»   » 'ಆರ್ ಎಕ್ಸ್ ಸೂರಿ' ಬಿಡುಗಡೆಗೆ ಸಹಾಯ ಮಾಡಿದ 'ಕೆಂಡಸಂಪಿಗೆ'

'ಆರ್ ಎಕ್ಸ್ ಸೂರಿ' ಬಿಡುಗಡೆಗೆ ಸಹಾಯ ಮಾಡಿದ 'ಕೆಂಡಸಂಪಿಗೆ'

Posted By:
Subscribe to Filmibeat Kannada

ದುನಿಯಾ ಸೂರಿ ನಿರ್ದೇಶನದ ಹೊಸಬರ ಹಾಗೂ ಬಹುನಿರೀಕ್ಷಿತ ಚಿತ್ರ 'ಕೆಂಡಸಂಪಿಗೆ' ಸೆಪ್ಟೆಂಬರ್ 4 ರಂದು ತೆರೆ ಕಾಣಬೇಕಿತ್ತು, ಜೊತೆಗೆ ಅಂದೇ ದುನಿಯಾ ವಿಜಯ್ ಅಭಿನಯದ 'ಆರ್ ಎಕ್ಸ್ ಸೂರಿ' ಕೂಡ ತೆರೆ ಕಾಣುತ್ತಿದೆ.

ಇದೀಗ ನಿಮಗೆ ಪ್ರಶ್ನೆ ಮೂಡಿರಬೇಕಲ್ಲ ಎರಡು ಚಿತ್ರಗಳು ಒಂದೇ ದಿನ ತೆರೆ ಕಂಡರೆ ಕ್ಲ್ಯಾಷ್ ಆಗೋಲ್ವೆ ಅಂತ. ಅಲ್ಲದೇ 'ದುನಿಯಾ' ಚಿತ್ರವನ್ನು ಇದೇ ಸೂರಿ ನಿರ್ದೇಶನ ಮಾಡಿದ್ರು, ಆವಾಗ ವಿಜಯ್ ಅವರು ಹೀರೋ ಆಗಿ ಮೊದಲನೇ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದು, ಈಗ 'ಕೆಂಡಸಂಪಿಗೆ' ಸರದಿ ಅದು ಹೊಸಬರ ಚಿತ್ರ ಬೇರೆ.

Director Soori Support for Duniya Vijay's Kannada movie 'RX Soori

ಅಭಿಮಾನಿಗಳ ಈ ಎಲ್ಲಾ ಪ್ರಶ್ನೆಗಳಿಗೆ 'ಕೆಂಡಸಂಪಿಗೆ' ಚಿತ್ರದ ನಿರ್ದೇಶಕ ದುನಿಯಾ ಸೂರಿ ಅವರು 'ಕೆಂಡಸಂಪಿಗೆ' ಚಿತ್ರವನ್ನು ಸೆಪ್ಟೆಂಬರ್ 11ಕ್ಕೆ ರಿಲೀಸ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ.

ಈ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸಾಫೀಸ್ ಕಲೆಕ್ಷನ್ ಗೆ ತೊಂದರೆಯಾಗಬಹುದು ಅಂತ 'ಆರ್ ಎಕ್ಸ್ ಸೂರಿ' ಚಿತ್ರತಂಡ 'ಕೆಂಡಸಂಪಿಗೆ' ಚಿತ್ರತಂಡಕ್ಕೆ ಸಿನಿಮಾ ಬಿಡುಗಡೆ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಲು ತಿಳಿಸಿದ್ದಾರಂತೆ.

ಇದಕ್ಕೆ ಸಮ್ಮತಿಸಿದ 'ಕೆಂಡಸಂಪಿಗೆ' ಚಿತ್ರದ ನಿರ್ದೇಶಕ ದುನಿಯಾ ಸೂರಿ ಅವರು ಹೊಸಬರ 'ಕೆಂಡಸಂಪಿಗೆ' ಚಿತ್ರವನ್ನು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಇನ್ನೂ 'ಆರ್ ಎಕ್ಸ್ ಸೂರಿ' ಕಳೆದ ವಾರ ಬಿಡುಗಡೆ ಕಾಣಬೇಕಿದ್ದು, ಆದರೆ ದ್ವಾರಕೀಶ್ ಅವರ 'ಆಟಗಾರ' ಹಾಗೂ 'ಮುದ್ದು ಮನಸೇ' ನಡುವೆ ಕ್ಲ್ಯಾಷ್ ಬೇಡ ಅಂತ 'ಆರ್ ಎಕ್ಸ್ ಸೂರಿ' ಚಿತ್ರತಂಡ ಬಿಡುಗಡೆ ಕಾರ್ಯಕ್ರಮವನ್ನು ಈ ವಾರಕ್ಕೆ ಮುಂದೂಡಿತ್ತು.

ಇದೀಗ 'ಕೆಂಡಸಂಪಿಗೆ' ಸರದಿ, ನಿರ್ದೇಶಕ ಸೂರಿ ಅವರು 'ಆರ್ ಎಕ್ಸ್ ಸೂರಿ' ಚಿತ್ರತಂಡದ ವಿನಂತಿಯ ಮೇರೆಗೆ ತಮ್ಮ ಚಿತ್ರವನ್ನು ಮುಂದಕ್ಕೆ ಹಾಕುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ 'ಆರ್ ಎಕ್ಸ್ ಸೂರಿ' ಚಿತ್ರದ ನಿರ್ದೇಶಕ ಶ್ರೀಜೈ ಹಾಗು ಇಡೀ ಚಿತ್ರತಂಡದವರು, ನಿರ್ದೇಶಕ ದುನಿಯಾ ಸೂರಿ ಹಾಗು 'ಕೆಂಡಸಂಪಿಗೆ' ಚಿತ್ರತಂಡಕ್ಕೆ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.

English summary
If everything had gone as expected then director Soori's 'Kendasampige' and debutante Srijai's 'RX Soori' was supposed to release together. Now 'Kendasampige' has made way for 'RX Soori' and 'Kendasampige' has been postponed for 11th September release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada