ಮುಂಬೈ ವಿರುದ್ಧ ಸೋತ RCB ತಂಡದ ಹಣೆಬರಹ ಹೇಳಿದ ಸಿಂಪಲ್ ಸುನಿ

Recommended Video

IPL 2019: RCB vs MI :ಆರ್ ಸಿ ಬಿ ಬಗ್ಗೆ ಮಾತನಾಡಿದ ಕನ್ನಡ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ | FILMIBEAT KANNADA

ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಬಲಿಷ್ಠ ಮುಂಬೈ ಇಂಡಿಯನ್ಸ್ ಕಾದಾಡಿದರು. ಈ ಪಂದ್ಯವನ್ನ ಆರ್.ಸಿ.ಬಿ ಗೆದ್ದು ಬಿಡ್ತು ಎನ್ನುಷ್ಟರಲ್ಲಿ ಸೋತು ಸುಣ್ಣವಾಯಿತು.

ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಅಂತ ಅಭಿಮಾನಿಗಳು ಸ್ವಾಭಿಮಾನವನ್ನ ಪಣಕ್ಕೆ ಇಟ್ಟು ಆರ್.ಸಿ.ಬಿ ತಂಡಕ್ಕೆ ಸಫೋರ್ಟ್ ಮಾಡ್ತಿದ್ದಾರೆ. ಆದ್ರೆ, ಬೆಂಗಳೂರು ತಂಡ ಮಾತ್ರ ಗೆದ್ದೆ ಗೆಲ್ತೀವಿ ಅಂತ ಬಿಲ್ಡಪ್ ಕೊಟ್ಟು ಸೋಲುತ್ತಿದೆ.

ಆರ್.ಸಿ.ಬಿಯ ಈ ಆಟ ನೋಡಿ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಕೂಡ ನಮ್ ಆರ್.ಸಿ.ಬಿ ಕಥೆ ಇಷ್ಟೇ ಅಂತಿದ್ದಾರೆ. ಮುಂಬೈ ವಿರುದ್ಧ ಗೆಲ್ಲುವ ಪಂದ್ಯವನ್ನ ಕೈಚೆಲ್ಲಿದ RCB ತಂಡದ ಹಣೆಬರಹವನ್ನ ತಮ್ಮದೇ ಸ್ಟೈಲ್ ನಲ್ಲಿ ಹೇಳಿದ್ದಾರೆ. ಒಂದರ್ಥದಲ್ಲಿ ನೋಡಿದ್ರೆ ಇದು ನಿಜಾ ಅನಿಸುತ್ತಿದೆ. ಅಷ್ಟಕ್ಕೂ, RCB ಬಗ್ಗೆ ಸುನಿ ಏನಂದ್ರು? ಮುಂದೆ ಓದಿ.....

ಹಂಗಾದ್ರೆ ನಾವು ಫ್ಲೇ ಆಫ್ ಗೆ ಬರ್ತಿವಿ

ಹಂಗಾದ್ರೆ ನಾವು ಫ್ಲೇ ಆಫ್ ಗೆ ಬರ್ತಿವಿ

''ಏನಿಲ್ಲ ಗುರು....ನಾವ್ ಆ ಟೀಮ್'ಗೆ ಸರಿಯಾಗಿ ಹೊಡೆದು,..ಈ ಟೀಮ್ ಅವರು ಆ ಟೀಮ್ ಮೇಲೆ ಹಂಗೆ ಸೋತರೆ,,,ಅವರಿಬ್ಬರದು ಒಂದೊಂದು ಮ್ಯಾಚ್ ಟೈ ಆಗಿಬಿಟ್ಟರೆ ...ನಾವ್ ಆರಾಮ್'ಸೆ ಫ್ಲೇ ಆಫ್'ಗೆ ಬರ್ತೀವಿ'' ಎಂದು ಪರೋಕ್ಷವಾಗಿ ಆರ್.ಸಿ.ಬಿ ತಂಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೊನೆಗೂ ಸುನಿ ಹೇಳಿದಾಗೇ ಆಗುತ್ತೆ

