ಡಿ-ಬಾಸ್ ಸ್ಟೈಲ್‌ನಲ್ಲಿ ಸ್ಟಾರ್ ನಿರ್ದೇಶಕ: ಫಟ್ ಅಂತ ನೋಡಿದ್ರೆ ಗೊತ್ತೇ ಆಗಲ್ಲ
ದರ್ಶನ್ ಅವರ ಸ್ಟೈಲ್, ಲುಕ್ ಹಾಗೂ ಗೆಟಪ್‌ಗಳನ್ನು ಸಹಜವಾಗಿ ಅಭಿಮಾನಿಗಳು ಫಾಲೋ ಮಾಡ್ತಾರೆ. ಆದರೆ, ಕೆಲವೊಮ್ಮೆ ಸೆಲೆಬ್ರಿಟಿಗಳು ಸಹ ತಮಗೆ ಗೊತ್ತಿಲ್ಲದೇ ಕೆಲವು ಸ್ಟಾರ್ ನಟರ ಸ್ಟೈಲ್‌ನಲ್ಲಿ ಕಾಣಿಸಿಕೊಳ್ತಾರೆ.
ಈಗ ಇಂತಹದ್ದೇ ಸನ್ನಿವೇಶವೊಂದು ಸಾಕ್ಷಿಯಾಗಿದೆ. ಕನ್ನಡ ಯುವ ನಿರ್ದೇಶಕರೊಬ್ಬರು ಕಾರಿನಲ್ಲಿ ಹೋಗುತ್ತಿರುವ ಕ್ಲಿಕ್ ಮಾಡಿರುವ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋ ನೋಡುತ್ತಿದ್ದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತೆ ಕಾಣಿಸುತ್ತಿದೆ.
ಸ್ವತಃ ಈ ಫೋಟೋವನ್ನು ನಿರ್ದೇಶಕ ಸುನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಂತಹದೊಂದು ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಫೋಟೋ ನೋಡಿ ದರ್ಶನ್ ಅಭಿಮಾನಿಗಳು ಸಹ ಶಾಕ್ ಆಗಿದ್ದು, ಇದು ಸುನಿ ಅವರಾ ಅಥವಾ ಡಿ ಬಾಸ್ ಎನ್ನುವಷ್ಟು ಗೊಂದಲಕ್ಕೆ ಬಿದ್ದಿದ್ದಾರೆ. ದರ್ಶನ್ ಸರ್ ಥರಾನೇ ಕಾಣಿಸುತ್ತಿದ್ದೀರಾ, ಡಿ ಬಾಸ್ ಲುಕ್ ಇದು ಎಂದು ಕಾಮೆಂಟ್ ಮಾಡ್ತಿದ್ದಾರೆ. ಫಟ್ ನೋಡಿದ್ರೆ ಪಕ್ಕಾ ಡಿ ಬಾಸ್ ಲುಕ್ ಇದು ಎಂದು ಹಲವರು ಹೇಳುತ್ತಿದ್ದಾರೆ.
ಸದ್ಯ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸಖತ್' ಎಂಬ ಹೆಸರಿನಲ್ಲಿ ಸುನಿ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











