twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ಬಗ್ಗೆ 'ರಾಜಕುಮಾರ' ನಿರ್ದೇಶಕನ ಮನದಾಳದ ಮಾತು!

    By Naveen
    |

    'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ಕನ್ನಡ ಸ್ಟಾರ್ ಡೈರೆಕ್ಟರ್. ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ಗೆ ದೊಡ್ಡ ಸ್ಪೂರ್ತಿ ನೀಡಿದ್ದು, ರಿಯಲ್ ಸ್ಟಾರ್ ಉಪೇಂದ್ರ ಎನ್ನುವುದು ಸದ್ಯದ ಹಾಟ್ ಟಾಪಿಕ್.

    ನಟ, ನಿರ್ದೇಶಕ ಉಪೇಂದ್ರ ಅವರ ಪ್ರತಿಭೆಯನ್ನು ಈಗಾಗಲೇ ಅನೇಕ ನಟ ನಿರ್ದೇಶಕರು ಹೊಗಳಿದ್ದಾರೆ. ಉಪ್ಪಿ ಯೋಚನೆ ಮಾಡುವ ರೀತಿ, ಅವರ ಡಿಫ್ರೆಂಟ್ ಸಿನಿಮಾಗಳು ಅನೇಕರನ್ನ ಎಚ್ಚರಿಸಿದೆ.

    ಅದೇ ರೀತಿ ಉಪೇಂದ್ರ ಅವರ ಪ್ರಭಾವಕ್ಕೆ ಒಳಗಾಗಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಮನದಾಳದ ಮಾತುಗಳನ್ನ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

    ಉಪ್ಪಿ ಬಗ್ಗೆ ಸಂತೋಷ್ ಮನದಾಳದ ಮಾತು

    ಉಪ್ಪಿ ಬಗ್ಗೆ ಸಂತೋಷ್ ಮನದಾಳದ ಮಾತು

    ತೆಲುಗಿನ 'ಅರ್ಜುನ್ ರೆಡ್ಡಿ' ಮತ್ತು ತಮಿಳಿನ 'ವಿಕ್ರಮ್ ವೇದ' ಸಿನಿಮಾಗಳು ತನ್ನ ವಿಭಿನ್ನತೆಯಿಂದ ದೊಡ್ಡ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಬಗ್ಗೆ ದೊಡ್ಡ ಚರ್ಚೆಗಳು ಆಗುತ್ತಿವೆ. ಆದ್ರೆ, ಈ ಚಿತ್ರಗಳಿಗೆ ಸಂಬಂಧಪಟ್ಟಂತೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ಉಪ್ಪಿ ಬಗ್ಗೆ ಮಾತನಾಡಿದ್ದಾರೆ.

    'ಅರ್ಜುನ್ ರೆಡ್ಡಿ' ಮತ್ತು 'ವಿಕ್ರಮ್ ವೇದ' ಒಳ್ಳೆಯ ಚಿತ್ರಗಳು

    'ಅರ್ಜುನ್ ರೆಡ್ಡಿ' ಮತ್ತು 'ವಿಕ್ರಮ್ ವೇದ' ಒಳ್ಳೆಯ ಚಿತ್ರಗಳು

    ''ಅರ್ಜುನ್ ರೆಡ್ಡಿ' ಮತ್ತು 'ವಿಕ್ರಮ್ ವೇದ' ಒಳ್ಳೆಯ ಸಿನಿಮಾಗಳು. ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಈ ರೀತಿಯ ಕಲ್ಟ್(cult) ಚಿತ್ರಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅದನ್ನು ನಾನು ಒಪ್ಪುತ್ತೇನೆ.'' - ಸಂತೋಷ್ ಆನಂದ್ ರಾಮ್, ನಿರ್ದೇಶಕ.

    20 ವರ್ಷದ ಹಿಂದೆಯೇ ಕನ್ನಡದಲ್ಲಿ ಬಂದಿತ್ತು

    20 ವರ್ಷದ ಹಿಂದೆಯೇ ಕನ್ನಡದಲ್ಲಿ ಬಂದಿತ್ತು

    ''ಆದ್ರೆ, ಈ ವಿಷಯವನ್ನು ಚರ್ಚಿಸುವಾಗ 20 ವರ್ಷದ ಹಿಂದೆಯೇ ಈ ರೀತಿಯ ಕಲ್ಟ್(cult) ಸಿನಿಮಾ ಕನ್ನಡದಲ್ಲಿ ಬಂದಿರುವುದು ನನಗೆ ತಿಳಿಯಿತು. ಆ ಸಿನಿಮಾ ಮತ್ತು ಆ ನಿರ್ದೇಶಕನ ಹೆಸರು 'ಉಪೇಂದ್ರ.'' - ಸಂತೋಷ್ ಆನಂದ್ ರಾಮ್, ನಿರ್ದೇಶಕ.

