ಆರ್‌ಸಿಬಿ ಕಾಲೆಳೆದ ಸಿಎಸ್‌ಕೆ: ಧೋನಿ ತಂಡಕ್ಕೆ ಗುನ್ನ ಕೊಟ್ಟ ಸುನಿ

ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬದ್ಧವೈರಿಗಳಂತೆ ಬಿಂಬಿತವಾಗಿದೆ. ಹದಿಮೂರನೇ ಆವೃತ್ತಿಯಲ್ಲಿ ಸಿಎಸ್‌ಕೆ ಕಳಪೆ ಆಟದಿಂದ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ ಅದ್ಭುತ ಆಟ ಪ್ರದರ್ಶನದಿಂದ ಆರ್‌ಸಿಬಿ ಅಗ್ರ ಮೂರರಲ್ಲಿದೆ. ಈ ನಿಟ್ಟಿನಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ಕಿತ್ತಾಟ ಸ್ವಲ್ಪ ಜೋರಾಗಿಯೇ ಇದೆ.

Recommended Video

CSK ವಿರುದ್ಧ ರೊಚ್ಚಿಗೆದ್ದ Simple Suni | CSK vs MI | Filmibeat Kannada

ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಹೀನಾಯ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟ್ಟರ್ ಖಾತೆ ಆರ್‌ಸಿಬಿ ತಂಡದ ಬಗ್ಗೆ ಪರೋಕ್ಷವಾಗಿ ಕಾಲೆಳೆದಿದೆ. ಸಿಎಸ್‌ಕೆ ಟ್ವೀಟ್‌ಗೆ ಆರ್‌ಸಿಬಿ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ನಿರ್ದೇಶಕ ಸುನಿ ಸಹ ಟಾಂಗ್ ನೀಡಿದ್ದಾರೆ. ಮುಂದೆ ಓದಿ...

49ರ ಕೆಟ್ಟ ದಾಖಲೆಯಿಂದ ಪಾರಾದೇವು

49ರ ಕೆಟ್ಟ ದಾಖಲೆಯಿಂದ ಪಾರಾದೇವು

ಐಪಿಎಲ್‌ ಟೂರ್ನಿಯಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗಿರುವ ದಾಖಲೆ ಆರ್‌ಸಿಬಿ ಹೆಸರಿನಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಸಿಎಸ್‌ಕೆ ಒಂದು ಹಂತದಲ್ಲಿ 3 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಬಹುಶಃ ಅತಿ ಕಡಿಮೆ ರನ್‌ಗೆ ಸಿಎಸ್‌ಕೆ ಆಲ್ ಔಟ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ, ಅಂತಿಮವಾಗಿ 114 ರನ್ ಬಾರಿಸುವಲ್ಲಿ ಯಶಸ್ವಿಯಾಯಿತು. ಈ ವೇಳೆ ಟ್ವೀಟ್ ಮಾಡಿದ ಸಿಎಸ್‌ಕೆ ''ಸದ್ಯ 49ರ ಕೆಟ್ಟ ದಾಖಲೆಯಿಂದ ಪಾರಾದೆವು'' ಎಂದು ಆರ್‌ಸಿಬಿ ಪರೋಕ್ಷವಾಗಿ ಟಾಂಗ್ ನೀಡಿತ್ತು.

ಮೋಸದಾಟದಿಂದ ಟೂರ್ನಿಯಿಂದಲೇ ನಿರ್ಗಮನ ಹೊಂದಿಲ್ಲ

ಮೋಸದಾಟದಿಂದ ಟೂರ್ನಿಯಿಂದಲೇ ನಿರ್ಗಮನ ಹೊಂದಿಲ್ಲ

ಅತಿ ಕಮ್ಮಿ ರನ್ ಹೊಡೆದಿರವುದು ನಾವಿರಬಹುದು.. 49 ನೆನಪಿರಲಿ..

ಆದರೆ ಅತಿ ಹೆಚ್ಚು ರನ್ ಹೊಡೆದಿರುವವರು ನಾವೆನೇ.. 263.

ಒಂದು ಪವರ್ ಪ್ಲೇ ನಲ್ಲಿ ಅತಿ ಕಮ್ಮಿ ರನ್ ಗೆ ಕಟ್ಟಿಹಾಕಿರುವುದು ನಾವೆನೇ.. 18 in 6 overs ಸೋಲು ನೋಡಿದ್ದೀವಿ... ಗೆಲುವು ಕಂಡಿದ್ದೀವಿ...

ಆದರೆ ಎಂದಿಗೂ ಮೋಸದಾಟದ ಹೆಸರಿಗೆ ಟೂರ್ನಿಯಿಂದಲೇ ನಿರ್ಗಮನ ಹೊಂದಿಲ್ಲ..'' ಎಂದು ಸಿಎಸ್‌ಕೆಗೆ ಟಾಂಗ್ ನೀಡಿದ್ದಾರೆ.

ಸಿಎಸ್‌ಕೆ ಬ್ಯಾನ್ ಆಗಿತ್ತು

ಸಿಎಸ್‌ಕೆ ಬ್ಯಾನ್ ಆಗಿತ್ತು

ಸಿಎಸ್‌ಕೆ ಟ್ವೀಟ್ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ''ಎರೆಡು ವರ್ಷ ಬ್ಯಾನ್ ಆಗಿ ಹೋದ ಮಾನ ಹತ್ತು ಸರಿ ಟ್ರೋಫಿ ಗೆದ್ದರು ಬರಲ್ಲ ನೆನಪಿರಲಿ.'' ಎಂದು ಟಾಂಗ್ ನೀಡಿದ್ದಾರೆ.

ಐಪಿಎಲ್‌ 13ರಿಂದ ಸಿಎಸ್‌ಕೆ ಔಟ್!

ಐಪಿಎಲ್‌ 13ರಿಂದ ಸಿಎಸ್‌ಕೆ ಔಟ್!

ಸದ್ಯದ ಅಂಕಪಟ್ಟಿ ಗಮನಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಇಷ್ಟು ವರ್ಷದ ಇತಿಹಾಸದಲ್ಲಿ ಇದೇ ಮೊದಲ ಸಲ ಸಿಎಸ್‌ಕೆ ತಂಡ ಲೀಗ್ ಹಂತದಿಂದಲೇ ಹೊರಗೆ ಹೋಗುತ್ತಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ.

More from Filmibeat

English summary
Kannada film Director Simple Suni react about Chennai Super Kings tweet after match lost against Mumbai Indians.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X