ದರ್ಶನ್ ಮುಂದಿನ ಚಿತ್ರಕ್ಕೆ ಸುನಿ ಆಕ್ಷನ್ ಕಟ್ ? ಮೌನ ಮುರಿದ ಸಿಂಪಲ್ ಡೈರೆಕ್ಟರ್ ಹೇಳಿದ್ದಿಷ್ಟು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕಾಟೇರ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. D56 ಟೈಟಲ್‌ನಲ್ಲಿ ಶುರುವಾಗಿದ್ದ ಈ ಚಿತ್ರಕ್ಕೆ ಈಗ 'ಕಾಟೇರ' ಟೈಟಲ್ ಫೈನಲ್ ಆಗಿದೆ. ಈ ಸಿನಿಮಾ ಮುಗಿಯೋಕು ಮೊದ್ಲೆ ದರ್ಶನ್ ಮತ್ತೊಂದು ಚಿತ್ರಕ್ಕೆ ಸೈ ಎಂದಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಮುಂದಿನ ಸಿನಿಮಾಗಳ ನಿರ್ಮಾಪಕರು ಯಾರು ಎನ್ನುವ ಬಗ್ಗೆ ಸುಳಿವು ಸಿಕ್ಕಿದೆ. ಒಂದು ತೆಲುಗು ಬ್ಯಾನರ್ ಸಿನಿಮಾ ಸೇರಿದಂತೆ ಆಪ್ತ ಸಚ್ಚಿದಾನಂದ ಕೂಡ ದರ್ಶನ್ ಮುಂದಿನ ಚಿತ್ರಕ್ಕೆ ಬಂಡವಾಳ ಹೂಡುವುದು ಪಕ್ಕಾ ಆಗಿದೆ. ನಿರ್ಮಾಪಕ ಸೂರಪ್ಪ ಬಾಬು ಜೊತೆಗೂ ಸಿನಿಮಾ ಮಾಡಲು ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ದರ್ಶನ್ ನಟನೆಯ ಮತ್ತೊಂದು ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ.

ನಿರ್ದೇಶಕ ಸಿಂಪಲ್ ಸುನಿ ಕೂಡ ದರ್ಶನ್ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಈಗಾಗಲೇ ಫೋಟೊಶೂಟ್ ಕೂಡ ಮಾಡಲಾಗಿದೆ. ದರ್ಶನ್ 'ವಿಶ್ವ ಅರಣ್ಯ ದಿನ' ಕಾಡು ಬೆಳಸಿ ನಾಡು ಉಳಿಸಿ ಎನ್ನುವ ಸಂದೇಶ ನೀಡಿದ್ದರು. ಈ ವೇಳೆ ಕ್ಯಾಮರಾ ಹಿಡಿದು ಕಾಣಿಸಿಕೊಂಡಿದ್ದ ಫೋಟೊವನ್ನು ಶೇರ್ ಮಾಡಿದ್ದರು. ಅದು ಸುನಿ ನಿರ್ದೇಶನದ ಚಿತ್ರಕ್ಕಾಗಿ ಮಾಡಿಸಿರುವ ಫೋಟೊಶೂಟ್ ಎಂದು ಎಂದು ಹೇಳಿದ್ದ ಪೋಸ್ಟ್ ವೈರಲ್ ಆಗಿತ್ತು. ಇದೀಗ ಸ್ವತಃ ಸುನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದೆಲ್ಲ ಸುಳ್ಳು ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಸಿಂಪಲ್ ಸುನಿ "ಎಲ್ಲ" ಎಂದು ಹೇಳಿ ಎಲ್ಲದಕ್ಕೂ ಫುಲ್‌ಸ್ಟಾಪ್ ಇಟ್ಟಿದ್ದಾರೆ. ದರ್ಶನ್ ಒಂದು ಸಿನಿಮಾ ಮುಗಿಯುವ ಮುನ್ನ ಅಷ್ಟು ಸುಲಭವಾಗಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳಲ್ಲ. ಒಂದು ವೇಳೆ ಒಪ್ಪಿಕೊಂಡರೂ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸದ್ಯ ರಿಲೀಸ್ ಆಗಬೇಕಿರುವ ಸಿನಿಮಾ ಕುರಿತು ಮಾತ್ರ ಚರ್ಚೆ ಮಾಡ್ತಾರೆ. ಆ ಸಿನಿಮಾ ಕಂಪ್ಲೀಟ್ ಆದಮೇಲೆ ಮುಂದಿನ ಸಿನಿಮಾ ವಿಚಾರ ಶುರು ಮಾಡುತ್ತಾರೆ. ಹಾಗಾಗಿ ಸದ್ಯಕ್ಕೆ ದರ್ಶನ್ 'ಕಾಟೇರ' ಸಿನಿಮಾ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದಾರೆ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸ್ತಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಚಿತ್ರದ ನಾಯಕಿ ಲುಕ್ ರಿವೀಲ್ ಆಗಿದೆ. ಚಿತ್ರದಲ್ಲಿ ಪ್ರಭಾವತಿ ಎನ್ನುವ ಹಳ್ಳಿ ಹುಡುಗಿಯ ಪಾತ್ರದಲ್ಲಿ ರಾಧನಾ ಮಿಂಚಿದ್ದಾರೆ. ಲಂಗಾ ದಾವಣಿ ತೊಟ್ಟು ಒಂದು ಕೈಯಲ್ಲಿ ಕುಡುಗೋಲು ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದು ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಭಾವತಿ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿದೆ. ನಿರ್ಮಾಪಕ ರಾಮು ಹಾಗೂ ನಟಿ ಮಾಲಾಶ್ರೀ ಪುತ್ರಿ ರಾಧನಾ ಅನ್ನೋದು ವಿಶೇಷ.
'ಕಾಟೇರ' ಚಿತ್ರದಲ್ಲಿ 70ರ ದಶಕದ ಕತೆಯನ್ನು ಹೇಳಲಾಗುತ್ತಿದೆ. ಸುಧಾಕರ್ ಎಸ್ ರಾಜ್ ಸಿನಿಮಾಟೋಗ್ರಫಿ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಈಗಾಗಲೇ ರಾಕ್‌ಲೈನ್ ಸ್ಟುಡಿಯೋ, ಹೈದರಾಬಾದ್, ಕನಕಪುರದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ವರ್ಷಾಂತ್ಯಕ್ಕೆ 'ಕಾಟೇರ'ನನ್ನು ಥಿಯೇಟರ್‌ಗೆ ಕರೆತರುವ ಪ್ರಯತ್ನ ನಡೀತಿದೆ. ಮತ್ತೊಂದು ಕಡೆ ನಿರ್ದೇಶಕ ಸುನಿ 'ಗತವೈಭವ' ಎನ್ನುವ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ದುಷ್ಯಂತ್ ಎನ್ನುವ ಹೊಸ ನಟನನ್ನು ಪರಿಚಯಿಸುತ್ತಿದ್ದಾರೆ. 'ಅವತಾರ ಪುರುಷ'- 2 ಕೆಲಸಗಳು ನಡೀತಿದೆ.


Click it and Unblock the Notifications











