ಪಕ್ಕಾ ಮಾಸ್ ಸಿನಿಮಾವಾಗಿ ಬರ್ತಾಯಿದೆ 'ಕಿರಗೂರಿನ ಗಯ್ಯಾಳಿಗಳು'
ಖ್ಯಾತ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಕಾದಂಬರಿಯನ್ನು ನಿರ್ದೇಶಕಿ ಸುಮನಾ ಕಿತ್ತೂರು ಅವರು ಹಾಗೆ ತೆರೆ ಮೇಲೆ ಕಲರ್ ಫುಲ್ ಆಗಿ ಹೊರತಂದಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.
ನಿರ್ದೇಶಕಿ ಸುಮನಾ ಕಿತ್ತೂರು ಅವರು ಆಕ್ಷನ್-ಕಟ್ ಹೇಳಿರುವ 'ಕಿರಗೂರಿನ ಗಯ್ಯಾಳಿಗಳು' ಚಿತ್ರಕ್ಕೆ ಸುಮನಾ ಅವರ ಗಾಡ್ ಫಾದರ್ ಆಗಿರುವ ಖ್ಯಾತ ಬರಹಗಾರ ಕಮ್ ಕಲಾವಿದ ಅಗ್ನಿ ಶ್ರೀಧರ್ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.['ಕಿರಗೂರಿನ ಗಯ್ಯಾಳಿಗಳು' ನನಗೆ ಚೊಚ್ಚಲ ಚಿತ್ರ ಎಂದ ನಟಿ ಯಾರು?]

'ಎದೆಗಾರಿಕೆ' ಚಿತ್ರದ ಸಕ್ಸಸ್ ನಂತರ ಮತ್ತೊಮ್ಮೆ ಗಾಂಧಿನಗರಕ್ಕೆ ವಾಪಸಾಗಿರುವ ಸುಮನಾ ಕಿತ್ತೂರು ಅವರು 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ಮೂಲಕ ಮತ್ತೆ ನಿರ್ದೇಶನದ ಕಡೆ ಹೊರಳಿದ್ದಾರೆ.
'ಅನೇಕ ಸಾಹಿತ್ಯಾಸಕ್ತರಿಗೆ ಈ ಕಥೆಯು ತಿಳಿದಿರುವುದರಿಂದ ನೋಡುಗರನ್ನು ಪ್ರಾಮಾಣಿಕವಾಗಿ ತಲುಪಬೇಕಾಗಿದೆ. ಪ್ರೇಕ್ಷಕರು ಕಾದಂಬರಿಯಲ್ಲಿ ಓದಿದ ಕಥೆಗೆ ಸಂಬಂಧಗೊಳಿಸಬೇಕಾಗಿರುವುದು ತುಂಬಾ ಅಗತ್ಯ'.

ಕಾದಂಬರಿ ಆಧರಿಸಿ ಅನೇಕ ಮಂದಿ ಮಾಡಿದ ಸಿನಿಮಾ ಅಷ್ಟಾಗಿ ಯಶಸ್ಸು ಗಳಿಸಿಲ್ಲ. ಹಾಗಾಗಿ 'ಕಿರಗೂರಿನ ಗಯ್ಯಾಳಿಗಳು ಸಿನಿಮಾ ತಯಾರಿಸೋದು ತುಂಬಾ ಸವಾಲಿನ ವಿಚಾರ ಆಗಿತ್ತು' ಎಂದು ಅಗ್ನಿ ಶ್ರೀಧರ್ ನುಡಿದಿದ್ದಾರೆ.[ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'! ]

'ಇದೊಂದು ಗ್ರಾಮೀಣ ಪ್ರದೇಶದ ಮಹಿಳಾ ಸಮುದಾಯಕ್ಕೆ ಕನ್ನಡಿ ಹಿಡಿದಂತಿರುವ ಚಿತ್ರವಾಗಿದ್ದರೂ ಕಥೆಯಲ್ಲಾಗಲಿ, ಪಾತ್ರದಲ್ಲಾಗಲಿ ಸ್ತ್ರೀವಾದದ ಬಗ್ಗೆ ಎಲ್ಲೂ ಹೇಳಲಿಲ್ಲ. ಆದರೆ ಸ್ತ್ರೀವಾದದ ವಿಷಯವನ್ನು ಸಿನಿಮಾದಲ್ಲಿ ಹೇಳಲು ಮುಖ್ಯವಾಗಿ ಕಾರಣ ಎಲ್ಲಾ ವರ್ಗದ ಜನರಿಗೆ ಮುಟ್ಟಲಿ ಎಂಬ ಉದ್ದೇಶದಿಂದ ಇದು ರಾಜಕೀಯದವರಿಗೂ ಅನ್ವಯಿಸುತ್ತದೆ. ಎಂದು ಸಂಬಾಷಣೆಗಾರ ಅಗ್ನಿ ಶ್ರೀಧರ್ ಹೇಳುತ್ತಾರೆ.

ಈಗಾಗಲೇ ಚಿತ್ರದ ಬಹುತೇಕ ಎಲ್ಲಾ ಕೆಲಸಗಳು ಸಂಪೂರ್ಣಗೊಂಡು ಕೊನೆ ಹಂತಕ್ಕೆ ತಲುಪಿದ್ದು, ಮುಂದಿನ ತಿಂಗಳಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.
ಚಿತ್ರದಲ್ಲಿ ಹೆಣ್ಣುಮಕ್ಕಳ ದರ್ಬಾರ್ ಜೋರಾಗಿದ್ದು, 'ಸಿಂಪಲ್ ಹುಡುಗಿ' ಶ್ವೇತಾ ಶ್ರೀವಾತ್ಸವ್, ನಟಿ ಸುಕೃತಾ ವಾಗ್ಲೇ, ನಟಿ ಸೋನು, ನಟಿ ಮಾನಸ ಜೋಷಿ, ಹಿರಿಯ ನಟಿ ಬಿ.ಜಯಶ್ರೀ, ಮುಖ್ಯ ಪಾತ್ರದಲ್ಲಿ ಮಿಂಚಿದರೆ, ನಟ ಕಿಶೋರ್, ನಟ ಯೋಗೇಶ್, ನಟ ರವಿಶಂಕರ್ ಗೌಡ, ನಟ ಅಚ್ಯುತ್ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


Click it and Unblock the Notifications











