For Quick Alerts
  ALLOW NOTIFICATIONS  
  For Daily Alerts

  ಸಂಜನಾ ಬೆತ್ತಲೆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟ 'ದಂಡುಪಾಳ್ಯ' ನಿರ್ದೇಶಕ

  By Bharath Kumar
  |

  'ದಂಡುಪಾಳ್ಯ-2' ಚಿತ್ರಕ್ಕೆ ಸಂಬಂಧಪಟ್ಟಂತೆ ನಟಿ ಸಂಜನಾ ಅವರ ಬೆತ್ತಲೆ ವಿಡಿಯೋ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಿವಾಸು ರಾಜು ಮಾತನಾಡಿದ್ದಾರೆ. ಈ ವಿಡಿಯೋ ಕುರಿತು ನಟಿ ಸಂಜನಾ ''ಚಿತ್ರದಲ್ಲಿ ನಾನು ಬೆತ್ತಲಾಗಿಲ್ಲ, ಬೆನ್ನು ಮಾತ್ರ ತೋರಿಸಿದ್ದು, ಗ್ರಾಫಿಕ್ಸ್ ಬಳಿಸಿ ಈ ವಿಡಿಯೋ ಹೀಗೆ ಮಾಡಲಾಗಿದೆ. ಹಾಗೆ ಯಾರೋ ಉದ್ದೇಶಪೂರ್ವಕವಾಗಿ ಲೀಕ್ ಮಾಡಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  ಇಷ್ಟೆಲ್ಲಾ ವಿವಾದ ಆಗುತ್ತಿದ್ದರು ಚಿತ್ರದ ನಿರ್ದೇಶಕ ಶ್ರೀನಿವಾಸು ರಾಜು ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದ್ರೆ, ಇಂದು ಟಿವಿ-9 ಮಾಧ್ಯಮದ ಜೊತೆ ದೂರವಾಣಿ ಮುಖಾಂತರ ಮಾತನಾಡಿದ ನಿರ್ದೇಶಕರು, ಸಂಜನಾ ಅವರ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದರು. ಹಾಗಿದ್ರೆ, 'ದಂಡುಪಾಳ್ಯ' ನಿರ್ದೇಶಕರು ಏನಂದ್ರು? ಮುಂದೆ ಓದಿ......

  ನಾನೊಬ್ಬ ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ ಅಷ್ಟೇ

  ನಾನೊಬ್ಬ ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ ಅಷ್ಟೇ

  ''ನಾನೊಬ್ಬ ನಿರ್ದೇಶಕನಾಗಿ ಏನೂ ಕೆಲಸ ಮಾಡಬೇಕೋ ಅಷ್ಟೆ ನಾನು ಮಾಡಿರುವುದು. ಚಿತ್ರದಲ್ಲಿ ಆ ದೃಶ್ಯವಿತ್ತು. ಸಂಜನಾ ಅವರಿಗೂ ಮೊದಲೇ ಹೇಳಿದ್ವಿ. ಅವರು ಒಪ್ಪಿಕೊಂಡಿದ್ದರು. ಚಿತ್ರೀಕರಣ ಮಾಡಿದ್ವಿ. ಸೆನ್ಸಾರ್ ಮಂಡಳಿಯವರು ಕಟ್ ಮಾಡಿ ಎಂದರು. ಸರಿ ಎಂದು ಕಟ್ ಮಾಡಿ, ಸಿನಿಮಾ ಬಿಡುಗಡೆ ಮಾಡಿದ್ದೇವೆ'' - ಶ್ರೀನಿವಾಸು ರಾಜು, ನಿರ್ದೇಶಕ

  ಯಾರು ಲೀಕ್ ಮಾಡಿದ್ದಾರೆ ಗೊತ್ತಿಲ್ಲ

  ಯಾರು ಲೀಕ್ ಮಾಡಿದ್ದಾರೆ ಗೊತ್ತಿಲ್ಲ

  ''ಚಿತ್ರೀಕರಣ ವೇಳೆ ಸುಮಾರು 200 ಜನ ಕೆಲಸ ಮಾಡ್ತಾರೆ. ಕ್ಯಾಮೆರಾದವರು, ಕೊರಿಯೋಗ್ರಫಿ ತಂಡದವರು, ಪ್ರೊಡಕ್ಷನ್ ನವರು ಎಲ್ಲರೂ ಇರ್ತಾರೆ. ನಂತರ ಡಬ್ಬಿಂಗ್ ಆಗಿದೆ, ಎಡಿಟಿಂಗ್ ಆಗಿದೆ, ವಿಎಫ್ ಎಕ್ಸ್ ಕೆಲಸ ಆಗಿದೆ. ಸೆನ್ಸಾರ್ ಕೂಡ ಆಗಿದೆ. ಇವರಲ್ಲಿ ಯಾರು ಲೀಕ್ ಮಾಡಿದ್ದಾರೆ ಎಂಬುದು ನನಗೂ ಗೊತ್ತಿಲ್ಲ'' - ಶ್ರೀನಿವಾಸು ರಾಜು, ನಿರ್ದೇಶಕ

  ಡಿಜಿಟಲ್ ತಂತ್ರಜ್ಞಾನದ ಪ್ರಭಾವ

  ಡಿಜಿಟಲ್ ತಂತ್ರಜ್ಞಾನದ ಪ್ರಭಾವ

  ''ಈಗ ತಂತ್ರಜ್ಞಾನ ಬದಲಾಗಿದೆ. ಹೆಚ್ಚು ಡಿಜಿಟಲ್ ಬಳಕೆಯಾಗುತ್ತೆ. ಮೊಬೈಲ್ ನಲ್ಲೇ ಸಿನಿಮಾ ಶೂಟಿಂಗ್ ಮಾಡಬಹುದು. ಅಂತಹದರಲ್ಲಿ ಇವರೇ ಲೀಕ್ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ನಾನು ತುಂಬಾ ಜವಾಬ್ದಾರಿಯಿಂದ ಕೆಲಸ ಮಾಡುತ್ತೇವೆ. ನಮ್ಮ ಸಿನಿಮಾ ಎಂಬ ಕಾಳಜಿ ನಮಗೆ ಇರುತ್ತೆ'' - ಶ್ರೀನಿವಾಸು ರಾಜು, ನಿರ್ದೇಶಕ

  ಸೈಬರ್ ಕ್ರೈಂ ಗೆ ದೂರು

  ಸೈಬರ್ ಕ್ರೈಂ ಗೆ ದೂರು

  ''ದಂಡುಪಾಳ್ಯ-2 ತೆಲುಗು ಸಿನಿಮಾದ ಬಿಡುಗಡೆಗಾಗಿ ಹೊರಗೆ ಬಂದಿದ್ದೇನೆ. ಇನ್ನೆರೆಡು ದಿನದಲ್ಲಿ ಬೆಂಗಳೂರಿಗೆ ಬರುತ್ತೇನೆ. ಬಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇವೆ. ಸಂಜನಾ ಹಾಗೂ ನಾನು ಜಂಟಿ ಸುದ್ದಿಗೋಷ್ಠಿ ನಡೆಸುತ್ತೇವೆ. ತನಿಖೆಗೆ ನಾವು ಸಹಕರಿಸುತ್ತೇವೆ'' - ಶ್ರೀನಿವಾಸು ರಾಜು, ನಿರ್ದೇಶಕ

  English summary
  Director Srinivasu Raju Talk About Sanjjanaa Galrani Controversy In 'Dandupalya 2' Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X