'ಸಂಸಾರ ಸುಲಭವಲ್ಲ...' ಏನಿದು ಸುನಿ ಕಥೆ: ಮನೆ ಮನೆಯಲ್ಲೂ ಇದೇ ಕಹಾನಿ
ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಸಿನಿಮಾ ವಿಚಾರವನ್ನು ಬಿಟ್ಟು ಕೆಲವು ಆಸಕ್ತಿಕರ ವಿಷಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಈ ಸಲವೂ ಒಂದು ವಿಶೇಷವಾದ ಟ್ವೀಟ್ ಶೇರ್ ಮಾಡಿದ್ದಾರೆ.
Recommended Video
ತಮ್ಮ ಪತ್ನಿ ಸೌಂದರ್ಯ ಜೊತೆಗಿನ ವಾಟ್ಸಾಪ್ ಚಾಟ್‌ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಅದರಲ್ಲಿ ವಿಷಯ ಬಹಳ ಕೌಟುಂಬಿಕ ಪ್ರೇಕ್ಷಕರಿಗೆ ಒಳ್ಳೆಯ ಚರ್ಚೆಯ ವಿಷಯವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸಖತ್' ಎಂಬ ಸಿನಿಮಾ ಮಾಡುತ್ತಿರುವ ಸುನಿ, ಈಗ ಟ್ವೀಟ್ ವಿಚಾರಕ್ಕೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಏನದು? ಮುಂದೆ ಓದಿ....

ಹೊಟ್ಟೆ ಹಸಿವು, ಏನಾದರೂ ತನ್ನಿ
ಸುನಿ ಅವರಿಗೆ ವಾಟ್ಸಪ್ ಸಂದೇಶ ಕಳುಹಿಸಿರುವ ಪತ್ನಿ ಸೌಂದರ್ಯ, 'ಹೊಟ್ಟೆ ಹಸಿವು, ತಿನ್ನಲು ಏನಾದರೂ ತನ್ನಿ' ಎಂದು ಕೇಳಿದ್ದಾರೆ. ಅದಕ್ಕೆ 'ದಯವಿಟ್ಟು ನಿಖರವಾಗಿ ಹೇಳು ಏನು ತರಲಿ' ಎಂದು ಕೇಳಿದ್ದಾರೆ. 'ಆಮೇಲೆ ತಂದಿದ್ದು ಇಷ್ಟ ಆಗಿಲ್ಲ ಅಂದ್ರೆ?' ಎಂಬ ಪ್ರಶ್ನೆಯನ್ನು ಹಾಕಿದ್ದಾರೆ.

ಏನಾದರೂ ಓಕೆ....
'ನೀನು ಕಣ್ಣು ಮುಚ್ಚು, ನಿನ್ನ ಕಣ್ಣಾ ಮುಂದೆ ಏನು ಬರುತ್ತೋ ಅದನ್ನು ಹೇಳು' ಎಂದು ಸುನಿ ಮತ್ತೊಮ್ಮೆ ಮೆಸೆಜ್ ಹಾಕಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸೌಂದರ್ಯ, ''ಹೇ ಸುಮ್ಮನೆ ತಗೊಂಡು ಬಾ ಸುನಿ, ನನಗೆ ಹೊಟ್ಟೆ ಹಸಿತಿದೆ, ಏನಾದರೂ ಓಕೆ'' ಎಂದರು. ಇದಕ್ಕೆ ಫಟ್ ಅಂತ' ಬಿರಿಯಾನಿ ತರ್ಲಾ?' ಎಂದಿದ್ದಕ್ಕೆ ಅವರ ಪತ್ನಿ 'ಬೇಡ' ಎಂದುಬಿಟ್ಟರು. 'ನೀನೇ ಹೇಳಿದೆ ಏನಾದರೂ ಓಕೆ ಅಂತ' ಎಂದು ಸುನಿ ಮತ್ತೊಮ್ಮೆ ಪ್ರಶ್ನಿಸಿದ್ದಾರೆ.

ಎಲ್ಲರ ಮನೆಯ ಕಹಾನಿ ಇದು
ಸುನಿ ಮತ್ತು ಪತ್ನಿ ಸೌಂದರ್ಯ ಅವರ ವಾಟ್ಸಾಪ್ ಚಾಟ್ ಕುರಿತು ನಿರ್ದೇಶಕ ಪವನ್ ಒಡೆಯರ್ ಪತ್ನಿ ಆಪೇಕ್ಷಾ ಪುರೋಹಿತ್ ಪ್ರತಿಕ್ರಿಯೆ ನೀಡಿದ್ದು ''ಮನೆ ಮನೆಯಲ್ಲೂ ನಡೆಯುವ ಕಹಾನಿ ಇದು'' ಎಂದು ಹೇಳಿದ್ದಾರೆ.

ಸಂಯುಕ್ತಾ ಹೆಗ್ಡೆ ರಿಯಾಕ್ಟ್
ಸುನಿ ಅವರ ಈ ಟ್ವೀಟ್ ಗೆ ನಟಿ ಸಂಯುಕ್ತಾ ಹೆಗ್ಡೆ ಸಹ ಪ್ರತಿಕ್ರಿಯೆ ನೀಡಿದ್ದು ''ಹಹಹ....'' ಎಂದಿದ್ದಾರೆ. ಇನ್ನು ನೆಟ್ಟಿಗರು ಈ ಕುರಿತು ಚರ್ಚೆ ಮಾಡ್ತಿದ್ದು, ''ನಮ್ಮ ಮನೆಯಲ್ಲೂ ಹೀಗೆ ಆಗುತ್ತೆ, ನಮ್ಮ ಪತ್ನಿನೂ ಹೀಗೆ ಮಾಡ್ತಾಳೆ, ನಮ್ಮ ಸಂಸಾರವೂ ಸುಲಭವಲ್ಲ'' ಅಂತೆಲ್ಲಾ ಹೇಳುತ್ತಿದ್ದಾರೆ.


Click it and Unblock the Notifications











