ಐಪಿಎಲ್‌ನಲ್ಲಿ RCB ಧಗಧಗ ; ಹಳೆ ಬೇರು ಹೊಸ ಚಿಗುರು, ಹೊಸ ಸಿಎಂ ಡಿಕೆ ಶಿವಕುಮಾರ್ ಬಳಿ ವಿಶೇಷ ಮನವಿ ಮಾಡಿಕೊಂಡ ಸಿಂಪಲ್ ಸುನಿ
''ರಾಯಲ್ ಚಾಲೆಂಜರ್ಸ್ ಬೆಂಗಳೂರು'' ತಂಡ ಕನ್ನಡಿಗರ ಪಾಲಿಗೆ ಕೇವಲ ತಂಡ ಮಾತ್ರವಲ್ಲ. ಈ ತಂಡದ ಜೊತೆ ಕನ್ನಡಿಗರಿಗೆ ಭಾವನಾತ್ಮಕವಾದ ಸಂಬಂಧ ಇದೆ. ಇದು ನಮ್ಮ ನಾಡಿನ ತಂಡ .. ನಮ್ಮೂರಿನ ತಂಡ .. ನಮ್ಮದೇ ತಂಡ ಎಂಬ ಭಾವನೆ ಜನರಲ್ಲಿ ಗಾಢವಾಗಿ ಬೇರೂರಿದೆ. ಸೋಲಲಿ .. ಗೆಲ್ಲಲಿ .. ''ರಾಯಲ್ ಚಾಲೆಂಜರ್ಸ್ ಬೆಂಗಳೂರು'' ತಂಡದ ಮೇಲಿನ ಅಭಿಮಾನ ಕನ್ನಡಿಗರಲ್ಲಿ ಯಾವತ್ತು ಕಡಿಮೆಯಾಗಲಿಲ್ಲ.
ಬದಲಿಗೆ ಈ ಸೋಲುಗಳಿಂದ ತಂಡದ ಜೊತೆಗಿನ ಬಾಂಧವ್ಯ ಇನ್ನೂ ಗಟ್ಟಿಯಾಯ್ತು. ಜನರಿಗೆ ತಮ್ಮ ಮೇಲಿರುವ ಅಭಿಮಾನ ಕಂಡು ಹೇಗಾದರೂ ಮಾಡಿ ಕಪ್ ಗೆಲ್ಲಲೇಬೇಕೆಂಬ ಕಿಚ್ಚು ನಮ್ಮ ''ಆರ್‌ಸಿಬಿ'' ತಂಡದ ಆಟಗಾರರಲ್ಲಿ ಹೆಚ್ಚಾಯ್ತು. ಇನ್ನು ಈ 18 ವರ್ಷಗಳಲ್ಲಿ 'ಈ ಸಲ ಕಪ್ ನಮ್ದೇ' ಎಂಬ ಕನ್ನಡಿಗರ ಘೋಷವಾಕ್ಯ ಕೇಳಿ ಕುಹುಕವಾಡಿದವರು ಅದೆಷ್ಟೋ.

ಹೀಗೆ ಆಡಿಕೊಂಡ ನಕ್ಕವರ, ಕಾಲೆಳೆದವರ, ವ್ಯಂಗ್ಯವಾಡಿದವರ ಬಾಯಿಗಳಿಗೆಲ್ಲ ಕಳೆದ ವರ್ಷ ''ಆರ್‌ಸಿಬಿ'' ತಂಡ ಕಪ್ ಮುಡಿಗೇರಿಸಿಕೊಳ್ಳುವ ಮೂಲಕ ಬೀಗ ಜಡಿದಿತ್ತು. 18 ವರ್ಷಗಳ ನಂತರ ಐಪಿಎಲ್‌ನಲ್ಲಿ ಹೊಸ ಚರಿತ್ರೆಯನ್ನು ಬರೆಯಿತು.
ಆದರೆ, ಇಲ್ಲಿಯೂ ಕೆಲವರು ಈ ಚರಿತ್ರೆಯನ್ನು ಅನುಮಾನದ ದೃಷ್ಟಿಯಿಂದ ನೋಡಿದರು. ಫ್ಲೂಕ್‌ನಲ್ಲಿ ಸಿಕ್ಕ ಗೆಲುವು ಎಂದು ವ್ಯಂಗ್ಯವಾಡಿದರು. ಈ ಅತೃಪ್ತ ಆತ್ಮಗಳ ಬಾಯಿಗೆ ನಿನ್ನೆ (ಮೇ 31) ನಮ್ಮ ''ಆರ್‌ಸಿಬಿ'' ತಂಡ ಮತ್ತೊಮ್ಮೆ ಬೀಗ ಜಡಿದಿದೆ. ಸತತ ಎರಡನೇ ಬಾರಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ. ''ಈ ಸಲ ಕಪ್ ನಮ್ದೇ ಅಲ್ಲ'', ''ಪ್ರತಿ ಸಲ ಕಪ್ ನಮ್ದೇ'' ಎಂಬ ಘೋಷವಾಕ್ಯ ಎಲ್ಲೆಡೆ ಈಗ ಮೊಳಗುತ್ತಿದೆ.
ಹೀಗಿರುವಾಗ ಕನ್ನಡದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಸುಮ್ಮನೆ ಇರಲು ಹೇಗೆ ಸಾಧ್ಯ..? ಹೇಳಿ ಕೇಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಡೈ ಹಾರ್ಡ್ ಫ್ಯಾನ್ ಬೇರೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪ ನೀಡಿರುವ ಸುನಿ ''ಆರ್‌ಸಿಬಿ''ಯ ಗೆಲುವನ್ನು ಸಂಭ್ರಮಿಸಿದ್ದಾರೆ. ಹಾಗಿದ್ದರೆ ಸುನಿಯ ಅಂತರಂಗದ ನುಡಿಗಳನ್ನು ಓದಲು ಮುಂದೆ ಸ್ಕ್ರಾಲ್ ಮಾಡಿ
ಸಿಂಪಲ್ ಸುನಿ ಬರಹ
upto 2025:: ಈ ಸಲ ಕಪ್ ನಮ್ದೇ, 2026:: ಈ ಸಲನೂ ಕಪ್ ನಮ್ದೇ 2027: 3 option- ಈ ಸಲ ಕೂಡ ಕಪ್ ನಮ್ದೇ, ಈ ಸಲ ಹ್ಯಾಟ್ರಿಕ್ ನಮ್ದೇ, ಪ್ರತಿ ಸಲ ಕಪ್ ನಮ್ದೇ, ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್.

