ಐಪಿಎಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಸಿಂಪಲ್ ಸುನಿ

ಐಪಿಎಲ್ 2020 ಆರಂಭವಾಗಿ ಎರಡನೇ ವಾರ ಯಶಸ್ವಿಯಾಗಿ ಸಾಗುತ್ತಿದೆ. ಈ ವರ್ಷ ಆರ್‌ಸಿಬಿ ತಂಡವೂ ಆರಂಭಿಕ ಹಂತದಲ್ಲಿ ಉತ್ತಮ ಲಯದಲ್ಲಿದೆ. ಬೆಂಗಳೂರು ಫ್ಯಾನ್ಸ್ ಸಹ ಅಷ್ಟೇ ಖುಷಿಯಲ್ಲಿದ್ದಾರೆ.

ಐಪಿಎಲ್ ಪಂದ್ಯಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿರುವ ವೀಕ್ಷಕರ ಪೈಕಿ ಕನ್ನಡ ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ ಸಹ ಒಬ್ಬರು. ಆರ್‌ಸಿಬಿ ಅಪ್ಪಟ ಅಭಿಮಾನಿ ಸುನಿಗೆ ಐಪಿಎಲ್ ಮೇಲೆ ಬೇಸರವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಸುನಿಗೆ ಅಭಿಪ್ರಾಯ ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ಸಹ ಬೆಂಬಲ ಸೂಚಿಸಿದ್ದಾರೆ. ಮುಂದೆ ಓದಿ...

ಏನದು ಬೇಸರದ ಸಂಗತಿ

ಏನದು ಬೇಸರದ ಸಂಗತಿ

''ಐ.ಪಿ.ಎಲ್ ನಲ್ಲಿ ತುಂಬಾ ಬೇಸರದ ವಿಷಯ ಅಂದ್ರೆ..ಅಜಿಂಕ್ಯ ರಹಾನೆ ಹಾಗೂ ಕ್ರಿಸ್ ಗೇಲ್ ರನ್ನು ಟೀಮ್ ಆಡುತ್ತಿದ್ದಾಗ ಡಗ್ ಔಟ್ ನಲ್ಲಿ ನೋಡುವುದು..'' ಎಂದು ಸುನಿ ಟ್ವೀಟ್ ಮಾಡಿದ್ದಾರೆ.

ಪಂಜಾಬ್ ತಂಡದಲ್ಲಿ ಗೇಲ್

ಪಂಜಾಬ್ ತಂಡದಲ್ಲಿ ಗೇಲ್

ಕನ್ನಡಿಗರ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್ ಆಡುತ್ತಿದ್ದಾರೆ. ಆದ್ರೆ, ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೇಲ್ ಕಣಕ್ಕಿಳಿದಿಲ್ಲ. ಇದು ಸಹಜವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಡೆಲ್ಲಿ ತಂಡದಲ್ಲಿ ರಹಾನೆ

ಡೆಲ್ಲಿ ತಂಡದಲ್ಲಿ ರಹಾನೆ

ಭಾರತ ತಂಡದ ಮತ್ತೊಬ್ಬ ಕ್ಲಾಸ್ ಆಟಗಾರ ಅಜಿಂಕ್ಯ ರಹಾನೆ. ಟೀಂ ಇಂಡಿಯಾದ ಖಾಯಂ ಆಟಗಾರನಿಗೆ ಡೆಲ್ಲಿ ಕ್ಯಾಪಿಟೆಲ್ಸ್ ತಂಡ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದೆ ಇರುವುದು ಅಚ್ಚರಿ ಹಾಗೂ ಬೇಸರ ತರಿಸಿದೆ.

Recommended Video

ಇವರೇನಾ ಗಟ್ಟಿಮೇಳದ ಆದ್ಯ! | Gattimela | Adya | Filmibeat Kannada
ಅವಕಾಶ ಕೊಡಿ ಎಂಬ ಕೂಗು

ಅವಕಾಶ ಕೊಡಿ ಎಂಬ ಕೂಗು

ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಕ್ರಿಸ್ ಗೇಲ್ ಹಾಗೂ ಅಂಜಿಕ್ಯ ರಹಾನೆ ಅವರನ್ನು ಮುಂದಿನ ಪಂದ್ಯಗಳಲ್ಲಾದರೂ ಆಡಿಸಲಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಮುಂದಿನ ಪಂದ್ಯಗಳಲ್ಲಾದರೂ ಈ ಇಬ್ಬರು ಆಟಗಾರರಿಗೆ ಅವಕಾಶ ಸಿಗುತ್ತಾ? ಕಾದು ನೋಡಬೇಕಿದೆ.

More from Filmibeat

English summary
It was Sad to see a players like Ajinkya Rahane & chris gayle sitting at Dug out while playing their team said director suni.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X