಹಾದಿಯಲ್ಲಿರುವ ಸಂತೋಷ್ ಅವರು ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನ ಕರೆದುಕೊಂಡು ಬಂದಿದ್ದಾರೆ. ಈ ಸುದ್ದಿಯನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

director santhosh ananddram buys a new Honda car

ಅಂದ್ಹಾಗೆ, ಸಂತೋಷ್ ಆನಂದ್ ರಾಮ್ ಅವರ ಮನೆಗೆ ಬಂದಿರುವ ಹೊಸ ಅತಿಥಿ ಹೋಂಡಾ ಕಾರ್. ಈಗಾಗಲೇ 'Renault duster' ಕಾರ್ ಹೊಂದಿರುವ ಸಂತೋಷ್ ಈಗ ಹೋಂಡಾ ಕಂಪನಿಯ ಹೊಸ ಕಾರನ್ನ ಖರೀದಿಸಿದ್ದಾರೆ. ತಮ್ಮ ಹೊಸ ಕಾರಿನ ಫೋಟೋವನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

Shruthi Hariharan speaks about Darshan in Super Talk Time Show

ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರು. ಈಗ ಮೂರನೇ ಚಿತ್ರದ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದು, ನಾಯಕನ ಹುಡುಕಾಟದಲ್ಲಿದ್ದಾರೆ. ವಿಶೇಷ ಅಂದ್ರೆ, ರಾಜಕುಮಾರ ಚಿತ್ರವನ್ನ ನಿರ್ಮಾಣ ಮಾಡಿದ್ದ 'ಹೊಂಬಾಳೆ ಫಿಲ್ಮ್ಸ್ ಬ್ಯಾನರ್' ಅವರೇ ಮೂರನೇ ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ.

English summary
kannada successful director santhosh ananddram buys a new Honda car
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada