»   » 'ಗುಳ್ಟು' ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ಸಿಂಪಲ್ ಸುನಿ

'ಗುಳ್ಟು' ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ಸಿಂಪಲ್ ಸುನಿ

Posted By:
Subscribe to Filmibeat Kannada

ಚಂದನವನದಲ್ಲಿ ಇತ್ತೀಚೆಗೆ ಒಂದರ ಹಿಂದೆ ಒಂದರಂತೆ ಪ್ರಯೋಗಾತ್ಮಕ ಚಿತ್ರಗಳು ಮೂಡಿ ಬರುತ್ತಿವೆ. ಅಲ್ಲದೇ ಆಂಥಾಲಜಿ ಸಿನಿಮಾಗಳು(ಹಲವು ಕಥೆಗಳಿರುವ ಸಿನಿಮಾ) ಹೆಚ್ಚಾಗುತ್ತಿವೆ. ಈ ಸಾಲಿಗೆ ಈಗ ಹೊಸ ಚಿತ್ರವೊಂದು ಸೇರ್ಪಡೆ ಆಗಿದ್ದು, ಟೈಟಲ್ ಮತ್ತು ಪಾತ್ರದ ಪೋಸ್ಟರ್ ನಿಂದ ಕುತೂಹಲ ಕೆರಳಿಸಿದೆ.

ಆ ಸಿನಿಮಾ ಹೆಸರು 'ಗುಳ್ಟು'(GULTOO). ಚಿತ್ರದ ಟೈಟಲ್ ಪಾತ್ರ ಪರಿಚಯದ ಪೋಸ್ಟರ್ ನಲ್ಲಿ ಇಂಗ್ಲಿಷ್ ನಲ್ಲೇ ಇದ್ದರೂ ಮಿಕ್ಕೆಲ್ಲಾ ಸ್ಥಳದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪದಗಳಿಂದ ತುಂಬಿಕೊಂಡಿದೆ. ವಿಶೇಷ ಅಂದ್ರೆ ಈ ಸಿನಿಮಾದ ಪಾತ್ರದ ಪೋಸ್ಟರ್ ಅನ್ನು ನಿರ್ದೇಶಕ ಸಿಂಪಲ್ ಸುನಿ ಲಾಂಚ್ ಮಾಡಲಿದ್ದಾರೆ.

director simple suni launched 'GULTOO' movie Character poster

ಸಿಂಪಲ್ ಸುನಿ ರವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಚಿತ್ರದ ಬಗ್ಗೆ ಹೊಗಳಿ, "ಮಾನವನ ಕಣ್ಣಿನ ಬಣ್ಣ 'ಬ್ಲಾಕ್ ಅಂಡ್ ವೈಟೂ'.... ಎಲ್ಲರ ಮೆದುಳಲ್ಲೂ ಇರ್ತಾನೆ ಒಬ್ಬ '#GULTOO' " ಎಂದು ಹಾಸ್ಯ ಚುಟುಕು ಗೀಚಿದ್ದಾರೆ.

"ನಾನು 'ಮುಖಗಳು' ಕಿರುಚಿತ್ರ ನೋಡಿದ ತಕ್ಷಣದಿಂದ ನವೀನ್ ಶಂಕರ್ ನನ್ನು ಲಾಂಚ್ ಮಾಡಬೇಕೆಂದುಕೊಂಡಿದ್ದೆ... ಆದರೆ ಆತ 'ಗುಳ್ಟು' ನಲ್ಲಿ ಲಾಂಚ್ ಆಗ್ತಿರೋದು ತುಂಬಾ ಖುಷಿ ನೀಡುತ್ತಿದೆ.. ತುಂಬಾ ಹೊಸತನ ಮತ್ತು ಮಜವಾಗಿ ಇರುವ ಚಿತ್ರಕಥೆ 'ಗುಳ್ಟು'.. ಪಾತ್ರದ ಪೋಸ್ಟರ್ ಅನಾವರಣಗೊಳಿಸುತ್ತಿರುವದು ನನ್ನ ಭಾಗ್ಯ ಈ ಹೊಸಬರನ್ನು ಮತ್ತು ಹೊಸತನವನ್ನು ಹಂಚಿ ಹರಸಿ ಆಶೀರ್ವದಿಸಿ" ಎಂದು ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟರ್ ಹಾಕಿ ಬರೆದಿದ್ದಾರೆ.

director simple suni launched 'GULTOO' movie Character poster

'ಗುಳ್ಟು' ಚಿತ್ರವನ್ನು ಹೊಸಬರ ತಂಡವೊಂದು ನಿರ್ಮಿಸುತ್ತಿದ್ದು ನವೀನ್ ಶಂಕರ್ ಎಂಬುವವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಜನಾರ್ಧನ್ ಚಿಕ್ಕಣ್ಣ ಎಂಬುವವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ಎಂಬುವವರು ಚಿತ್ರ ನಿರ್ಮಾಣ ಹೊಣೆ ಹೊತ್ತಿದ್ದಾರೆ.

English summary
Director Simple Suni launched 'GULTOO' Kannada Movie Character poster. 'GULTOO' movie is directing by Janardhan Chikkanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada