twitter
    For Quick Alerts
    ALLOW NOTIFICATIONS  
    For Daily Alerts

    ಐಪಿಎಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಸಿಂಪಲ್ ಸುನಿ

    |

    ಐಪಿಎಲ್ 2020 ಆರಂಭವಾಗಿ ಎರಡನೇ ವಾರ ಯಶಸ್ವಿಯಾಗಿ ಸಾಗುತ್ತಿದೆ. ಈ ವರ್ಷ ಆರ್‌ಸಿಬಿ ತಂಡವೂ ಆರಂಭಿಕ ಹಂತದಲ್ಲಿ ಉತ್ತಮ ಲಯದಲ್ಲಿದೆ. ಬೆಂಗಳೂರು ಫ್ಯಾನ್ಸ್ ಸಹ ಅಷ್ಟೇ ಖುಷಿಯಲ್ಲಿದ್ದಾರೆ.

    ಐಪಿಎಲ್ ಪಂದ್ಯಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿರುವ ವೀಕ್ಷಕರ ಪೈಕಿ ಕನ್ನಡ ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ ಸಹ ಒಬ್ಬರು. ಆರ್‌ಸಿಬಿ ಅಪ್ಪಟ ಅಭಿಮಾನಿ ಸುನಿಗೆ ಐಪಿಎಲ್ ಮೇಲೆ ಬೇಸರವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಸುನಿಗೆ ಅಭಿಪ್ರಾಯ ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ಸಹ ಬೆಂಬಲ ಸೂಚಿಸಿದ್ದಾರೆ. ಮುಂದೆ ಓದಿ...

    ಏನದು ಬೇಸರದ ಸಂಗತಿ

    ಏನದು ಬೇಸರದ ಸಂಗತಿ

    ''ಐ.ಪಿ.ಎಲ್ ನಲ್ಲಿ ತುಂಬಾ ಬೇಸರದ ವಿಷಯ ಅಂದ್ರೆ..ಅಜಿಂಕ್ಯ ರಹಾನೆ ಹಾಗೂ ಕ್ರಿಸ್ ಗೇಲ್ ರನ್ನು ಟೀಮ್ ಆಡುತ್ತಿದ್ದಾಗ ಡಗ್ ಔಟ್ ನಲ್ಲಿ ನೋಡುವುದು..'' ಎಂದು ಸುನಿ ಟ್ವೀಟ್ ಮಾಡಿದ್ದಾರೆ.

    ಆರ್‌ಸಿಬಿ ತಂಡದ ಶಿವಮ್ ದುಬೆ ಕಾಲೆಳೆದ ಗಾಯಕ ರಾಜೇಶ್ ಕೃಷ್ಣನ್ಆರ್‌ಸಿಬಿ ತಂಡದ ಶಿವಮ್ ದುಬೆ ಕಾಲೆಳೆದ ಗಾಯಕ ರಾಜೇಶ್ ಕೃಷ್ಣನ್

    ಪಂಜಾಬ್ ತಂಡದಲ್ಲಿ ಗೇಲ್

    ಪಂಜಾಬ್ ತಂಡದಲ್ಲಿ ಗೇಲ್

    ಕನ್ನಡಿಗರ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್ ಆಡುತ್ತಿದ್ದಾರೆ. ಆದ್ರೆ, ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೇಲ್ ಕಣಕ್ಕಿಳಿದಿಲ್ಲ. ಇದು ಸಹಜವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ಡೆಲ್ಲಿ ತಂಡದಲ್ಲಿ ರಹಾನೆ

    ಡೆಲ್ಲಿ ತಂಡದಲ್ಲಿ ರಹಾನೆ

    ಭಾರತ ತಂಡದ ಮತ್ತೊಬ್ಬ ಕ್ಲಾಸ್ ಆಟಗಾರ ಅಜಿಂಕ್ಯ ರಹಾನೆ. ಟೀಂ ಇಂಡಿಯಾದ ಖಾಯಂ ಆಟಗಾರನಿಗೆ ಡೆಲ್ಲಿ ಕ್ಯಾಪಿಟೆಲ್ಸ್ ತಂಡ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದೆ ಇರುವುದು ಅಚ್ಚರಿ ಹಾಗೂ ಬೇಸರ ತರಿಸಿದೆ.

    ಸೂಪರ್‌ ಓವರ್‌ನಲ್ಲಿ ಗೆದ್ದ ಆರ್‌ಸಿಬಿ, ರೋಚಕ ಗೆಲುವಿನ ಬಗ್ಗೆ ಸುದೀಪ್ ಟ್ವೀಟ್ಸೂಪರ್‌ ಓವರ್‌ನಲ್ಲಿ ಗೆದ್ದ ಆರ್‌ಸಿಬಿ, ರೋಚಕ ಗೆಲುವಿನ ಬಗ್ಗೆ ಸುದೀಪ್ ಟ್ವೀಟ್

    Recommended Video

    ಇವರೇನಾ ಗಟ್ಟಿಮೇಳದ ಆದ್ಯ! | Gattimela | Adya | Filmibeat Kannada
    ಅವಕಾಶ ಕೊಡಿ ಎಂಬ ಕೂಗು

    ಅವಕಾಶ ಕೊಡಿ ಎಂಬ ಕೂಗು

    ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಕ್ರಿಸ್ ಗೇಲ್ ಹಾಗೂ ಅಂಜಿಕ್ಯ ರಹಾನೆ ಅವರನ್ನು ಮುಂದಿನ ಪಂದ್ಯಗಳಲ್ಲಾದರೂ ಆಡಿಸಲಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಮುಂದಿನ ಪಂದ್ಯಗಳಲ್ಲಾದರೂ ಈ ಇಬ್ಬರು ಆಟಗಾರರಿಗೆ ಅವಕಾಶ ಸಿಗುತ್ತಾ? ಕಾದು ನೋಡಬೇಕಿದೆ.

    English summary
    It was Sad to see a players like Ajinkya Rahane & chris gayle sitting at Dug out while playing their team said director suni.
    Saturday, October 3, 2020, 8:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X