twitter
    For Quick Alerts
    ALLOW NOTIFICATIONS  
    For Daily Alerts

    ವಿತರಕರಾದ ನಿರ್ದೇಶಕ ಸತ್ಯ: ಅಪ್ಪು ಹೇಳಿದ ಮಾತು ಸ್ಪೂರ್ತಿ

    |

    'ರಾಮಾ ರಾಮಾ ರೇ', 'ಒಂದಲ್ಲ ಎರಡಲ್ಲ' ಅಂಥಹಾ ಸದಭಿರುಚಿಯ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಸತ್ಯ ಪ್ರಕಾಶ್ ಇದೀಗ ಸಿನಿಮಾ ವಿತರಕರಾಗಿದ್ದಾರೆ!

    ಸತ್ಯ ಹಾಗೂ ಇನ್ನೂ ಕೆಲವು ಸಮಾನ ಮನಸ್ಕ ಗೆಳಯರು ಸೇರಿಕೊಂಡು 'ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್' ಹೆಸರಿನ ಸಿನಿಮಾ ವಿತರಣೆ ಸಂಸ್ಥೆ ಆರಂಭಿಸಿದ್ದು, ಸದಭಿರುಚಿಯ ಕನ್ನಡ ಸಿನಿಮಾಗಳನ್ನು ಕರ್ನಾಟಕದ ಜನತೆಗೆ ತಲುಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.

    ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸತ್ಯ, 'ಸಂಸ್ಥೆಗೆ 'ಸತ್ಯ ಪಿಕ್ಚರ್ಸ್' ಹಾಗೂ 'ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್' ಎಂದು ಹೆಸರು ಇದ್ದ ಮಾತ್ರಕ್ಕೆ ಇದು ನನ್ನ ಸಂಸ್ಥೆಯಲ್ಲ. ಸತ್ಯವಂತಿಕೆಯಿಂದ ಕೆಲಸ ಮಾಡುವ ತಂಡ ನಮ್ಮದಾಗಿರುವ ಕಾರಣ ಈ ಹೆಸರು ಇಟ್ಟಿದ್ದೇವೆ. ನಾನು ಬರಹಗಾರ ಮತ್ತು ನಿರ್ದೇಶಕ ಮಾತ್ರವೇ ನಾನು ನಿರ್ಮಾಪಕ ಅಥವಾ ವಿತರಕ ಅಲ್ಲ. ನಾನು ಈ ತಂಡದ ಭಾಗವಷ್ಟೆ'' ಎಂದು ಸ್ಪಷ್ಟಪಡಿಸಿದರು.

    Director Satya Praksh And Friends Started Satya Cine Distributors Venture

    ''ಪ್ರಕಾಶ್ ಅವರು ಮೊದಲಿಗೆ ಈ ಯೋಚನೆಯನ್ನು ನನ್ನ ಮುಂದಿಟ್ಟರು. ನನಗೂ ಸಿನಿಮಾದ ವ್ಯವಹಾರ ತಿಳಿದುಕೊಳ್ಳುವ ಆಸಕ್ತಿಯಿದ್ದಿದ್ದರಿಂದ ನಾನು ಒಪ್ಪಿಕೊಂಡೆ. ಮಂಜುನಾಥ್ ತಂಡ ಸೇರಿಕೊಂಡರು, ದೀಪಕ್ ಅವರು ಬಂದರು. ಹೀಗೆ ತಂಡ ದೊಡ್ಡದಾಗಿ ಭಾಸ್ಕರ್, ಮಂಜೇಶ್ ಸೇರಿಕೊಂಡರು ಇವರುಗಳೇ ಈ ಸಂಸ್ಥೆಯ ಮುಖ್ಯ ಆಧಾರ ಸ್ಥಂಭಗಳು. 'ಒಂದಲ್ಲ ಎರಡಲ್ಲ' ಸಿನಿಮಾದ ಬಳಿಕ ಸಿನಿಮಾ ವ್ಯವಹಾರ ತಿಳಿದುಕೊಳ್ಳಬೇಕೆಂಬ ಆಸಕ್ತಿ ಹೆಚ್ಚಿತ್ತು, ಹಾಗಾಗಿ ನಾನೂ ಸಹ ಅವರು ವಿತರಣೆ ಸಂಸ್ಥೆ ಪ್ರಾರಂಭಿಸುವ ಯೋಜನೆ ಮುಂದಿಟ್ಟಾಗ ಕೂಡಲೇ ಒಪ್ಪಿಕೊಂಡೆ'' ಎಂದರು ಸತ್ಯ.

