'ಕೌಸಲ್ಯಾ ಸುಪ್ರಜಾ ರಾಮ' ಮೊದಲ ವಾರದ ಗಳಿಕೆ ₹1.85 ಕೋಟಿನಾ? ಪಕ್ಕಾ ಲೆಕ್ಕ ಬಿಚ್ಚಿಟ್ಟ ಶಶಾಂಕ್

ಕನ್ನಡ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಕೌಸಲ್ಯಾ ಸುಪ್ರಜಾ ರಾಮ' ಮತ್ತು 'ಆಚಾರ್ ಅಂಡ್ ಕೋ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿವೆ. ಇನ್ನು 3 ಸಿನಿಮಾಗಳ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಸ್ಟಾರ್ ಕಲಾವಿದರು ಇಲ್ಲದೇ ಇದ್ರು 3 ಸಿನಿಮಾಗಳ ಕಲೆಕ್ಷನ್ ಭರ್ಜರಿಯಾಗಿದೆ.

ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಬೃಂದಾ ಆಚಾರ್ಯ ನಟನೆಯ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಸದ್ದು ಜೋರಾಗಿಯೇ ಇದೆ. ಕಳೆದ ವಾರ ಬಿಡುಗಡೆಯಾದ ಚಿತ್ರಕ್ಕೆ ಎಲ್ಲಡೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಯೂತ್ ಎಂಟರ್‌ಟೈನರ್ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದು ಮುನ್ನುಗ್ಗುತ್ತಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗದಿದ್ದರೂ ಸಾಕಷ್ಟು ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಸೆಕೆಂಡ್ ವೀಕೆಂಡ್‌ನಲ್ಲೂ ಕಲೆಕ್ಷನ್ ಜೋರಾಗಿದೆ.

Kousalya- Supraja- Rama- collection

ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿರುವುದು ನೋಡಿ ಸಿನಿಮಾ ಕಲೆಕ್ಷನ್ ಎಷ್ಟಾಗಿರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡಿತ್ತು. ಶುಕ್ರವಾರಕ್ಕೂ ಮುನ್ನವೇ ಪೇಯ್ಡ್ ಪ್ರೀಮಿಯರ್‌ ಶೋಗಳು ನಡೆದು ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಶುಕ್ರವಾರದಿಂದ ಸಿನಿಮಾ ಮತ್ತಷ್ಟು ಸದ್ದು ಮಾಡಲು ಆರಂಭಿಸಿತು.

ಫಸ್ಟ್ ವೀಕ್ ₹1.85 ಕೋಟಿ ಗಳಿಕೆ?

ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಫಸ್ಟ್‌ ವೀಕ್ ಕಲೆಕ್ಷನ್ ಬಗ್ಗೆ ಇದೀಗ ನಿರ್ದೇಶಕ ಶಶಾಂಕ್ ಪ್ರತಿಕ್ರಿಯಿಸಿದ್ದಾರೆ. ಟ್ವಿಟ್ಟರ್ ಪೇಜ್‌ವೊಂದರಲ್ಲಿ ಸಿನಿಮಾ ಮೊದಲ ವಾರ 1.65 ರಿಂದ 1.85 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಪೋಸ್ಟ್ ಆಗಿತ್ತು. ಈ ಪೋಸ್ಟ್‌ ರೀಟ್ವೀಟ್ ಮಾಡಿರುವ ಶಶಾಂಕ್ ಸಿನಿಮಾ ಕಲೆಕ್ಷನ್ ಬಗ್ಗೆ ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ.

Kousalya- Supraja- Rama- collection

ನಾವು ಹೇಳುವವರೆಗೂ ಕಾಯಿರಿ

ನಿರ್ದೇಶಕ ಶಶಾಂಕ್ ಟ್ವೀಟ್ ಮಾಡಿ "ನಿಮಗೆ ಈ ಅಂಕಿ ಅಂಶ ಅಲ್ಲಿಂದ ಸಿಗುತ್ತದೆ ಎಂದು ನನಗೆ ಅಚ್ಚರಿಯಾಗುತ್ತದೆ. ನಿಜವಾಗಿಯೂ ಸಿನಿಮಾ ನೀವು ಹೇಳಿದ್ದಕ್ಕಿಂತ ಹೆಚ್ಚು ಗಳಿಕೆ ಕಾಣುತ್ತಿದೆ. ದಯವಿಟ್ಟು ಮನಸ್ಸಿಗೆ ಬಂದಷ್ಟು ಅಂಕಿ ಅಂಶ ಹಾಕಿ ಜನರನ್ನು ತಪ್ಪುದಾರಿಗೆ ಎಳೆಯಬೇಡಿ. ನಾವೇ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಮಾಹಿತಿ ನೀಡುವವರೆಗೂ ಸ್ವಲ್ಪ ಕಾಯಿರಿ" ಎಂದು ಬರೆದಿದ್ದಾರೆ.

ಸಿನಿಮಾ ಕಥೆ ಏನು?

ನಾಯಕ ರಾಮ್ ಚಿಕ್ಕಂದಿನಿಂದ ತಂದೆ ಹೇಳಿಕೊಡುವ ಪುರುಷತ್ವದ ಪಾಠ ಕೇಳಿ ಬೆಳೆಯುತ್ತಾನೆ. ಗಂಡು ಎಂಬ ಅಹಂನಿಂದ ಸಂಬಂಧಗಳ ಮೌಲ್ಯ ತಿಳಿಯದೇ ಹೇಗೆ ಬದುಕುತ್ತಿರುತ್ತಾನೆ. ಈ ಹಾದಿಯಲ್ಲಿ ತನ್ನ ಲವ್ ಲೈಫ್ ಕೂಡ ಹಾಳು ಮಾಡಿಕೊಳ್ತಾನೆ. ಕೊನೆಗೆ ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಪೋಷಕರು ಒಪ್ಪಿದ ಹುಡುಗಿ ಕೈ ಹಿಡಿಯುತ್ತಾನೆ. ಮುಂದೆ ನಾಯಕ ಬದಲಾಗುತ್ತಾ? ಇಲ್ವಾ? ಅನ್ನೋದೇ ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಕಥೆ.

ಮತ್ತೆ ಗೆದ್ದ ಶಶಾಂಕ್

ಸದಭಿರುಚಿಯ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ನಿರ್ದೇಶಕ ಶಶಾಂಕ್ ಸಿದ್ಧಹಸ್ತರು. ವಾಸ್ತವಕ್ಕೆ ಬಹಳ ಹತ್ತಿರದ ಕಥೆ ಅವರ ಸಿನಿಮಾಗಳಲ್ಲಿ ಇರುತ್ತದೆ. ನಿಜ ಜೀವನದಲ್ಲಿ ತಾವು ಕಂಡ ಸಂಗತಿಗಳನ್ನೇ ಸಿನಿಮಾ ರೂಪದಲ್ಲಿ ತೆರೆಗೆ ತಂದಿರುವುದು ಇದೆ. 'ಮುಂಗಾರು ಮಳೆ- 2' ಬಿಟ್ಟರೆ ಬಹುತೇಕ ಎಲ್ಲಾ ಸಿನಿಮಾಗಳು ಸಕ್ಸಸ್ ಕಂಡಿವೆ. ಆ ಸಾಲಿಗೆ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಕೂಡ ಸೇರಿಕೊಂಡಿದೆ.

More from Filmibeat

English summary
Shashank lashes out at Kousalya Supraja Rama Fake collection reports, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X