ಅಪ್ಪುಗಾಗಿ ರಾಜಕುಮಾರ ನಿರ್ದೇಶಕನ ವಿಶೇಷ ಕೊಡುಗೆ!
ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬ. ಅಪ್ಪು ಇಲ್ಲವಾದರು, ಅವರು ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವದಿಂದ ಅಭಿಮಾನಿಗಳು ಜಾತ್ರೆ ಮಾಡಲು ಶುರು ಮಾಡಿದ್ದಾರೆ. ಈಗಾಗಲೇ ಅಪ್ಪು ಹುಟ್ಟುಹಬ್ಬಕ್ಕೆ ಏನೆಲ್ಲಾ ಮಾಡಬೇಕು ಎನ್ನುವ ಯೋಜನೆಗಳೊಂದಿಗೆ, ಅಪ್ಪು ಅಭಿಮಾನಿಗಳು ಮತ್ತು ಚಿತ್ರರಂಗದ ಮಂದಿ ಸಜ್ಜಾಗಿದ್ದಾರೆ.
ಕೇವಲ ಅಭಿಮಾಗಳು ಮಾತ್ರ ಅಲ್ಲ. ಸಿನಿಮಾದವರಿಗೂ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ವಿಶೇಷ. ಹಾಗಾಗಿ ನಿರ್ದೇಶನಕ ಸಂತೋಷ್ ಆನಂದ್ ರಾಮ್ ವಿಶೇಷವಾದ ಕೊಡುಗೆಯನ್ನು ನೀಡಲು ಸಜ್ಜಾಗಿದ್ದಾರೆ. ಹೌದು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಹಾಡನ್ನು ಮಾಡಿದ್ದಾರೆ ಸಂತೋಷ್ ಆನಂದ್ ರಾಮ್.
ಈ ವಿಚಾರವನ್ನು ಸ್ವತಃ ಅವರೇ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಈ ಹಾಡಿಗೆ ಸಂತೋಷ್ ಆನಂದ್ ರಾಮ್ ಸಾಹಿತ್ಯ ಇದೆ. ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಸಂಗೀತ ಮಾಡಿದ್ದಾರೆ ಎಸ್ ತಮನ್. ಈ ಹಾಡು ಸಂಪೂರ್ಣವಾಗಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆನೆ ಇರುತ್ತೆ.

ಸಂತೋಷ್ ಆನಂದ್ ರಾಮ್ ಈ ನಿರ್ಧಾರಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ಪ್ರತಿ ವರ್ಷ ಹೀಗೆ ಒಂದು ಹಾಡು ಮಾಡಿ, ಈ ಹಾಡು ನಮ್ಮ ಪಾಲಿನ ರಾಷ್ಟ್ರ ಗೀತೆ ಆಗಲಿದೆ ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಜೇಮ್ಸ್ ಮೂಲಕ ಅಬ್ಬರಿಸಲಿದ್ದಾರೆ ಅಪ್ಪು. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್ 17 ರಿಲೀಸ್ ಆಗುತ್ತಿದೆ. ಈಗಾಗಲೇ ಜೇಮ್ಸ್ ಹಾಡುಗಳು ಜನಮನ ತಲುಪಿವೆ. ಜೇಮ್ಸ್ ಚಿತ್ರದ ಪ್ರಮೋಷನ್ ಹಾಡು ಮತ್ತು ಸಲಾಂ ಸೋಲ್ಜರ್ ಹಾಡುಗಳು ವೈರಲ್ ಆಗಿವೆ. ಪ್ರತಿಯೊಬ್ಬರು 'ಜೇಮ್ಸ್' ಚಿತ್ರ ನೋಡಬೇಕೆಂದು ಕಾಯುತ್ತಿದ್ದಾರೆ.


Click it and Unblock the Notifications