    ಸಿನಿಮಾ ರಂಗದಲ್ಲಿ ತಾವು ಕಲಿತ ಪಾಠಗಳ ಬಗ್ಗೆ ಮಾತನಾಡುತ್ತಾ, ಪುನೀತ್ ರಾಜ್‌ಕುಮಾರ್ ಹೇಳಿದ ಮಾತು ನೆನಪು ಮಾಡಿಕೊಂಡ ಸತ್ಯ, ''ಪುನೀತ್ ರಾಜ್‌ಕುಮಾರ್ ಅವರು ಹೇಳಿದ್ದರು, 'ಸಿನಿಮಾ ಕಲೆ ನಿಜ, ಆದರೆ ಅದು ವ್ಯವಹಾರವೂ ಹೌದು. ಸಿನಿಮಾಕ್ಕೆ ಹಾಕಿದ ಬಂಡವಾಳವನ್ನು ನಾವು ಮರಳಿ ಪಡೆಯಬೇಕು. ಹಾಗಿದ್ದರೆ ಮಾತ್ರವೇ ಈ ಕಲೆ ಮುಂದುವರೆಯಲು ಸಾಧ್ಯ. ಹಣ ಮರಳಿ ಬಂದಾಗಲಷ್ಟೆ ನಮಗೆ ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಲು ಸಾಧ್ಯ. ಸಿನಿಮಾವನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯ, ಅವರು ಮತ್ತೊಂದು ಸಿನಿಮಾಕ್ಕೆ ಸಜ್ಜಾಗುವಂತೆ ಸ್ಪೂರ್ತಿ ತುಂಬಲು ಸಾಧ್ಯ' ಎಂದಿದ್ದರು. ಆ ಮಾತು ನನಗೆ ಹಿಡಿಸಿತು, ಅವರ ಮಾತಿನ ಸ್ಪೂರ್ತಿಯೂ ಈ ವಿತರಣೆ ವ್ಯವಹಾರಕ್ಕೆ ಇಳಿಯಲು ಕಾರಣಗಳಲ್ಲಿ ಒಂದು'' ಎಂದರು.

    Director Satya Praksh And Friends Started Satya Cine Distributors Venture

    ''ನಮ್ಮ ವಿತರಣೆ ಸಂಸ್ಥೆಯ ಮೂಲಕ ಸಿನಿಮಾಗಳನ್ನು ಗುತ್ತಿಗೆ (ಲೀಸ್) ಪಡೆಯುವ ಯೋಜನೆ ಹಾಕಿಕೊಂಡಿದ್ದೇವೆ. ಅದರ ಜೊತೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಿಲ್ ಮಾಡುವ ಯೋಜನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ'' ಎಂದರು.

    ಸತ್ಯ ಪ್ರಕಾಶ್, 'ಮ್ಯಾನ್ ಆಫ್‌ ದಿ ಮ್ಯಾಚ್' ಸಿನಿಮಾ ನಿರ್ದೇಶನ ಮಾಡಿದ್ದು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾಕ್ಕೆ ಪುನೀತ್ ರಾಜ್‌ಕುಮಾರ್ ಬೆಂಬಲ ಇತ್ತು. ಸಿನಿಮಾವನ್ನು ಪುನೀತ್ ಅವರ ಪಿಆರ್‌ಕೆ ಪ್ರೊಡಕ್ಷನ್ ಸಂಸ್ಥೆ ಪ್ರೆಸೆಂಟ್ ಮಾಡುತ್ತಿದೆ. ಸಿನಿಮಾವು ಕೆಲವೇ ದಿನಗಳಲ್ಲಿ ನೇರ ಒಟಿಟಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

    English summary
    Director D Satya Prakash and friends started Satya Cine Distributors venture. Satya says he will remain as writer and director.
    Friday, January 7, 2022, 21:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X