ಕೊನೆಗೂ ಸುನಿ ಹೇಳಿದಾಗೇ ಆಗುತ್ತೆ

''ಆ ಮ್ಯಾಚ್ ಬಿಟ್ಟು, ಈ ಮ್ಯಾಚ್ ಬಿಟ್ಟು ಕೊನೆಗೂ ಸುನಿ ಹೇಳಿದ ರೀತಿಯಲ್ಲಿ ಆಗುತ್ತೆ. ನೇರವಾಗಿ ಅತಿ ಹೆಚ್ಚು ಅಂಕ ಪಡೆದು ಫ್ಲೇ ಆಫ್ ಗೆ ಹೋಗೋಕೆ ಆಗದೇ, ಬೇರೆ ತಂಡಗಳ ಫಲಿತಾಂಶಕ್ಕೆ ಕಾದು ಲೆಕ್ಕಾಚಾರ ಹಾಕಿ ಫ್ಲೇ ಆಫ್ ಪ್ರವೇಶಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ'' ಎನ್ನುವುದು ಸುನಿ ಅವರ ಪರೋಕ್ಷ ಅಭಿಪ್ರಾಯ.

ಸುನಿ ಉತ್ತಮ ಕ್ರಿಕೆಟ್ ವಿಶ್ಲೇಷಕ

ಸುನಿ ಉತ್ತಮ ಕ್ರಿಕೆಟ್ ವಿಶ್ಲೇಷಕ

ಹಾಗ್ನೋಡಿದ್ರೆ, ನಿರ್ದೇಶಕ ಸುನಿ ಅವರಿಗೆ ಕ್ರಿಕೆಟ್ ಅಂದ್ರೆ ಹೆಚ್ಚು ಕ್ರೇಜ್. ಕ್ರಿಕೆಟ್ ನೋಡುವುದು ಅಂದ್ರೆ ಕೂಡ ಸಿಕ್ಕಾಪಟ್ಟೆ ಇಷ್ಟ. ಸುನಿ ಕ್ರಿಕೆಟ್ ಕೂಡ ಆಡ್ತಾರೆ. ಪ್ರತಿ ಪಂದ್ಯ ನಡೆದಾಗಲೂ ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಳ್ತಾರೆ. ಹಾಗಾಗಿ, ಸುನಿ ಹೇಳುವುದರಲ್ಲಿ ಅರ್ಥವಿರುತ್ತೆ. ಪ್ರತಿ ಆವೃತ್ತಿಯಲ್ಲೂ ಆರ್.ಸಿ.ಬಿ ತಂಡದ್ದು ಇದೇ ಕಥೆ ಆಗಿದೆ.

RCB ಪಂದ್ಯ ವೀಕ್ಷಣೆ ಮಾಡಿದ ಸ್ಟಾರ್ಸ್

RCB ಪಂದ್ಯ ವೀಕ್ಷಣೆ ಮಾಡಿದ ಸ್ಟಾರ್ಸ್

ಆರ್.ಸಿ.ಬಿ ಪಂದ್ಯ ನೋಡಲು ಕ್ರಿಕೆಟ್ ಪ್ರೇಮಿಗಳ ಮಾತ್ರವಲ್ಲ, ಸಿನಿಮಾ ಸ್ಟಾರ್ ಗಳು ಕಾದು ಕುಂತಿರ್ತಾರೆ. ನಿನ್ನೆ ನಡೆದ ಆರ್.ಸಿ.ಬಿ ಮತ್ತು ಮುಂಬೈ ಪಂದ್ಯ ನೋಡಲು ಬಹದ್ಧೂರ್ ಚೇತನ್, ಆಯೋಗ್ಯ ಮಹೇಶ್, ಬಜಾರ್ ನಟ ಧನ್ವೀರ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು.

More from Filmibeat

English summary
Kannada director simple suni has taken his twitter account to express his opinion about royal challengers bangalore team. Mumbai indians beats royal challengers by 6 runs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X