ಪ್ಲೇ ಆಫ್‌ನಿಂದ ಹೊರಬಿದ್ದ ಆರ್‌ಸಿಬಿ ಬಗ್ಗೆ ಸಿಂಪಲ್ ಸುನಿ ಹೇಳಿದ್ದೇನು?

ಕೊನೆಯ ಹಂತದಲ್ಲಿ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ತಂಡ ಈ ಸಲ ಐಪಿಎಲ್ ಟ್ರೋಫಿ ಎತ್ತಿಹಿಡಿಯಲಿದೆ ಎಂಬ ಭರವಸೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಕೊನೆಯ ತನಕ ಹೋರಾಡಿ ಸೋಲು ಕಂಡ ಆರ್‌ಸಿಬಿ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ.

ಆದರೆ, ಆರ್‌ಸಿಬಿ ಮೇಲಿನ ಪ್ರೀತಿ ಮತ್ತು ಅಭಿಮಾನಿ ಮಾತ್ರ ಅಭಿಮಾನಿಗಳಲ್ಲಿ ಕಡಿಮೆ ಆಗಿಲ್ಲ. ಮುಂದಿನ ಸಲ ಮತ್ತೆ ಬರ್ತೀವಿ ಎಂದು ಕಾನ್ಫಿಡೆನ್ಸ್‌ನೊಂದಿಗೆ ಐಪಿಎಲ್‌ 2020ಗೆ ವಿದಾಯ ಹೇಳಿದ್ದಾರೆ. ಆ ಆವೃತ್ತಿ ಆರಂಭದಿಂದಲೂ ಆರ್‌ಸಿಬಿ ಪರವಾಗಿ ಬೆಂಬಲ ನೀಡಿದ್ದ ನಿರ್ದೇಶಕ ಸುನಿ, ಕೊನೆಯ ಪಂದ್ಯ ಬಳಿಕ ಭಾವನಾತ್ಮಕ ಟ್ವೀಟ್ ಮೂಲಕ ಟೂರ್ನಿಗೆ ಗುಡ್‌ಬೈ ಹೇಳಿದ್ದಾರೆ. ಮುಂದೆ ಓದಿ...

ಸೋಲು ನಮಗೆ ಹೊಸತಲ್ಲ..

ಸೋಲು ನಮಗೆ ಹೊಸತಲ್ಲ..

ಸನ್‌ರೈಸ್ ಹೈದರಾಬಾದ್‌ ವಿರುದ್ಧದ ಪಂದ್ಯ ಸೋತ ಬಳಿಕ ಟ್ವೀಟ್ ಮಾಡಿರುವ ಸುನಿ ''ಸೋಲು ನಮಗೆ ಹೊಸತಲ್ಲ.. ಆದರೆ ಪ್ರತಿಸಲ ಸೋತಾಗಲು ಜೊತೆಗಿರುವ ಇಂತಹ "ಅಭಿಮಾನಿ"ಗಳನ್ನು ಬೇರೆಲ್ಲೂ ಕಂಡಿಲ್ಲ.. ಪ್ರತಿ #RCB ಅಭಿಮಾನಿಗಳಿಗೂ ನನ್ನ ಎದೆಯಾಳದ ವಂದನೆಗಳು'' ಎಂದು ಹೇಳಿದ್ದಾರೆ.

'ಈ ಸಲ ಕಪ್ ನಮ್ಮದೇ'

'ಈ ಸಲ ಕಪ್ ನಮ್ಮದೇ'

ಪ್ರತಿ ಆವೃತ್ತಿಯಲ್ಲೂ 'ಈ ಸಲ ಕಪ್ ನಮ್ಮದೇ' ಎಂಬ ಘೋಷ ವಾಕ್ಯದೊಂದಿಗೆ ಆರ್‌ಸಿಬಿ ಫ್ಯಾನ್ಸ್ ತಂಡಕ್ಕೆ ಪ್ರೋತ್ಸಾಹ ನೀಡ್ತಾರೆ. ಆದ್ರೆ, ಕಪ್ ಗೆಲ್ಲಲು ಮಾತ್ರ ಇದುವರೆಗೂ ಸಾಧ್ಯವಾಗಿಲ್ಲ. ಹಾಗಂತ, ಆ ನಂಬಿಕ ಬಿಟ್ಟುಕೊಡದ ಸುನಿ ''ಮತ್ತೇ ಬರೋಣ,, ಕಪ್ ಬಗ್ಗೆ ಗೊತ್ತಿಲ್ಲ ಆದರೆ "ಈ ಸಲ ಕಪ್ ನಮ್ಮದೇ" ಅನ್ನುವ ವಾಕ್ಯವಂತು ನಮ್ಮದೇ..'' ಎಂದು ಟ್ವೀಟ್ ಮಾಡಿದ್ದಾರೆ.

ಬದಲಾವಣೆಯೊಂದಿಗೆ ಬನ್ನಿ

ಬದಲಾವಣೆಯೊಂದಿಗೆ ಬನ್ನಿ

''ಬಲವಾದ ಫೀಲ್ಡಿಂಗ್ ಕೋಚ್ ತನ್ನಿ. ದುಬೆ, ಸುಂದರ್ ತರ ಆಟಗಾರರನ್ನು ಕರ್ನಾಟಕದಲ್ಲೂ ಹುಡುಕಿ. ಕೊಹ್ಲಿ, ಎಬಿಡಿ, ಚಾಹಲ್ ನಂತೆ 11 ಆಟಗಾರರ ಮೇಲು ವಿಶ್ವಾಸವಿರುವಂತ ಆಟಗಾರರನ್ನು ಆಯ್ಕೆ ಮಾಡಿ. ಬುದ್ಧಿ ಬಂದಾಗಿನಿಂದ ಬೆಂಗಳೂರನ್ನು ಪ್ರೀತಿಸಿದ್ದೀವಿ. ಗೆಲ್ಲದಿದ್ದರೂ ಗೆಲ್ಲುವಂತೆ ಆಡಿ. ಮತ್ತೇ ಬರ್ತೀವಿ "ಈ ಸಲ ಕಪ್ ನಮ್ದೇ ಅಂತ'' ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ.

Recommended Video

ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada
ಮುಂಬೈ ಇಂಡಿಯನ್ಸ್ ಫೈನಲ್?

ಮುಂಬೈ ಇಂಡಿಯನ್ಸ್ ಫೈನಲ್?

2020ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಫೈನಲ್‌ನಲ್ಲಿದೆ. ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್‌ ಹಾಗೂ ಮುಂಬೈ ವಿರುದ್ಧ ಸೋತ ಡೆಲ್ಲಿ ಇಂದು ಕ್ವಾಲಿಫೈಯರ್ 2 ಪಂದ್ಯವಾಡಲಿದ್ದಾರೆ. ಇವರಿಬ್ಬರಲ್ಲಿ ಗೆದ್ದವರು ಫೈನಲ್‌ನಲ್ಲಿ ಮುಂಬೈ ವಿರುದ್ಧ ಆಡಲಿದ್ದಾರೆ.

More from Filmibeat

English summary
Kannada Director simple suni tweet after Royal challengers bangalore lost In Playoff.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X