'RCB ಪ್ಲೀಸ್ ಅವರಿಗೋಸ್ಕರ ಕಪ್ ಗೆದ್ ಕೊಡ್ರೋ': ಸುನಿ ಹೇಳಿದ್ದು ಯಾರಿಗಾಗಿ?
ಐಪಿಎಲ್ 2020 ಟೂರ್ನಿ ಬಹುತೇಕ ಅಂತಿಮ ಭಾಗಕ್ಕೆ ಬಂದು ನಿಂತಿದೆ. ಸದ್ಯ ಫ್ಲೇ ಆಫ್ ಲೆಕ್ಕಾಚಾರ ನಡೆಯುತ್ತಿದೆ. ಆರ್‌ಸಿಬಿ ಪಾಲಿಗೆ ಇಂದಿನ ಪಂದ್ಯ ಬಹಳ ಮುಖ್ಯ. ಗೆದ್ದರೇ ಫ್ಲೇ ಆಫ್ ಖಚಿತ, ಸೋತರೆ ಬೇರೆ ಪಂದ್ಯದ ಫಲಿತಾಂಶದಲ್ಲಿ ಕಾದುನೋಡಬೇಕಾದ ಪರಿಸ್ಥಿತಿ.
ಡೆಲ್ಲಿ ವಿರುದ್ಧ ನಡೆಯಲಿರುವ ಇಂದಿನ ಪಂದ್ಯವನ್ನು ಗೆದ್ದು ಫ್ಲೇ ಆಫ್ ಟಿಕೆಟ್ ಪಕ್ಕಾ ಮಾಡಿಕೊಳ್ಳಲಿ ಎಂದು ಆರ್‌ಸಿಬಿ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನಿರ್ದೇಶಕ ಹಾಗೂ ಕ್ರಿಕೆಟ್ ಪ್ರೇಮಿ ಸಿಂಪಲ್ ಸುನಿ ಅವರು ''ಪ್ಲೀಸ್ ಅವರಿಗೋಸ್ಕರ ಕಪ್ ಗೆದ್ ಕೊಡ್ರೋ'' ಎಂದು ಮನವಿ ಮಾಡ್ತಿದ್ದಾರೆ. ಅಷ್ಟಕ್ಕೂ, ಸುನಿ ಹೇಳಿದ್ದು ಯಾರಿಗಾಗಿ? ಮುಂದೆ ಓದಿ...

ಲೆಕ್ಕಚಾರ ಹೀಗಿತ್ತು....
''ಈ ದಿನದ ಪಂದ್ಯ ಬೆಂಗಳೂರಲ್ಲಿ ಆಡಿಸಿ ಸ್ಕೋರು ಉಲ್ಟಾ ಹೊಡೆದಿದ್ದರೇ ಪಕ್ಕಾ ಮಳೆ ಬಂದು ಇಬ್ಬರಿಗೂ ಒಂದೊಂದ್ ಪಾಯಿಂಟ್ ಸಿಕ್ಕಿರೋದು, ಇಬ್ಬರೂ ಫ್ಲೇ ಆಫ್‌ಗೆ ಹೋಗಬಹುದಿತ್ತು. ಅಬುಧಾಬಿ: No way ಚಾನ್ಸೇ ಇಲ್ಲಾ'' ಎಂದು ಸುನಿ ಲೆಕ್ಕಾಚಾರದ ಬಗ್ಗೆ ಮಾತನಾಡಿದ್ದಾರೆ.

ಇವತ್ತು ಗೆದ್ರೆ ಸೇಫ್, ಸೋತ್ರೆ?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಇಂದಿನ ಪಂದ್ಯವನ್ನು ಆರ್‌ಸಿಬಿ ಗೆದ್ದರೆ ಮುಂಬೈ ಇಂಡಿಯನ್ಸ್ ಜೊತೆ ಫ್ಲೇ ಆಫ್ ಟಿಕೆಟ್ ಪಡೆದುಕೊಳ್ಳಲಿದ್ದಾರೆ. ಒಂದು ವೇಳೆ ಪಂದ್ಯ ಸೋತರೆ ಸನ್‌ರೈಸ್ ಹೈದರಾಬಾದ್ ಮುಂದಿನ ಪಂದ್ಯ ಸೋಲಬೇಕು ಎಂದು ಕಾಯಬೇಕಿದೆ.


Click it and Unblock the Notifications











