»   » ಅಯ್ಯಯ್ಯೋ 'ಫಸ್ಟ್ ನೈಟ್' ಟೀಸರ್ ರಿಲೀಸ್ ಮಾಡ್ತಾರಂತೆ 'ಸಿಂಪಲ್ ಸುನಿ'

ಅಯ್ಯಯ್ಯೋ 'ಫಸ್ಟ್ ನೈಟ್' ಟೀಸರ್ ರಿಲೀಸ್ ಮಾಡ್ತಾರಂತೆ 'ಸಿಂಪಲ್ ಸುನಿ'

Posted By:
Subscribe to Filmibeat Kannada

'ಫಸ್ಟ್ ನೈಟ್' ಟೀಸರ್ ಹಾ! ಅಂತ ಶಾಕ್ ಆಗ್ಬೇಡಿ ಈ ಮಾತನ್ನ ನಾವ್ ಹೇಳ್ತಿಲ್ಲ. ಸ್ಯಾಂಡಲ್ ವುಡ್ ನ ನಿರ್ದೇಶಕ 'ಸಿಂಪಲ್ ಸುನಿ' ಹೇಳ್ತಿದ್ದಾರೆ.

ಡಬಲ್ ಮೀನಿಂಗ್ ಡೈಲಾಗ್ ಅನ್ನ ಡೀಸೆಂಟ್ ಆಗಿ ಪ್ರೆಸೆಂಟ್ ಮಾಡಿದ್ದ ನಿರ್ದೇಶಕ ಇದೇನು ಇಂತಹ ಕೆಲಸಕ್ಕೆ ಮಾಡೋಕೆ ಮುಂದಾದ್ರಾ ಅಂತ ಯೋಚನೆ ಮಾಡ್ಬೇಡಿ. ಯಾಕಂದ್ರೆ ಸುನಿ ಹೇಳ್ತಿರೋದು ಸಿನಿಮಾ ಬಗ್ಗೆ. ಗಣೇಶ್ ಹಾಗೂ ರಶ್ಮಿಕಾ ಅಭಿನಯದ 'ಚಮಕ್' ಸಿನಿಮಾದ ಫಸ್ಟ್ ನೈಟ್ ಟೀಸರ್ ರಿಲೀಸ್ ಮಾಡುವುದಾಗಿ ಸುನಿ ತಮ್ಮ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಸುನಿ ರಿಲೀಸ್ ಮಾಡ್ತಾರಂತೆ 'ಫಸ್ಟ್ ನೈಟ್' ಟೀಸರ್

ಸಿಂಪಲ್ ಸುನಿ ನಿರ್ದೇಶನದ ಬಿಡುಗಡೆಗೆ ತಯಾರಾಗಿರುವ ಸಿನಿಮಾ 'ಚಮಕ್'. ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಪ್ರಮೋಷನ್ ಗಾಗಿ ರೆಡಿಯಾಗಿರುವ 'ಚಮಕ್' ಸಿನಿಮಾದ 'ಫಸ್ಟ್ ನೈಟ್' ಟೀಸರ್ ನಾಳೆ ರಿಲೀಸ್ ಮಾಡುವುದಾಗಿ ಸಿಂಪಲ್ ಸುನಿ ತಿಳಿಸಿದ್ದಾರೆ.

ಕೂತೂಹಲ ಮೂಡಿಸಿರುವ ಸುದ್ದಿ

ಸುನಿ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ 'ಫಸ್ಟ್ ನೈಟ್' ಟೀಸರ್ ರಿಲೀಸ್ ಮಾಡುವುದಾಗಿ ತಿಳಿಸಿದ ತಕ್ಷಣ ಅಭಿಮಾನಿಗಳು ಏನಿದೆ ಟೀಸರ್ ನಲ್ಲಿ ಅಂತ ಕ್ಯೂರಿಯಾಸಿಟಿಯಿಂದ ಕೇಳಲು ಪ್ರಾರಂಭ ಮಾಡಿದ್ದಾರೆ. ಸೋಷಿಯಲ್ ನೆಟ್ವರ್ಕ್ ನಲ್ಲಿ ಟೀಸರ್ ಸುದ್ದಿ ವೈರಲ್ ಆಗಿದೆ.

ವರ್ಷಾಂತ್ಯಕ್ಕೆ ಸಿನಿಮಾ

'ಚಮಕ್' ಸಿನಿಮಾವನ್ನ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡ್ಬೇಕು ಅಂತ ತೀರ್ಮಾನಿಸಲಾಗಿದೆ. ಕಳೆದ ವರ್ಷ ರಶ್ಮಿಕಾ ಅಭಿನಯದ 'ಕಿರಿಕ್ ಪಾರ್ಟಿ' ಡಿಸೆಂಬರ್ ನಲ್ಲಿ ರಿಲೀಸ್ ಆಗಿತ್ತು. ಗಣೇಶ್ ಅಭಿನಯದ 'ಮುಂಗಾರು ಮಳೆ' ಕೂಡ ಡಿಸೆಂಬರ್ ನಲ್ಲಿ ತೆರೆಗೆ ಬಂದಿತು. ಇದೇ ಕಾರಣದಿಂದ ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಚಂದ್ರಶೇಖರ್ 'ಚಮಕ್' ಚಿತ್ರವನ್ನು ಡಿಸೆಂಬರ್ ಅಂತ್ಯಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಜೊತೆ 'ಕಿರಿಕ್ ಹುಡುಗಿ'

'ಚಮಕ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ 'ಕಿರಿಕ್ ಹುಡುಗಿ' ರಶ್ಮಿಕಾ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ ಸಿನಿಮಾ. ಸುನಿ ಆಕ್ಷನ್ ಕಟ್ ಹೇಳ್ತಿದ್ದು ಗಣೇಶ್ ಆಕ್ಟಿಂಗ್ ಹಾಗೂ ಸುನಿ ನಿರ್ದೆಶನದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿದೆ.

English summary
Director Simple Suni to release 'Chamak' movie's First Night Teaser. 'ಚಮಕ್' ಸಿನಿಮಾದ ಫಸ್ಟ್ ನೈಟ್ ಟೀಸರ್ ಬಿಡುಗಡೆ ಮಾಡಲು ಸಜ್ಜಾದ ನಿರ್ದೇಶಕ ಸಿಂಪಲ್ ಸುನಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada