twitter
    For Quick Alerts
    ALLOW NOTIFICATIONS  
    For Daily Alerts

    ಚೊಚ್ಚಲ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ: ಮನೇದೇವ್ರು ಎಬಿಡಿ ಕೊಂಡಾಡಿದ ಸುನಿ

    |

    ಐಪಿಎಲ್ 14ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಎರಡು ವಿಕೆಟ್‌ಗಳ ಗೆಲವು ಸಾಧಿಸಿದೆ. ಮ್ಯಾಕ್ಸ್‌ವೆಲ್ ಮತ್ತು ಎಬಿಡಿಯ ಭರ್ಜರಿ ಆಟದ ನೆರವಿನಿಂದ ರೋಹಿತ್ ಪಡೆಯನ್ನು ಸೋಲಿಸುವಲ್ಲಿ ಯಶಸ್ಸು ಕಂಡಿದ್ದಾರೆ.

    ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಉದ್ಘಾಟನಾ ಪಂದ್ಯ ಆಡಿರುವ ಆರ್‌ಸಿಬಿ ಒಮ್ಮೆಯೂ ಗೆದ್ದಿಲ್ಲ. ಈಗ ನಾಲ್ಕನೇ ಬಾರಿ ಚೊಚ್ಚಲ ಪಂದ್ಯವನ್ನಾಡಿದ ಕೊಹ್ಲಿ ಪಡೆ ಮೊದಲ ಗೆಲುವನ್ನು ಸಂಭ್ರಮಿಸಿದೆ.

    ಐಪಿಎಲ್‌ ಶುರುವಾಗುತ್ತಿದ್ದಂತೆ ಮತ್ತೆ ವೈರಲ್ ಆಯ್ತು ದರ್ಶನ್ ಹಳೆ ವಿಡಿಯೋಐಪಿಎಲ್‌ ಶುರುವಾಗುತ್ತಿದ್ದಂತೆ ಮತ್ತೆ ವೈರಲ್ ಆಯ್ತು ದರ್ಶನ್ ಹಳೆ ವಿಡಿಯೋ

    ಆರ್‌ಸಿಬಿ ಗೆಲುವಿನ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಖುಷಿ ವ್ಯಕ್ತಪಡಿಸಿದ್ದಾರೆ. ''ಎಲ್ಲರೂ ಬಾಯಲ್ಲಿರುವ ಬೀಜವನ್ನು ಉಗಿಯಬೇಕಾಗಿ ವಿನಂತಿ. ಈ ಸಲ ...ಗೊತ್ತಲ್ಲ..ಹರ್ಷಲ್ ಪಟೇಲ್ ಮ್ಯಾಚ್ ವಿನ್ನರ್. ABD ಮಾಮುಲಿ ಮನೇದೇವ್ರು..ಮ್ಯಾಕ್ಸಿ...ಮ್ಯಾಕ್ಸಿಮಮ್ 100 ಮೀ ಸಿಕ್ಸ್. ಕೊಹ್ಲಿ ಕೆನ್ನೆ ಸರಿ ಮಾಡ್ಕೊ...'' ಎಂದು ಪಂದ್ಯದ ಅನುಭವ ಹಂಚಿಕೊಂಡಿದ್ದಾರೆ.

    Director Simple Suni and Sudeep Tweet About RCBs First Match Win

    ಕಿಚ್ಚ ಸುದೀಪ್ ಸಹ ಆರ್‌ಸಿಬಿ ಗೆಲುವಿನ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ''ವಾಹ್ ಆರ್‌ಸಿಬಿ,,,,ಅದ್ಭುತ ಆರಂಭ. ಎಂತಹ ಆರಂಭ ಇದು. ಆರ್‌ಸಿಬಿಯ ಎಲ್ಲಾ ಅಭಿಮಾನಿಗಳು ಖುಷಿಯಾಗಿದ್ದಾರೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    ನಿರ್ದೇಶಕ ಪವನ್ ಒಡೆಯರ್ ಸಹ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ''ಥ್ರಿಲ್ಲಿಂಗ್ ವಿನ್'' ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಮತ್ತೆ ಐಪಿಎಲ್ ಬಂತು, ಸಿಂಪಲ್ ಸುನಿ ಪ್ರಕಾರ ಆರ್‌ಸಿಬಿ ಪ್ಲೇಯಿಂಗ್ 11 ಹೀಗಿರಬೇಕುಮತ್ತೆ ಐಪಿಎಲ್ ಬಂತು, ಸಿಂಪಲ್ ಸುನಿ ಪ್ರಕಾರ ಆರ್‌ಸಿಬಿ ಪ್ಲೇಯಿಂಗ್ 11 ಹೀಗಿರಬೇಕು

    Recommended Video

    IPL ಪಂದ್ಯಗಳ ವಿಶ್ಲೇಷಣೆ ಜೊತೆಗೆ RCB ಗೆ ಸಪೋರ್ಟ್ ಮಾಡಲು ಬರ್ತಿದ್ದಾರೆ ಸುದೀಪ್ | Oneindia Kannada

    2021ನೇ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಆರ್‌ಸಿಬಿ ಈ ಸಲ ಕಪ್ ಗೆಲ್ಲುವ ತಂಡಗಳ ಪಟ್ಟಿಯಲ್ಲಿದೆ ಎಂದು ಚೊಚ್ಚಲ ಪಂದ್ಯದಲ್ಲೇ ಸಾಬೀತು ಪಡಿಸಿದೆ. ಮುಂದಿನ ಪಂದ್ಯಗಳಲ್ಲಿ ಹೇಗೆ ಆಡಲಿದೆ ಎಂದು ಕಾದು ನೋಡಬೇಕಿದೆ.

    English summary
    Kannada Director Simple Suni and Kiccha Sudeep tweet about RCB's First Match Win.
    Saturday, April 10, 2021, 11:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X