18 ವರುಷ ಶಬರಿ ತರ ತಾಳ್ಮೆಯಿಂದ ಕಾದಿದ್ದೇವೆ 18-05-2024 ನಲ್ಲಿ 1% chance ನಿಂದ csk ನ ಹೊರಹಾಕಿ playoffs ಗೆ ಹೋದಾಗ ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಣ್ಣಮ್ಮ ಜಾತ್ರೆ ಮಾಡಿದ್ದೋ.
2025 18ನೇ ವರುಷ 03/06/2025 ಬೆಂಗಳೂರಿನ ಭಗವಂತ ವಿರಾಟ್ ಗೆ ಅರ್ಪಣೆ ಅನ್ನುವಂತೆ ಕಪ್ ಗೆದ್ದಾಗ ಅಂದೇ ದೀಪಾವಳಿ ಆಚರಿಸಿದ್ದೋ, ರಜತ್ ಈ ಸಲ ಕಪ್ ನಮ್ದೇ ಇಂದ ..ನಮ್ದು ಅಂದರು
ಆದರೆ ತದನಂತರ ನಡೆದದ್ದೂ ನೆನೆಯಬಾರದ ಘಟನೆಗಳು.
2026 DEFENDING CHAMPIONS ಶುರು ಮಾಡಿದ್ದೇ ATTACKING CHAMPIONS ತರ. ಕೊಹ್ಲಿ ..ಪಡಿಕ್ಕಳ್ ..ಪಟಿದಾರ್.. Better strike rateನಲ್ಲಿ ಅಪ್ಪಳಿಸಿದರು. ಭುವಿ ..ಬೆಂಕಿ ಎಸೆತ
ಭಾರತ ತಂಡದಲ್ಲಿ ಇವರಿಲ್ಲದಿರುವುದು ಹಾಗು ಪರ್ಪಲ್ ಕ್ಯಾಪ್ ಮಿಸ್ ಆಗಿದ್ದು ಬೇಸರದ ವಿಷಯ.
ಯಶದಯಾಳ್ perfect replacement ರಸಿಕ್. ಜೋಷ್ The boss ಬೇರೆ ಲೆವೆಲ್ ಬೌಲಿಂಗ್. Krunal better allrounder than his brother in this season. ಹೊಸ ಆಪತ್ಭಾಂದವ ಬೇಕೆಂದಾಗ batsmen ,spinner & bouncer.
Jitesh superb keeping. ಆದರೆ ಬ್ಯಾಟಿಂಗ್ ವಿಫಲ. ಸುಯೆಶ್ ಬದಲಾಯಿಸಬೇಕು. ಅತಿ ಸುಲಭದ ಕ್ಯಾಚ್ ಬಿಟ್ಟಿದ್ದು ಇವರೇ. ರೋಮಾರಿಯೋ ಮನುಷ್ಯ ಇಷ್ಟ ಆಗ್ತಾನೆ. ಆಟ ಇಷ್ಟ ಆಗ್ತಿಲ್ಲ.
ವೆಂಕಿ ..ಬೆಂಕಿ ಇಂಪ್ಯಾಕ್ಟ್. ಸಾಲ್ಟ್ ..ಬೆಥೆಲ್ ಇಂಗ್ಲಿಷ್ ಸ್ಟೈಲ್ ಬ್ಯಾಟಿಂಗ್ ಫೀಲ್ಡಿಂಗ್.
ಈ ವರುಷ ಹೊಸ ಸಿಎಂ ಡಿಕೆ ಶಿವಕುಮಾರ್ ಅವರು ಪಕ್ಕಾ ಪ್ಲಾನ್ ಮಾಡಿ ದೊಡ್ಡ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಆ ಹನ್ನೊಂದು ಜೀವಗಳನ್ನು ನೆನೆಯುತ್ತಾ ಹಳೇ ''ಆರ್ ಸಿಬಿ'' ಸಿಂಹಗಳನ್ನೂ ( ಎಬಿ ಡಿವಿಲಿಯರ್ಸ್, ,ಕ್ರೀಸ್ ಗೇಲ್ ,ಕಾಲಿಸ್, ರೋಸ್ ಟೇಲರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಡೇಲ್ ಸ್ಟೇನ್, ದಿನೇಶ್ ಕಾರ್ತಿಕ್, ಕೋಚ್ ಆಂಡಿ ಫ್ಲವರ್, supporting staff ಮುಂತಾದವರನ್ನು ಗೌರವಿಸುತ್ತ
ನಮ್ಮ ಲೇಡಿ ಲಕ್ #ಮಹಿಳಾ ಆರ್ ಸಿ ಬಿ ತಂಡದ ಸ್ಮತಿ ಮಂಧಾನ ಹಾಗು ತಂಡವನ್ನು ಮೆರೆಸುತ್ತಾ ಸೆಲೆಬ್ರೇಟ್ ಮಾಡಬೇಕಾಗಿ ವಿನಂತಿ.


Click it and Unblock the Notifications