ನನ್ನನ್ನು ತಪ್ಪು ತಿಳಿಯಬೇಡಿ ಪ್ಲೀಜ್ - ಎಸ್ ನಾರಾಯಣ್

By Shami

S Narayan
ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್ ನಾರಾಯಣ್ ತೀವ್ರ ಮನನೊಂದಿದ್ದಾರೆ. ಅವರ ನಿರ್ದೇಶನದ ಶೈಲೂ ಮತ್ತು ಸುದೀಪ್ ಅಭಿನಯದ ವಿಷ್ಣುವರ್ಧನ ಒಂದೇ ವಾರದಲ್ಲಿ ಬಿಡುಗಡೆಯಾಗುತ್ತಿರುವುದೇ ಅವರ ನೋವಿಗೆ ಕಾರಣ. ಈ ಎರಡು ಬಿಗ್ ಬಜೆಟ್ ಚಿತ್ರಗಳು ಒಂದು ದಿನದ ಅಂತರದಲ್ಲಿ ಬಿಡುಗಡೆಗೊಳ್ಳುತ್ತಿದೆ.

ಕನ್ನಡ ಚಿತ್ರಕ್ಕೆ ಇರುವುದು ಅತಿ ಚಿಕ್ಕ ಮಾರ್ಕೆಟ್. ಈ ಸಣ್ಣ ಮಾರ್ಕೆಟ್ ಅನ್ನು ಬಳಸಿಕೊಂಡು ನಾವು ಚಿತ್ರ ನಿರ್ಮಿಸ ಬೇಕು. ಒಂದೇ ವಾರದಲ್ಲಿ ಎರಡು ಹೈಪ್ ಇರುವ ಚಿತ್ರಗಳು ಬಿಡುಗಡೆಗೊಂಡರೆ ಅದರಲ್ಲಿ ಒಂದು ಚಿತ್ರ ಗಳಿಕೆಯಲ್ಲಿ ಹಿಂದೆ ಬೀಳುವುದಂತೂ ನಿಜ, ಅದು ನನ್ನ ಚಿತ್ರವಿರಲಿ ಅಥವಾ ದ್ವಾರಕೀಶ್ ಚಿತ್ರವಾಗಿರಲಿ ಎಂದು ಎಸ್ ನಾರಾಯಣ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಚಿತ್ರಗಳ ನಡುವೆ ಪೈಪೋಟಿ ಇರಬೇಕು ನಿಜ, ಆದರೆ ಅದು ಹಿತಕರ ಪೈಪೋಟಿ ಆಗಿರಲಿ ಎನ್ನುವುದು ನನ್ನ ನಿವೇದನೆ. ಕನ್ನಡ ಚಿತ್ರರಂಗವನ್ನು ನಂಬಿ ಕೊಂಡ ಬಹಳಷ್ಟು ಕುಟುಂಬಗಳಿವೆ. ಸಾರಥಿ ಮತ್ತು ಪರಮಾತ್ಮ ಚಿತ್ರಗಳೂ ಹೀಗೇ ಒಂದು ವಾರದ ಅಂತರದಲ್ಲಿ ಬಿಡುಗಡೆಗೊಂಡಿದ್ದವು. ಈ ರೀತಿ ಆದರೆ ಯಾವುದಾದರೂ ಒಂದು ನಿರ್ಮಾಪಕರಿಗೆ ನಷ್ಟ ಆಗುವುದು ಖಂಡಿತ. ಈ ರೀತಿ ಆಗುವುದು ಬೇಡ ಎನ್ನುವುದೇ ನನ್ನ ಕೋರಿಕೆ ಎಂದು ಎಸ್ ನಾರಾಯಣ್ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ನಮ್ಮ ಚಿತ್ರರಂಗ ಬೆಳೆಯ ಬೇಕೆನ್ನುವ ಉದ್ದೇಶದಿಂದ ಈ ಮಾತು ಹೇಳುತ್ತಿದ್ದೆನೆಯೇ ಹೊರತು ಇದರಲ್ಲಿ ಅಪಾರ್ಥ ಕಲ್ಪಿಸಿಕೊಳ್ಳುವುದು ಬೇಡ ಎಂದು ಕಲಾಸಾಮ್ರಾಟ್ ಎಸ್ ನಾರಾಯಣ್ ಗಾಂಧಿನಗರದ ಮಂದಿಗಳಿಗೆ ಕಿವಿಮಾತು ಹೇಳಿದ್ದಾರೆ.

More from Filmibeat

English summary
Director S Narayan has given a statement on two big films releasing on same week. He said this is not the good sign for Kannada film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X