    ಅಪ್ಪ-ಅಮ್ಮನಂತೆ ಸಿನಿಲೋಕಕ್ಕೆ ಕಾಲಿಟ್ಟ ಉಪೇಂದ್ರ ಮುದ್ದಿನ ಮಗಳುಅಪ್ಪ-ಅಮ್ಮನಂತೆ ಸಿನಿಲೋಕಕ್ಕೆ ಕಾಲಿಟ್ಟ ಉಪೇಂದ್ರ ಮುದ್ದಿನ ಮಗಳು

    ಈ ರೀತಿಯ ಚಿತ್ರಗಳ ಸೃಷ್ಟಿಕರ್ತ ಯಾರು?

    ಈ ರೀತಿಯ ಚಿತ್ರಗಳ ಸೃಷ್ಟಿಕರ್ತ ಯಾರು?

    ''ಉಪ್ಪಿ ಸರ್ ಈ ರೀತಿಯ ಕಲ್ಟ್(cult)ಗಳ ಸೃಷ್ಟಿಕರ್ತ. ಅವರು ನನ್ನ ರೀತಿಯ ಸಾವಿರ ಯುವಕರಿಗೆ ನಿರ್ದೇಶಕನಾಗುವ ಸ್ಪೂರ್ತಿ ನೀಡಿದ್ದಾರೆ. ಅವರ ಈ ರೀತಿಯ ಬೋಲ್ಡ್ ಪ್ರಯತ್ನಕ್ಕೆ ಹ್ಯಾಟ್ಸ್ ಆಪ್.. ನಿಮ್ಮ ಅಭಿಮಾನಿ ಸಂತೋಷ್ ಆನಂದ್ ರಾಮ್.'' ಎಂದು ಉಪೇಂದ್ರ ಪ್ರತಿಭೆ ಬಗ್ಗೆ ಸಂತೋಷ್ ಹೇಳಿದ್ದಾರೆ.

    ದುಡ್ಡು ಪೀಕುತ್ತಿದ್ದವನನ್ನ ಉಪೇಂದ್ರ ಕ್ಷಮಿಸಿದ್ದಾರೆ: ನೀವೇನ್ಮಾಡ್ತೀರಾ.?ದುಡ್ಡು ಪೀಕುತ್ತಿದ್ದವನನ್ನ ಉಪೇಂದ್ರ ಕ್ಷಮಿಸಿದ್ದಾರೆ: ನೀವೇನ್ಮಾಡ್ತೀರಾ.?

    ಉಪ್ಪಿಯನ್ನ ಮೆಚ್ಚಿದ ಬಳಗ ದೊಡ್ಡದಿದೆ

    ಉಪ್ಪಿಯನ್ನ ಮೆಚ್ಚಿದ ಬಳಗ ದೊಡ್ಡದಿದೆ

    'ಓಂ' ಸಿನಿಮಾದ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ರಿಂದ ಹಿಡಿದು, ನಟ ಶಿವಣ್ಣ, ಸುದೀಪ್, ಯಶ್, ರಕ್ಷಿತ್ ಶೆಟ್ಟಿವರೆಗೆ ಅನೇಕರು ಉಪೇಂದ್ರ ಅವರ ಸಿನಿಮಾಗಳಿಗೆ ಫಿದಾ ಆಗಿದ್ದಾರೆ.

    ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!

    'ಉಪೇಂದ್ರ' ಚಿತ್ರದ ಬಗ್ಗ.....

    'ಉಪೇಂದ್ರ' ಚಿತ್ರದ ಬಗ್ಗ.....

    'ಉಪೇಂದ್ರ' ಸಿನಿಮಾ 2000ರಲ್ಲಿ ಬಿಡುಗಡೆಯಾಗಿತ್ತು. 'ನಾನು' ಎಂಬ ಅಂಶವನ್ನು ಇಟ್ಟು ಉಪೇಂದ್ರ ಸಿನಿಮಾ ಮಾಡಿದ್ದರು. ಪ್ರೇಮಾ, ರವೀನಾ ಟಂಡನ್, ಧಾಮಿನಿ ಈ ಚಿತ್ರದಲ್ಲಿ ಮೂವರು ನಾಯಕಿಯರಾಗಿ ನಟಿಸಿದ್ದರು. ಅವತ್ತಿನ ಕಾಲಕ್ಕೆ 'ಉಪೇಂದ್ರ' ಕನ್ನಡದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಸಿದ ಸಿನಿಮಾ.

    English summary
    Kannada Director 'Santhosh Ananddram' has taken his Facebook account to appreciate Upendra's direction.
    Saturday, September 9, 2017, 17:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X