ಹುಟ್ಟುಹಬ್ಬದ ದಿನ 'ರಾಬಿನ್ ಹುಡ್' ಸಿನಿಮಾ ಅನೌನ್ಸ್ ಮಾಡಿದ ಸಿಂಪಲ್ ಸುನಿ
ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟಿರುವ ನಿರ್ದೇಶಕ ಸಿಂಪಲ್ ಸುನಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಜನ್ಮದಿನಕ್ಕೆ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹೌದು, ಸುನಿ ನಿರ್ದೇಶನದ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಚಿತ್ರಕ್ಕೆ 'ರಾಬಿನ್ ಹುಡ್' ಎಂದು ಟೈಟಲ್ ಇಡಲಾಗಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ. ಅಂದ್ಹಾಗೆ ಫಸ್ಟ್ ನಲ್ಲಿ ಇರುವ ನಟ ಯಾರು ಎನ್ನುವುದನ್ನು ಸಿನಿಮಾತಂಡ ರಿವೀಲ್ ಮಾಡಿಲ್ಲ. ನಾಯಕ ಯಾರು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಚಿತ್ರದ ಫೋಸ್ಟರ್ ಮತ್ತು ಟೈಟಲ್ ಶೇರ್ ಮಾಡಿ ನಿರ್ದೇಶಕ ಸುನಿ, ಮತ್ತೊಂದು ಕನಸಿನ ಕೂಸು ಅನಾವರಣಗೊಂಡಿದೆ ಎಂದಿದ್ದಾರೆ. 'ನನ್ನ 34ನೇ ಹುಟ್ಟುಹಬ್ಬದ ದಿನ. ಮತ್ತೊಂದು ಕನಸಿನ ಕೂಸು ಅನಾವರಣಗೊಂಡಿದೆ. ನಿಮ್ಮ ಆಶೀರ್ವಾದ ಹಾರೈಕೆಗಳು. ಸದಾ ನನ್ನ ಮೇಲಿರಲಿ. ಧನ್ಯವಾದಗಳು.' ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸುನಿ ಮತ್ತು ಪುಷ್ಕರ್ ಕಾಂಬಿನೇಷನ್ ನಲ್ಲಿ 'ಅವತಾರ್ ಪುರುಷ' ಸಿನಿಮಾ ಮೂಡಿ ಬರುತ್ತಿದೆ. ಈಗ ಮತ್ತದೆ ಕಾಂಬಿನೇಷನ್ ರಾಬಿನ್ ಹುಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. ಇತ್ತೀಚಿಗಷ್ಟೆ ಸುನಿ ನಟ ಚೇತನ್ ಜೊತೆ ಸಿನಿಮಾ ಮಾಡುವುದಾಗಿ ಬಹಿರಂಗಪಡಿಸಿದ್ದರು. ಅಲ್ಲದೆ ಸುನಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸಖತ್' ಸಿನಿಮಾ ನಿರ್ದೇಶನ ಮಾಡಬೇಕಿದೆ.
ಸದ್ಯ ಸುನಿ ಅವತಾರ್ ಪುರುಷ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶರಣ್ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಬಳಿಕ ಸಿನಿಮಾ ಚಿತ್ರೀಕರಣ ಪ್ರಾರಂಭಮಾಡಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಹೊಸ ಸಿನಿಮಾ ರಾಬಿನ್ ಹುಡ್ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.


Click it and Unblock the Notifications











